ಬಿಬಿಎಂಪಿ ಮೇಯರ್ ಪಟ್ಟಕ್ಕೆ ಜೆಡಿಎಸ್ ಬೇಡಿಕೆ, ಮೈತ್ರಿ ಮುಂದುವರೆಯುತ್ತಾ?

Recommended Video

      BBMP : congress Jds alliance breakup ? | Oneindia Kannada

      ಬೆಂಗಳೂರು, ಸೆಪ್ಟೆಂಬರ್ 01 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಭಂಗ ಉಂಟಾಗುವ ನಿರೀಕ್ಷೆ ಇದೆ. ಜೆಡಿಎಸ್ ಪಕ್ಷ ಮೇಯರ್ ಹುದ್ದೆಗೆ ಬೇಡಿಕೆ ಇಟ್ಟಿದ್ದು, ಕಾಂಗ್ರೆಸ್ ಮೇಯರ್ ಪಟ್ಟ ಕೇಳುವಷ್ಟು ಸದಸ್ಯರನ್ನು ಪಕ್ಷ ಹೊಂದಿಲ್ಲ ಎಂದು ಪ್ರತ್ಯುತ್ತರ ನೀಡಿದೆ.

      'ಬಿಬಿಎಂಪಿಯಲ್ಲಿ ಮುಂದಿನ ಅವಧಿಗೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮುಂದಿವರೆಸುವ ಅಗತ್ಯವೇನಿದೆ?' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರಶ್ನಿಸಿದ್ದರು. ಈಗ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು, 'ಈ ವರ್ಷ ಮೇಯರ್ ಪಟ್ಟ ನೀಡಿದರೆ ಮಾತ್ರ ಮೈತ್ರಿ ಮುಂದುವರೆಯಲಿದೆ' ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

      ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, 'ಮೇಯರ್ ಹುದ್ದೆ ಕೇಳಲು ಜೆಡಿಎಸ್‌ಗೆ ಸಂಖ್ಯೆ ಇಲ್ಲ' ಎಂದು ಹೇಳಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿರುವ ಶರವಣ ಅವರು, 'ಕಾಂಗ್ರೆಸ್‌ಗೂ ಸಂಖ್ಯಾಬಲವಿಲ್ಲ ಎಂಬುದನ್ನು ಮರೆಯಬಾರದು' ಎಂದು ಹೇಳಿದ್ದಾರೆ.

      ಬಿಬಿಎಂಪಿಯಲ್ಲಿ 2015ರಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ನಡೆಯುತ್ತಿದೆ. ಸದ್ಯದ ಮೇಯರ್ ಜಿ.ಪದ್ಮಾವತಿ (ಕಾಂಗ್ರೆಸ್), ಉಪ ಮೇಯರ್ ಎಂ.ಆನಂದ (ಜೆಡಿಎಸ್). ಮೂರು ಅವಧಿಗೆ ಕಾಂಗ್ರೆಸ್ ಪಕ್ಷದವರು ಮೇಯರ್ ಆಗಿದ್ದು, ಈ ಬಾರಿ ಜೆಡಿಎಸ್ ಮೇಯರ್ ಪಟ್ಟಕ್ಕಾಗಿ ಬೇಡಿಕೆ ಇಡುತ್ತಿದೆ.

      ದೇವೇಗೌಡರ ಅಸಮಾಧಾನ

      ದೇವೇಗೌಡರ ಅಸಮಾಧಾನ

      ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾತನಾಡಿದ್ದ ಎಚ್.ಡಿ.ದೇವೇಗೌಡ ಅವರು ಬಿಬಿಎಂಪಿಯಲ್ಲಿನ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. 'ಮಳೆ ನೀರು ಮನೆಗೆ ನುಗ್ಗುತ್ತಿದೆ. ಬಿಬಿಎಂಪಿ ಆಡಳಿತವನ್ನು ಜನರು ಟೀಕೆ ಮಾಡುತ್ತಿದ್ದಾರೆ. ನೀವು ಏಕೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರಿ ಎಂದು ನಮ್ಮನ್ನು ಕೇಳುತ್ತಿದ್ದಾರೆ. ಉತ್ತರ ಕೊಡುವುದು ಕಷ್ಟವಾಗಿದೆ' ಎಂದು ದೇವೇಗೌಡರು ಹೇಳಿದ್ದರು.

      ಬೆಂಬಲ ನೀಡಬೇಕೆ? ಎಂದು ಪ್ರಶ್ನಿಸಿದ್ದರು

      ಬೆಂಬಲ ನೀಡಬೇಕೆ? ಎಂದು ಪ್ರಶ್ನಿಸಿದ್ದರು

      'ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಪಾರದರ್ಶಕ ಆಡಳಿತ ಕೊಡುತ್ತೇವೆ ಎಂದಿದ್ದರು. ಪಾಲಿಕೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಅಧಿಕಾರಿಯೊಬ್ಬರು ಕೊಟ್ಟಿರುವ ವರದಿ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ?. ಪಾಲಿಕೆಯಲ್ಲಿ ಮೈತ್ರಿ ಮುಂದುವರೆಸುವ ಅಗತ್ಯವೇನಿದೆ?' ಎಂದು ದೇವೇಗೌಡರು ಪ್ರಶ್ನಿಸಿದ್ದರು.

      ಜೆಡಿಎಸ್‌ ಹೊಸ ಬೇಡಿಕೆ

      ಜೆಡಿಎಸ್‌ ಹೊಸ ಬೇಡಿಕೆ

      ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. 'ಮೂರು ಅವಧಿಗೆ ಕಾಂಗ್ರೆಸ್ ಮೇಯರ್ ಪಟ್ಟ ಪಡೆದಿದೆ. ಈ ಬಾರಿ ಜೆಡಿಎಸ್‌ಗೆ ಮೇಯರ್ ಪಟ್ಟ ನೀಡಿದರೆ ಮೈತ್ರಿ ಮುಂದುವರೆಸುತ್ತೇವೆ' ಎಂದು ಅವರು ಹೇಳಿದ್ದಾರೆ.

      'ಮೇಯರ್ ಪಟ್ಟ ಕೇಳುವಷ್ಟು ಸದಸ್ಯರಿಲ್ಲ'

      'ಮೇಯರ್ ಪಟ್ಟ ಕೇಳುವಷ್ಟು ಸದಸ್ಯರಿಲ್ಲ'

      ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಜೆಡಿಎಸ್ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ್ದರು. 'ಜೆಡಿಎಸ್ ಮೇಯರ್ ಪಟ್ಟವನ್ನು ಕೇಳುವಷ್ಟುಸದಸ್ಯರ ಬಲವನ್ನು ಹೊಂದಿಲ್ಲ' ಎಂದು ಹೇಳಿದ್ದರು.

      ಬಿಬಿಎಂಪಿಯ ಮೈತ್ರಿ ಲೆಕ್ಕಾಚಾರ

      ಬಿಬಿಎಂಪಿಯ ಮೈತ್ರಿ ಲೆಕ್ಕಾಚಾರ

      2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿತ್ತು. 8 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಜೆಡಿಎಸ್ ಬೆಂಬಲ ಪಡೆದ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+