ವೀಕೆಂಡ್‌ನಲ್ಲಿ ಪವರ್ ಕಟ್: ನಾಳೆ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ
ಬೆಂಗಳೂರು, ಜುಲೈ 22: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ನಾಳೆ(ಜುಲೈ 23) ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಯುವುದರಿಂದ ನಗರದ ಹಲವು ಭಾಗಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನ ಗಿಡನ ಕೋನೇನಹಳ್ಳಿ, ಉಪಕಾರ ಲೇಔಟ್ ಸೇರಿದಂತೆ ಬ್ಯಾಡರಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಸುಂಕದಕಟ್ಟೆ, ಹೇರೋಹಳ್ಳಿ, ಕೆಂಪೇಗೌಡ ನಗರ, ಗೊಲ್ಲರಹಟ್ಟಿ, ತುಂಗಾನಗರ, ಹೊಸಳ್ಳಿ, ಅನ್ನಪೂರ್ಣೇಶ್ವರಿ ನಗರ, ಶಂಕ್ರಪ್ಪ, ಕೈಗಾರಿಕಾ ಪದೇಶ, ಹೆಗ್ಗನಹಳ್ಳಿ, ಬಿಇಎಲ್ 2ನೇ ಹಂತ, ಅಂಜನಾನಗರದಲ್ಲಿ ನಾಳೆ((ಜುಲೈ 23) ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ವರದಿಯಾಗಿದೆ.

ಹಾವೇರಿಯಲ್ಲಿ ಇಂದು ವಿದ್ಯುತ್ ವ್ಯತ್ಯಯ
ಹಾವೇರಿಯ ಗುತ್ತಲ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಗುತ್ತಲ 11 ಕೆವಿ ಮಾರ್ಗದಲ್ಲಿ ಜುಲೈ 22ರಂದು ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಭಾಗದ ಕೆಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಗುತ್ತಲ ಪಟ್ಟಣ, ಕಂಚಾರಗಟ್ಟಿ, ಕುರಗುಂದ, ತಿಮ್ಮಾಪೂರ, ಭರಡಿ, ಹಾವನೂರ, ಹರಳಹಳ್ಳಿ, ಹಂಸಿ, ಶಾಖಾರ ಮತ್ತು ಬಸಾಪುರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications