Namma Metro Updates: 'ನಮ್ಮ ಮೆಟ್ರೋ' 3ನೇ ಹಂತದ ಯೋಜನೆಗೆ ಸರ್ಕಾರ ಗ್ನೀನ್ ಸಿಗ್ನಲ್
ಬೆಂಗಳೂರು, ಮಾರ್ಚ್ 14: ಮೂರು ಹಂತಗಳಲ್ಲಿ ನಿರ್ಮಾಣಕ್ಕೆ ಸಿದ್ಧವಾಗಿರುವ ನಮ್ಮ ಮೆಟ್ರೊ 3ನೇ ಹಂತದ ಕಾಮಗಾರಿ ಯೋಜನೆಗೆ (Namma Metro phase 3 project) ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಸಾಮರ್ಥ್ಯದ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಆರಂಭಕ್ಕೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಬೆಂಗಳೂರಿನಲ್ಲಿ ಸಾರಿಗೆ ಅಗತ್ಯತೆ ಹೆಚ್ಚಾಗುತ್ತಿದೆ. ಇದರೊಂದಿಗೆ ಸಂಚಾರ ದಟ್ಟಣೆಯು ಏರಿಕೆ ಆಗುತ್ತಿದೆ. ಟ್ರಾಫಿಕ್ ಎಂಬುದು ದೊಡ್ಡ ಸಮಸ್ಯೆ ಆಗಿದ್ದು, ಇದರ ನಿಯಂತ್ರಣಕ್ಕೆ ನಮ್ಮ ಮೆಟ್ರೋ ಯೋಜನೆ, ಮೆಟ್ರೋ ಬಳಕೆ ಒಂದೇ ಮಾರ್ಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಯೋಜನೆಯ ಅಂದಾಜು ವೆಚ್ಚದ ಮಾಹಿತಿ
ಬೆಂಗೂರಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಸರ್ಕಾರ ಸರ್ವಾನುಮತದಿಂದ ನೀಡಿದೆ. ಎರಡು ಮಾರ್ಗಗಳ ನಿರ್ಮಾನ ಕಾರ್ಯ ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ಸರ್ಕಾರ ಒಟ್ಟು 15,611 ಕೋಟಿ ರೂ. ವೆಚ್ಚ ವ್ಯಯಿಸಲು ತಿರ್ಮಾನಿಸಿದೆ.
ಜೆಪಿ ನಗರ, ಸಿಲ್ಕ್ ಬೋರ್ಡ್ನಿಂದ ಕೆಲಸ ನಡೆದಿದೆ. ಸಿಲ್ಕ್ ಬೋರ್ಡ್ನಿಂದ ಹೆಬ್ಬಾಳ ಮೇಲ್ಸೇತುವವರೆಗೆ ಬಂದಿದೆ. ಸುಮಾರು 35.5 ಕಿ.ಲೋ ಮೀಟರ್ವರೆಗೆ ಮೆಟ್ರೋ ಕಾಮಗಾರಿ ನಡೆಯಲಿದೆ ಎಂದು ಅವರು ವಿವರಿಸಿದರು.

ಒಟ್ಟು 81.12 ಕಿ.ಮೀ ಯೋಜನೆ
ನಮ್ಮ ಮೆಟ್ರೊ ಮೂರನೇ ಹಂತದ ಕಾಮಗಾರಿ ಒಟ್ಟು 81.12 ಕಿಲೋ ಮೀಟರ್ ಉದ್ದವಿದೆ. ಈ ಯೋಜನೆಯು 03 ಕಾರಿಡಾರ್ ವಿಭಾಗಗಳಾಗಿ ನಿರ್ಮಾಣವಾಗುತ್ತಿದೆ. ಅದರಲ್ಲಿ ಜೆಪಿನಗರದಿಂದ ಕೆಂಪಾಪುರವರೆಗೆ ಒಟ್ಟು 32 ಕಿಮೀ ಮೊದಲ ಕಾರಿಡಾರ್ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಇದರಲ್ಲಿ ಒಟ್ಟು 22 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.
ಇನ್ನೂ ಇದೇ ಯೋಜನೆಯಲ್ಲಿ ಎರಡನೇ ಕಾರಿಡಾರ್ ಹೊಸಹಳ್ಳಿ ಮಾಗಡಿರಸ್ತೆಯಿಂದ ಕಡುಬಗೆರೆ ವರೆಗೆ ಇದ್ದು, ಇದರಡಿ ಒಟ್ಟು 09 ನಿಲ್ದಾಣಗಳನ್ನು ನಿರ್ಮಿಸಲು ಬಿಎಂಆರ್‌ಸಿಎಲ್ ಪ್ರಸ್ತಾಪಿಸಿದೆ. ಸರ್ಜಾರಪುರದಿಂದ-ಹೆಬ್ಬಾಳವರೆಗಿನ 37 ಕಿಲೋ ಮೀಟರ್ ವ್ಯಾಪ್ತಿಯ ಮಾರ್ಗವು ಮೂರನೇ ಕಾರಿಡಾರ್ ಆಗಿದೆ.
ಈ ಹಿಂದೆ ರಾಜ್ಯ ಸರ್ಕಾರವು ಮೂರನೇ ಹಂತದ ಮೆಟ್ರೋ ಯೋಜನೆಗೆ ಅನುಮತಿ ಕೋರಿ ಕೇಂದ್ರಕ್ಕೆ ಕಳುಹಿಸಿತ್ತು. ಬಳಿಕ ಅಲ್ಲಿಂದಲೂ ಒಪ್ಪಿಗೆ ಪಡೆಯಲಾಯಿತು.
ನಮ್ಮ ಮೆಟ್ರೋ ಹಳದಿ ರೇಖೆ ಕಾರ್ಯಾಚರಣೆಗೂ ಮೊದಲೇ ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿ ಆರಂಭಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಈ ಮೂಲಕ ಬೆಂಗಳೂರಿಗರು ನಗರಾದ್ಯಂತ ಎಲ್ಲಿ ಬೇಕಾದರೂ ನಮ್ಮ ಮೆಟ್ರೋದಲ್ಲಿ ಸಂಚರಿಸುವ ಕಾಲ ದೂರ ಉಳಿದಿಲ್ಲ ಎಂಬುದು ಇದರಿಂದ ತಿಳಿಯಿಲಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೊಸ ಮೆಟ್ರೋ ಯೋಜನೆ, ವಿಸ್ತರಣೆ ಮಾರ್ಗಗಳು ಪೂರ್ಣಗೊಳ್ಳಲಿವೆ.












Click it and Unblock the Notifications