Get Updates
Get notified of breaking news, exclusive insights, and must-see stories!

Malleshwaram Assembly Constituency Analysis: ಡಾ.ಅಶ್ವಥ್ ನಾರಾಯಣ ನಾಗಾಲೋಟಕ್ಕೆ ಕಾಂಗ್ರೆಸ್ ಬ್ರೇಕ್? ವರದಿ, ವಿಶ್ಲೇಷಣೆ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಅಸೆಂಬ್ಲಿ ಕ್ಷೇತ್ರ ಮಲ್ಲೇಶ್ವರ. ಸತತವಾಗಿ ಬಿಜೆಪಿಯ ಡಾ.ಅಶ್ವಥ್ ನಾರಾಯಣ ಇಲ್ಲಿಂದ ಗೆದ್ದು ಬರುತ್ತಿದ್ದಾರೆ. ಈ ಬಾರಿಯೂ ಅದರ ಪುನರಾವರ್ತನೆ ಆಗಲಿದೆಯಾ? ಇದಕ್ಕೆ ಸಂಬಂಧಿಸಿದ ವರದಿ, ವಿಶ್ಲೇಷಣೆ..

ಹಳೇ ಬೆಂಗಳೂರಿನ ಬಡಾವಣೆಗಳಲ್ಲಿ ಮಲ್ಲೇಶ್ವರ ಕೂಡಾ ಒಂದು. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಿಜೆಪಿಯ ಡಾ.ಅಶ್ವಥ್ ನಾರಾಯಣ ಮತ್ತೆ ಬಿಜೆಪಿಯಿಂದ ಮತ್ತು ಇದೇ ಕ್ಷೇತ್ರದಿಂದ ತಮ್ಮ ರಾಜಕೀಯ ಭವಿಷ್ಯವನ್ನು ಬರೆಯಲು ಮುಂದಾಗಿದ್ದಾರೆ.

ಮಲ್ಲೇಶ್ವರ, ಮಧ್ಯಮ ಮತ್ತು ಕೆಳ ವರ್ಗದವರು ಹೆಚ್ಚಾಗಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಇನ್ನೊಂದು ಕ್ಷೇತ್ರವಾಗಿದೆ. ಜಾತಿ ಸಮೀಕರಣವನ್ನು ಪ್ರಮುಖವಾಗಿ ಲೆಕ್ಕಹಾಕುವ ಕ್ಷೇತ್ರ ಇದು ಎಂದರೆ ತಪ್ಪಾಗಲಾರದು. ಟ್ರಾಫಿಕ್, ಪಾರ್ಕಿಂಗ್ ಈ ಕ್ಷೇತ್ರದ ಪ್ರಮುಖ ಸಮಸ್ಯೆಗಳಲ್ಲೊಂದು. ಮೆಜೆಸ್ಟಿಕ್‌ಗೆ ಸಮೀಪದಲ್ಲಿರುವ ಮತ್ತೊಂದು ಕ್ಷೇತ್ರ ಇದಾಗಿರುವುದರಿಂದ ಬೆಂಗಳೂರಿನ ಇತರ ಭಾಗದಿಂದ ಇಲ್ಲಿಗೆ ಸಂಪರ್ಕದ ಸಮಸ್ಯೆ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ.

ಈ ಕ್ಷೇತ್ರದ ಮತದಾರರು ಬಹುಪಾಲು ವಿದ್ಯಾವಂತರು. ಧಾರ್ಮಿಕ ಮತ್ತು ಸಂಸ್ಕೃತಿಯ ಸಮ್ಮಿಲನದಂತಿರುವ ಈ ಕ್ಷೇತ್ರ ಶಾಪ್ಪಿಂಗಿಗೆ ಕೂಡಾ ಹೆಸರುವಾಸಿ. ಚೌಡಯ್ಯ ಸ್ಮಾರಕ, ಸ್ಯಾಂಕಿ ಕೆರೆ, ಕಾಡು ಮಲ್ಲೇಶ್ವರ ದೇವಾಲಯ, ಸಾಯಿಬಾಬ ಮಂದಿರ ಮುಂತಾದವು ಇರುವುದು ಈ ಕ್ಷೇತ್ರದಲ್ಲೇ. ತನ್ನ ಪಾರಂಪರಿಕ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತಲೇ ಆಧುನಿಕತೆಗೆ ತೆರೆದುಕೊಂಡಿರುವ ಕ್ಷೇತ್ರ ಮಲ್ಲೇಶ್ವರ.

Malleshwaram Assembly Constituency Analysis : Tough Fight For BJP

ಮಲ್ಲೇಶ್ವರ ಕ್ಷೇತ್ರದ ಹಾಲೀ ಶಾಸಕ ಮತ್ತು ಸಚಿವರೂ ಆಗಿರುವ ಡಾ. ಅಶ್ವಥ್ ನಾರಾಯಣ ಹಲವು ಕಾರಣಕ್ಕಾಗಿ ಸದ್ಯ ಸುದ್ದಿಯಲ್ಲಿದ್ದಾರೆ. ರಾಮನಗರ ಜಿಲ್ಲಾ ಉಸ್ತುವಾರಿಯಾದ ನಂತರ ಇವರ ಮತ್ತು ಡಿಕೆಶಿ ಕುಟುಂಬದ ನಡುವಿನ ಮನಸ್ತಾಪ ಹೆಚ್ಚು ಸುದ್ದಿಯಾಗುತ್ತಿದೆ.

