ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಪಕ್ಕ ಭೂಮಿ ಹೊಂದಿರುವವರು ಪುಣ್ಯವಂತರು; ಕರ್ನಾಟಕದ ಯಾವೆಲ್ಲಾ ಜಿಲ್ಲೆಯವರಿಗೆ ಉಪಯೋಗ?

Bengaluru-Chennai Expressway: ಭಾರತದಲ್ಲಿ ಇದೇ ವರ್ಷ ಉದ್ಘಾಟನೆ ಆಗಲಿರುವ ಬಹುನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕೂಡ ಒಂದಾಗಿದೆ. ಈಗಾಗಲೇ ಕರ್ನಾಟಕ ಭಾಗದಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಕ್ತಯವಾಗಿದೆ. ಇನ್ನು ಈ ಹೆದ್ದಾರಿ ಕರ್ನಾಟಕದ ಯಾವೆಲ್ಲ ಜಿಲ್ಲೆಗಳಲ್ಲಿ ಹಾದುಹೋಗಲಿದೆ ಹಾಗೂ ಇದರಿಂದ ರಾಜ್ಯದ ಯಾವೆಲ್ಲಾ ಭಾಗಗಳಲ್ಲಿ ಆಸ್ತಿಗೆ ಬೇಡಿಕೆ ಹೆಚ್ಚಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಸಾಮಾನ್ಯ ಜಿಲ್ಲಾ, ರಾಜ್ಯ ಹೆದ್ದಾರಿ ಪಕ್ಕದ ಭೂಮಿಗೆ ಚಿನ್ನದ ಬೆಲೆ ಇರುತ್ತದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಭೂಮಿ ಹೊಂದಿರುವವರು ಕೋಟ್ಯಾಧಿಪತಿಗಳು ಆಗುವುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ಈ ಭಾಗದ ಭೂಮಿಗೆ ಅಷ್ಟರ ಮಟ್ಟಿಗೆ ಬೆಲೆ ಬಂದುಬಿಡುತ್ತದೆ. ಅದರಲ್ಲೂ ಹೆದ್ದಾರಿ ಪೂರ್ಣಗೊಂಡರೆ ಅಕ್ಕ ಪಕ್ಕದಲ್ಲಿನ ಜಿಲ್ಲೆಗಳು, ಊರುಗಳಲ್ಲಿಯೂ ಆಸ್ತಿ ದರ ಗಗನ್ನಕ್ಕೇರಿಬಿಡುತ್ತದೆ.

Land price will increase in Karnataka s these districts by Bengaluru-Chennai Expressway

