41 ಲಕ್ಷ ಸಿಕ್ಕಿದ್ದು ನಿಜವಾದ್ರೆ ರಾಜೀನಾಮೆ: ರಮೇಶ್ ಜಾರಕಿಹೊಳಿ
ಬೆಂಗಳೂರು, ಜನವರಿ 25: ತಮ್ಮ ಮನೆ ಮೇಲೆ ನಡೆದಿರುವ ಐಟಿ ದಾಳಿಯಲ್ಲಿ ಅಧಿಕಾರಿಗಳಿಗೆ ದೊರೆತಿರುವುದು ಕೇವಲ ರು.41 ಸಾವಿರ. ರು.41 ಲಕ್ಷ ಸಿಕ್ಕಿದೆ ಅಂದ್ರೆ ಆಗಲೇ ರಾಜೀನಾಮೆ ಕೊಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ನನಗೆ ಐಟಿ ಅಧಿಕಾರಿಗಳ ಮೇಲೆ ವಿಶ್ವಾಸವಿದೆ. ಬೆಳಗಾವಿಯಲ್ಲಿ ಒಟ್ಟು 16 ಮನೆಗಳ ಮೇಲೆ ಅವರು ದಾಳಿ ನಡೆಸಿದ್ದಾರೆ. ಆದರೂ ಇಲ್ಲದ ಆಸ್ತಿ ಮೇಲೆ ಅಪಪ್ರಚಾರ ನಡೆಯುತ್ತಿದೆ. ಈಗಾಗಲೇ ವರದಿ ಬಂದಿರುವಂತೆ ನಗದಾಗಲಿ, ಚಿನ್ನಾಭರಣವಾಗಲಿ ಇಲ್ಲ. ಒಂದು ವೇಳೆ ಹೊಸ ಮುಖಬೆಲೆಯ 2 ಸಾವಿರ ನೋಟುಗಳು 41ಲಕ್ಷ ದೊರೆತಿರುವುದು ನಿಜವಾದರೆ ಆ ಕ್ಷಣದಲ್ಲಿಯೇ ರಾಜೀನಾಮೆ ನೀಡುವುದಾಗಿ ತಿಳಿಸಿದರು. ಇನ್ನು ಕೆಪಿಸಿಸಿ ಅಧ್ಯಕ್ಷರಾಗಲಿ, ಮುಖ್ಯ ಮಂತ್ರಿಗಳಾಗಲಿ ರಾಜೀನಾಮೆ ಬಯಸಿದರೆ ಆಗಲೇ ರಾಜೀನಾಮ ನೀಡುತ್ತೇನೆ ಎಂದು ತಿಳಿಸಿದರು.[ಐಟಿ ದಾಳಿ, ವರದಿ ಇನ್ನು ಕೈಸೇರಿಲ್ಲವೆಂದ ಸಿದ್ದರಾಮಯ್ಯ]

ತಾವು ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿರುವ ಕಾರಣಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ವರದಿ ಆಗಿರುವಂತೆ ನನ್ನ ಬಳಿ ಅಷ್ಟೊಂದು ಹಣ ಇಲ್ಲ. ಸಿಕ್ಕಿರುವ ಮಾಹಿತಿ ಸುಳ್ಳು ಪಕ್ಷದ ಇರುವ ಅಸಮಾಧಾನದ ಕಾರಣದಿಂದಾಗಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಟಾಂಗ್ ನೀಡಿದರು.
ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಟಿ ವರದಿ ನನಗೆ ದೊರೆತಿಲ್ಲ ಎಂದಿದ್ದಾರೆ. ಅಲ್ಲದೆ ಹದಿನಾರು ಕಡೆ ಐಟಿ ದಾಳಿ ನಡೆದಿದೆ ಎಂದು ಹೇಳಲಾಗಿದ್ದರು ಎಲ್ಲಿ , ಯಾರ ಯಾರ ಮನೆಯ ಮೇಲೆ ನಡೆದಿದೆ ಎಂಬ ಮಾಹಿತಿ ತಿಳಿಯಬೇಕಿದೆ.












Click it and Unblock the Notifications