ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಸಚಿವ ಸ್ಥಾನ ಬಯಸಿಲ್ಲ, ಸಹಿ ಅಭಿಯಾನ ಹೆದರಲ್ಲ: ಕಾಗೋಡು

By Mahesh
|
Google Oneindia Kannada News

ಬೆಂಗಳೂರು, ಜ.8: ಕಾಂಗ್ರೆಸ್ಸಿನ ಇಬ್ಬರು ಹಿರಿಯ ನಾಯಕರ ನಡುವಿನ ವಾಕ್ಸಮರವನ್ನು ಇತರೆ ಮುಖಂಡರು ಮುಖ ಪ್ರೇಕ್ಷಕರಂತೆ ನೋಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನನ್ನ ಕಾರ್ಯವೈಖರಿಯನ್ನು ಬದಲಾಯಿಸುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರದ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ್ ನಾಯಕ ಮಲ್ಲಿಕಾರ್ಜುನ ಖರ್ಗೆ, ನಾನು ವೈಯಕ್ತಿಕವಾಗಿ ಯಾರನ್ನೂ ಬೆಂಬಲಿಸುವುದಿಲ್ಲ, ಕಾಂಗ್ರೆಸ್ ಪಕ್ಷ ಸುಭದ್ರವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಇಂಥ ವಿಷಯಗಳನ್ನು ದೆಹಲಿ ತನಕ ಹೋಗಲು ಬಿಡಬಾರದಿತ್ತು ಎಂದಿದ್ದಾರೆ. [ಪೂಜಾರಿ V/S ಕಾಗೋಡು, ಮುಗಿಯದ ಮಾತಿನ ಸಮರ]

My job is to alert the govt, not interested in Ministership

ಕಾಗೋಡು ತಿಮ್ಮಪ್ಪ ಪ್ರತಿಕ್ರಿಯೆ: ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ನನಗೆ ಸಚಿವ ಸ್ಥಾನದ ಆಸೆಯಿಲ್ಲ. ಸರ್ಕಾರ ತಪ್ಪು ದಾರಿಗೆ ಹೋದಾಗ ಎಚ್ಚರಿಸುವುದು ಸ್ಪೀಕರ್ ಆಗಿ ನನ್ನ ಕರ್ತವ್ಯವಾಗಿದೆ. ನನ್ನ ವಿರುದ್ಧ ದೆಹಲಿಗೆ ಸಹಿ ಅಭಿಯಾನ ಮೂಲಕ ದೂರು ನೀಡಿರುವುದಕ್ಕೆ ಹೆದರುವುದಿಲ್ಲ.

ನಾನು ಯಾರ ವಿರುದ್ಧವೂ ಆರೋಪ ಮಾಡಿಲ್ಲ. ಸರ್ಕಾರದ ಆಡಳಿತ ಪಾರದರ್ಶಕವಾಗಿರಬೇಕು ಎಂಬುದು ನನ್ನ ಉದ್ದೇಶ. ನನ್ನ ಕಾರ್ಯ ವೈಖರಿ ಬಗ್ಗೆ ವಿರೋಧ ವ್ಯಕ್ತಪಡಿಸುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಇದಕ್ಕೂ ಮುನ್ನ ಜನಾರ್ದನ ಪೂಜಾರಿ ಯಾರು? ಗೊತ್ತಿಲ್ಲ ಎಂದು ಹೇಳಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಹೇಳಿಕೆಗೆ ಪೂಜಾರಿ ತಿರುಗೇಟು ನೀಡಿದ್ದು, 'ಕಾಗೋಡು ತಿಮ್ಮಪ್ಪ ಅವರು ಅರಳು ಮರಳು ರೋಗದಿಂದ ಬಳಲುತ್ತಿದ್ದಾರೆ' ಎಂದು ಲೇವಡಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Defending his outbursts against the state government, Speaker of the Assembly, Kagodu Thimmappa, on Thursday maintained that he would not be deterred by the signature campaign launched by some ruling Congress legislators and he is not interested in getting ministership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X