ಇನ್ನೂ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಈಗಾಗಲೇ ಕರ್ನಾಟಕದಲ್ಲಿ ಬಹುತೇಕ ಪೂರ್ಣವಾಗಿದ್ದು, 71 ಕಿಲೋ ಮೀಟರ್ ಸಂಚಾರಕ್ಕೆ ಮುಕ್ತವಾಗಿದೆ. ಎಕ್ಸ್‌ಪ್ರೆಸ್‌ವೇ ಸುತ್ತಮುತ್ತಲಿನ ಸ್ಥಳೀಯರು ಮತ್ತು ರಸ್ತೆಯ ಕೊನೆಯವರೆಗೆ ಮತ್ತು ಹಿಂತಿರುಗುವವರೆಗೆ ಲಾಂಗ್ ಡ್ರೈವ್‌ಗೆ ಈ ದ್ದಾರಿಯನ್ನು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹೆದ್ದಾರಿ ನಿರ್ಮಾಣದಿಂದ ಕರ್ನಾಟಕಕ್ಕೆ ಹಲವು ಉಪಯೋಗಗಳಾಗಲಿವೆ. ಈಗಾಗಲೇ ಇಲ್ಲಿನ ಅಕ್ಕಪಕ್ಕದ ಆಸ್ತಿ, ಭೂಮಿ ಮೌಲ್ಯ ಗಗನಕ್ಕೇರಿಬಿಟ್ಟಿದೆ ಎನ್ನುವ ಮಾಹಿತಿಯಿದೆ. ಕಾಮಗಾರಿ ಪೂರ್ತಿಯಾದರೆ ಈ ಭಾಗದಲ್ಲಿನ ಭೂಮಿಯ ಬೆಲೆ ಕೊಂಡುಕೊಳ್ಳಲಾರದಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಎಕ್ಸ್‌ಪ್ರೆಸ್‌ ವೇ ಹೊಸಕೋಟೆ, ಮುಳಬಾಗಲು, ಚಿತ್ತೂರು, ರಾಣಿಪೇಟೆ, ವಾಲಾಜಪೇಟೆ, ಶ್ರೀಪೆರಂಬದೂರು, ಪೊನ್ನಮಲ್ಲೆ, ಕೋಯಂಬೆಡು ಮೂಲಕ ಹಾದುಹೋಗಲಿದೆ. ಆದ್ದರಿಂದ ಈ ಭಾಗಗಳ ಆಸ್ತಿ, ಭೂಮಿಗೆ ಚಿನ್ನದ ಬೆಲೆ ಬಂದಿದೆ. ಇನ್ನೂ ಕಾಮಗಾರಿ ಪೂರ್ಣಗೊಂಡೆ, ಮತ್ತಷ್ಟು ದರ ಏರಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹೆದ್ದಾರಿಯು ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಿಂದ ಆರಂಭವಾಗಿ ಮಾಲೂರು, ಬಂಗಾರಪೇಟೆ, ಕೋಲಾರ, ಪಲಮನೇರ್, ಚಿತ್ತೂರು, ರಾಣಿಪೇಟೆ ಪಟ್ಟಣಗಳ ಮೂಲಕ ಸಾಗಲಿದ್ದು, ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಶ್ರೀಪೆರಂಬದೂರಿನಲ್ಲಿ ಕೊನೆಗೊಳ್ಳಲಿದೆ. ಇಲ್ಲಿಯವರೆಗೂ ಕೂಡ ಭೂಮಿಗೆ ಈಗಲೇ ಬಂಗಾರದ ಬೆಲೆ ಇದೆ ಎನ್ನುವ ಮಾಹಿತಿ ಇದೆ. ಇನ್ನೂ ಮುಂದಿನ ದಿನಗಳಲ್ಲಿ ಕೊಂಡುಕೊಳ್ಳಲಾರದಷ್ಟು ದರ ಏರಿಕೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಈ ಭಾಗದಲ್ಲಿ ಈಗಾಗಲೇ ಭೂಮಿ ಖರೀದಿ ಮಾಡಿದವರು ಹಾಗೂ ಮಾಡುವವರು ಪುಣ್ಯವಂತರು ಎನ್ನಲಾಗುತ್ತಿದೆ.

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. 60 ಕಿಲೋ ಮೀಟರ್‌ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಆಗಸ್ಟ್ 2025ರ ವೇಳೆಗೆ ಸಂಪೂರ್ಣ ಕಾರ್ಯನಿರ್ವಹಿಸಲಿದೆ. 17,900 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಎಕ್ಸ್‌ಪ್ರೆಸ್‌ ವೇ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಬೆಂಗಳೂರು ಮತ್ತು ಚೆನ್ನೈ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 6 ಗಂಟೆಗಳಿಂದ ಕೇವಲ 3 ಗಂಟೆಗೆ ಇಳಿಕೆಯಾಗಲಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಅನ್ನು ವಾಹನಗಳು 120 ಕಿಲೋ ಮೀಟರ್‌ವರೆಗೆ ಗರಿಷ್ಠ ವೇಗದಲ್ಲೊ ಸಂಚರಿಸುವಂತೆ ನಿರ್ಮಾಣ ಮಾಡಲಾಗಿದೆ. 260 ಕಿಲೋ ಮೀಟರ್ ವ್ಯಾಪ್ತಿ ಹೊಂದಿರುವ ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹಾದುಹೋಗಲಿದೆ. ಮಾಲೂರು, ಬಂಗಾರಪೇಟೆ ಮತ್ತು ಬೇತಮಂಗಲದಲ್ಲಿ ಪ್ರಮುಖ ನಿರ್ಗಮನ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಮೊದಲ ಪ್ಯಾಕೇಜ್ ಹೊಸಕೋಟೆ-ಮಾಲೂರು ನಡುವೆ 27.1 ಕಿಲೋ ಮೀಟರ್, ಎರಡನೇಯದಾಗಿ ಮಾಲೂರು-ಬಂಗಾರಪೇಟೆ 27.1 ಕಿಲೋ ಮೀಟರ್ ಮತ್ತು ಮೂರನೇಯದಾಗಿ ಬಂಗಾರಪೇಟೆ-ಬೇತಮಂಗಲ ನಡುವೆ 17.5 ಕಿಲೋ ಮೀಟರ್‌ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+