K.Shivaram: ಅಂದುಕೊಂಡ ಕನಸ್ಸುಗಳೆಲ್ಲ ಈಡೇರಿದ್ವು ಒಂದನ್ನ ಬಿಟ್ಟು.. ಆ ಮಹದಾಸೆ ಯಾವ್ದು?-ಮಾಹಿತಿ
ಚಾಮರಾಜನಗರ, ಫೆಬ್ರವರಿ, 29: ಕನ್ನಡದಲ್ಲೇ ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ ಕೆ.ಶಿವರಾಂ ಅನಾರೋಗ್ಯ ಆಸ್ಪತ್ರೆ ಸೇರಿದ್ದಾರೆ. ನಿಜಕ್ಕೂ ಅವರ ಬದುಕು ಮಾತ್ರ ಯುವಕರಿಗೆ ಸ್ಪೂರ್ತಿಯಾಗಿದೆ. ಹಾಗಾದರೆ ಅವರು ಬೆಳೆದುಬಂದ ಹಾದಿ ಹೇಗಿತ್ತು, ಅಂದುಕೊಂಡ 4 ಕನಸ್ಸುಗಳಲ್ಲಿ ಮೂರನ್ನು ಈಡೇಸಿಕೊಂಡಿದ್ದೇಗೆ? ಹಾಗೂ ಈಡೇರದ ಆ 4ನೇ ಮಹದಾಸೆ ಯಾವ್ದು ಎಂದು ಇಲ್ಲಿ ತಿಳಿಯಿರಿ.
ಆರಂಭಿಕ ಜೀವನ: ರೇಷ್ಮೆನಗರಿ ರಾಮನಗರ ಜಿಲ್ಲೆಯ ಬಿಡದಿ ಬಳಿಯ ಊರುಗಹಳ್ಳಿಯಲ್ಲಿ ಜನಿಸಿದ ಶಿವರಾಂ ಅವರ ಆರಂಭಿಕ ಬದುಕು ಕಡುಬಡತನದಿಂದಲೇ ಕೂಡಿತ್ತು. ಊರಿನಲ್ಲಿ ಆರಂಭಿಕ ಶಿಕ್ಷಣ ಮುಗಿಸಿ ಪ್ರೌಢಶಾಲಾ ಶಿಕ್ಷಣಕ್ಕೆಂದು ಬೆಂಗಳೂರಿಗೆ ಬಂದು ಹಾಸ್ಟೆಲ್‌ನಲ್ಲಿ ಮಾಡಿಕೊಂಡು ಓದುತ್ತಿದ್ದರು. ಆದರೆ, SSLC ಯಲ್ಲಿ ಒಂದು ವಿಷಯದಲ್ಲಿ ಪಾಸ್ ಆಗಲಿಲ್ಲ. ಬಳಿಕ ಪಾಸಾಗಲೇಬೇಕೆಂದು ಛಲ ತೊಟ್ಟು ಪೂರಕ ಪರೀಕ್ಷೆಯಲ್ಲಿ ಬರೆದು ಎಸ್ಎಸ್‌ಎಲ್ಸಿಯಲ್ಲಿ ತೇರ್ಗಡೆ ಹೊಂದಿದ್ದರು.

ಸ್ಟೆನೊದಲ್ಲಿ ರ‍್ಯಾಂಕ್-ಸೆಂಟ್ರಲ್ ಜೈಲಲ್ಲಿ ಕೆಲಸ: ಎಸ್ಎಸ್ಎಲ್ಸಿ ಪಾಸಾದ ಬಳಿಕ ಟೈಪರೇಟಿಂಗ್ ಹಾಗೂ ಸ್ಟೆನೋಗ್ರಫಿ ತರಬೇತಿ ಪಡೆದು ಕನ್ನಡ ಶೀಘ್ರಲಿಪಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಶಿವರಾಂ ಅವರಿಗೆ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಶೀಘ್ರಲಿಪಿಕಾರನ ಹುದ್ದೆ ದೊರಕಿತು. ಈ ಹುದ್ದೆ ಸಿಗುವ ಮುನ್ನ ಶಿವರಾಂ ಕಬ್ಬಿಣ ಬಡಿಯುವ ಕೆಲಸ, ಮಗ್ಗದ ಕೆಲಸವನ್ನೂ ಮಾಡಿದ್ದರು.