ಇತ್ತೀಚೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಬಗ್ಗೆ ಅಶ್ವಥ್ ನಾರಾಯಣ ನೀಡಿದ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ವಪಕ್ಷೀಯರೇ ಇದನ್ನು ಖಂಡಿಸಿದ್ದರು. ಕೆಲವು ದಿನಗಳ ಹಿಂದೆ ರಾಮನಗರದಲ್ಲಿ ಬಿಜೆಪಿಯವರ ಗೋಬ್ಯಾಕ್ ಅಭಿಯಾನದಿಂದ ಇವರು ಮುಜುಗರಕ್ಕೀಡಾಗಿದ್ದರು.

ಕಳೆದ ಬಾರಿಯ ಅಂದರೆ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಅಶ್ವಥ್ ನಾರಾಯಣ ನಿರಾಯಾಸ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಕೆಂಗಲ್ ಶ್ರೀಪಾದ ರೇಣು ಅವರಿಗೆ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ಅನೌನ್ಸ್ ಮಾಡಿತ್ತು. 54ಸಾವಿರ ಮತಗಳ ಅಂತರದಿಂದ ಅಶ್ವಥ್ ನಾರಾಯಣ ಗೆಲುವನ್ನು ಸಾಧಿಸಿದ್ದರು.

Malleshwaram Assembly Constituency Analysis : Tough Fight For BJP

2008ರಲ್ಲಿ ಎಂ.ಆರ್.ಸೀತಾರಾಂ ಮತ್ತು 2013ರಲ್ಲಿ ಬಿ.ಕೆ.ಶಿವರಾಂ ಅವರು ಡಾ.ಅಶ್ವಥ್ ನಾರಾಯಣ ವಿರುದ್ದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ಸಿಗೆ ಅಷ್ಟಾಗಿ ನೆಲೆಯಿಲ್ಲ, ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವೋಟ್ ಶೇರಿಂಗ್ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ಸಿಗನಲ್ಲಿ ಈ ಬಾರಿ ಟಿಕೆಟ್ ಗಾಗಿ ಪೈಪೋಟಿ ಜೋರಾಗಿದೆ. ಆದರೆ, ಬಿಜೆಪಿಯ ವಿಚಾರದಲ್ಲಿ ಅಶ್ವಥ್ ನಾರಾಯಣ ತಮ್ಮ ಕ್ಷೇತ್ರವನ್ನು ಗಟ್ಟಿ ಮಾಡಿಕೊಂಡಿದ್ದಾರೆ ಎನ್ನಬಹುದು. ಆದರೆ, ಬಿಜೆಪಿ ಇಲ್ಲಿ ಬೆಳೆಯಲು ಪ್ರಮುಖ ಕಾರಣಕರ್ತರಾದವರೊಬ್ಬರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕ್ಷೇತ್ರದ ವ್ಯಾಪ್ತಿಯ ಬಿಬಿಎಂಪಿ ವಾರ್ಡುಗಳು: ಅರಮನೆ ನಗರ, ಮತ್ತೀಕೆರೆ, ಮಲ್ಲೇಶ್ವರ, ರಾಜಮಹಲ್, ಕಾಡುಮಲ್ಲೇಶ್ವರ, ಸುಬ್ರಮಣ್ಯ ನಗರ, ಗಾಯತ್ರಿನಗರ.

ಕ್ಷೇತ್ರದಲ್ಲಿನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು:

ಹಾಲೀ ಶಾಸಕ ಡಾ.ಅಶ್ವಥ್ ನಾರಾಯಣ

Malleshwaram Assembly Constituency Analysis : Tough Fight For BJP

ಕ್ಷೇತ್ರದಲ್ಲಿನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು:

ಕೆಂಗಲ್ ಶ್ರೀಪಾದರೇಣು
ಕಿರಣ ಫೌಂಡೇಶನ್, ಈಸ್ಟ್ ವೆಸ್ಟ್ ಗ್ರೂಪ್ ಶಿಕ್ಷಣ ಸಂಸ್ಥೆಯ ರಶ್ಮಿ ರವಿಕಿರಣ್
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಫಿಯುಲ್ಲಾ
ಮಾಜಿ ಮೇಯರ್ ಲಕ್ಕಣ್ಣ ಅವರ ಪುತ್ರ ಗಿರೀಶ್ ಲಕ್ಕಣ್ಣ
ಅನೂಪ್ ಅಯ್ಯಂಗಾರ್

ಕ್ಷೇತ್ರದ ಮತದಾರ ವಿವರ (2018ರ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ)

ಕ್ಷೇತ್ರದ ಕೋಡ್: 157
ಪುರುಷರು: 1,10,484
ಮಹಿಳೆಯರು: 1,08,438
ಇತರರು: 09
ಒಟ್ಟು: 2,18,931

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+