ಸೆಂಟ್ರಲ್ ಜೈಲಿನಲ್ಲಿ ಹುದ್ದೆಯಲ್ಲಿ ಇರಬೇಕಾದರೇ ಐಎಎಸ್ , ಐಪಿಎಸ್ ಪರೀಕ್ಷೆಗಳ ಬಗ್ಗೆ ಸ್ನೇಹಿತನಿಂದ ವಿಚಾರ ತಿಳಿದು ಹಗಲಿನಲ್ಲಿ ನೌಕರಿ ಮಾಡುತ್ತಾ ಸಂಜೆ ಕಾಲೇಜಿನ ಕಾಲೇಜು ಶಿಕ್ಷಣ ಮುಗಿಸಿ ಕೆಪಿಎಸ್ಸಿ ಪರೀಕ್ಷೆಯನ್ನೂ ಬರೆದು ಡಿವೈಎಸ್ಪಿ ಹುದ್ದೆ ಪಡೆದಿದ್ದರು. ಈ ನಡುವೆ ಕನ್ನಡದಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಶಿವರಾಂ ಅವರಿಗೆ ಕರ್ನಾಟಕದಲ್ಲೇ ಕೆಲಸ ಮಾಡುವ ಅದೃಷ್ಟವೂ ದೊರಕಿತ್ತು. ಜೊತೆಗೆ, ಬಣ್ಣದ (ಸಿನಿಮಾ ರಂಗ)ಲೋಕದಲ್ಲೂ ಮಿಂಚಿದರು.
ಸಂಸದನಾಗುವ ಕನಸು: 2019 ಹಾಗೂ ಈಗಿನ ಚುನಾವಣೆಯಲ್ಲೂ ಚಾಮರಾಜನಗರದ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಆಗಿದ್ದರು. 2019ರಲ್ಲಿ ಕ್ಷೇತ್ರದಲ್ಲಿ ನಿರಂತರ ಓಡಾಟ ನಡೆಸಿ ಚಾಮರಾಜನಗರದಲ್ಲಿ ಮನೆಯನ್ನೂ ಮಾಡಿ ಟಿಕೆಟ್ ಪಡೆಯಲು ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ, ಕೊನೇ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು.
ಈಗಿನ ಚುನಾವಣೆಯಲ್ಲೂ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿಕೊಂಡು ಓಡಾಟ ನಡೆಸಿದ್ದರು. ಈ ನಡುವೆ ಆರೋಗ್ಯ ಹದಗೆಟ್ಟಿದ್ದರೂ ಮುಖಂಡರ ಜೊತೆ ನಿರಂತರ ಫೋನ್ ಸಂಪರ್ಕ ಇಟ್ಟುಕೊಂಡಿದ್ದರು. ಐಎಎಸ್ ಅಧಿಕಾರಿಯಾಗುವ ಕನಸು, ಸಿನಿಮಾ ಹೀರೋ ಆಗುವ ಕನಸು ಈಡೇರಿದರೂ ಸಂಸದನಾಗುವ ಕನಸು ಮಾತ್ರ ಹಾಗೇ ಉಳಿದಿದೆ.
ಚಾಮರಾಜನಗರ ಜಿಲ್ಲೆಯಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿದ್ದ ಶಿವರಾಂ ದಲಿತರನ್ನು ಸಂಘಟನೆ ಮಾಡುವ ಮೂಲಕ ಗಮನ ಸೆಳೆದಿದ್ದರು. ಯುವಕರಿಗೆ ಸ್ಪೂರ್ತಿ ಮಾತುಗಳ ಮೂಲಕ ಹುರಿದುಂಬಿಸುವ ಕೆಲಸ ಮಾಡುತ್ತಿದ್ದರು. ಹೀಗೆ ಇಡೀ ರಾಜ್ಯದ ಗಮನ ಸೆಳೆದಿದ್ದರು ಕೆ.ಶಿವರಾಂ ಅವರು.












Click it and Unblock the Notifications