BESCOM: ಹೊಸ ವಿದ್ಯುತ್ ಸಂಪರ್ಕ ಪಡೆಯುವುದು ಇನ್ನೂ ಸುಲಭ, ಹೇಗೆ? ಈ ವಿಧಾನ ಅನುಸರಿಸಿ..
ಬೆಂಗಳೂರು, ಆಗಸ್ಟ್ 19: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ವ್ಯಾಪ್ತಿಯಲ್ಲಿ ಈವರೆಗೆ ಹೊಸ ವಿದ್ಯುತ್ ಸಂಪರ್ಕ ಅಥವಾ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯುವುದು ಸುಲಭವಾಗಿದೆ. ಕೆಲವು ತಿಂಗಳವರೆಗೆ ಇದ್ದ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿದ್ದು ನೀವೀಗ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಅಧಿಕೃತವಾಗಿ ಎಲೆಕ್ಟ್ರಿಕ್ ಕನೆಕ್ಷನ್ ಹೊಂದಬಹುದಾಗಿದೆ. ಅದಕ್ಕಾಗಿ ನೀವು ಈ ವಿಧಾನಗಳನ್ನು ಅನುರಿಸಬೇಕು.
ಇದಕ್ಕು ಮೊದಲು ವ್ಯಕ್ತಿಯೊಬ್ಬರು ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಹೊಂದಿದ್ದು, ಅದನ್ನು ಶಾಶ್ವತ ಕನೆಕ್ಷನ್ ಆಗಿ ಮಾಡಲು ಬೆಸ್ಕಾಂಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅವರಿಗೆ ಶಾಶ್ವತ ಸೇವೆ ನೀಡಿರುವುದಾಗಿ ದಾಖಲೆಯನ್ನು ಬೆಸ್ಕಾಂ ನೀಡಿದೆ. ಇದೇ ರೀತಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ಸೇವೆ ಸಿಗುವ ಬಗ್ಗೆ ಸರ್ಕಾರ ಇಲ್ಲವೇ ಬೆಸ್ಕಾಂ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಟಿವಿ ನೈನ್ ವರದಿ ಮಾಡಿದೆ.

ಈ ಹಿಂದೆ ವಿದ್ಯುತ್ ಸಂಪರ್ಕ ಪಡೆಯಲು ಗುತ್ತಿಗೆದಾರರ ಮೂಲಕ ಅರ್ಜಿ ಸಲ್ಲಿಸಬೇಕಿತ್ತು. ಜೊತೆಗೆ ವಾಸಸ್ಥಳದ ಪ್ರಮಾಣದ ಪತ್ರದ ಮಾಹಿತಿ ಒದಗಿಸಬೇಕಿತ್ತು. ಸಿಸಿ ಇಲ್ಲದೇ ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡುತ್ತಿರಲಿಲ್ಲ. ಇದೀಗ ಆನ್‌ಲೈನ್ ಮೂಲಕಾ ಅರ್ಜಿ ಹಾಕಿದ್ದಕ್ಕೆ ಶಾಶ್ವತ ಸೇವೆ ಒದಗಿಸುವ ದಾಖಲೆ ಸಹ ನೀಡಿದೆ ಎಂದು ತಿಳಿದು ಬಂದಿದೆ.
ನೀವು ಇದೇ ರೀತಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯಲು ಈ ಕೆಳಗಿನ ವಿಧಾನ ಪಾಲಿಸಬೇಕಿದೆ. ಮೊದಲು ನೀವು ಈ ಅಧಿಕೃತ ವೆಬ್‌ಸೈಟ್ ಲಿಂಕ್‌ಗೆ https://www.bescom.co.in/bescom/main/new-connection-forms ಭೇಟಿ ನೀಡಬೇಕು.
* ನಂತರ ನೀವು ತಾತ್ಕಾಲಿಕ ಸಂಪರ್ಕ ಪಡೆದಿದ್ದಾರೆ ಆ ಖಾತೆ ಮಾಹಿತಿ, ಸಂಖ್ಯೆಯನ್ನು ಇಲ್ಲಿ ನಮೂದಿಸಬೇಕು.
* ಮುಂದೆ ಅರ್ಜಿದಾರರ ಹೆಸರು, ಇಮೇಲ್ ಐಡಿ, ಫೋನ್ ನಂಬರ್, ಗುರುತಿನ ಚೀಟಿಗಳಲ್ಲಿ ಒಂದರ (ಪಾನ್, ಡಿಎಲ್, ಆಧಾರ್, ಪಾಸ್‌ಪೋಸರ್ಟ್ ಇತರೆ) ಸಂಖ್ಯೆ ಹಾಕಬೇಕು.
* ನಿಮ್ಮ ಮನೆಯ ವಿಳಾಸದ ಮಾಹಿತಿ ಒದಗಿಸಬೇಕು.
* ಸಂಪರ್ಕ ಹೊಂದಿರುವ ಸ್ಥಳದ ನಿಖರ ಮಾಹಿತಿ, ಮನೆ ಚ.ಅಡಿ ವಿವರ, ಚ. ಮೀಟರ್ ಲೆಕ್ಕದಲ್ಲಿ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಬೇಕು.
* ಬಳಿಕ ವಿದ್ಯುತ್ ಪಡೆಯುತ್ತಿರುವುದು ಕ್ಯಾಟಗರಿ ಅಂದರೆ, ಮನೆ, ಬೃಹತ್ ಕಟ್ಟಡ, ವಾಣಿಜ್ಯ ಉದ್ದೇಶವೋ ಎಂದು ನಮೂದಿಸಬೇಕು. ಸ್ಥಳ ಯಾವ ಉಪವಿಭಾಗ ಕಚೇರಿ ವ್ಯಾಪ್ತಿಗೆ ಬರುತ್ತದೆ. ಸೆಕ್ಷನ್ ಆಫೀಸ್ ಯಾವುದು, ಎಷ್ಟು ಲೋಡ್, ಯಾವ ಫೇಸ್ ಹೀಗೆ ಅಲ್ಲಿ ಕೇಳಲಾಗುವ ಎಲ್ಲ ಮಾಹಿತಿ ಅಲ್ಲಿ ನಮೂದಿಸಬೇಕು.
* ಗುರುತಿನ ಚೀಟಿಗಳಲ್ಲಿ ಒಂದನ್ನು ಸ್ಕ್ಯಾನ್ ಮಾಡಿ ಅಪ್ಲೊಡ್ ಮಾಡಬೇಕು. ಇತರ ಪ್ರಮಾಣ ಪ್ರಮಾಣ ಪತ್ರ ಸಹ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ಸಿಸಿ ಫಾರ್ಮ್ ಮಾಹಿತಿ ನೀಡುವುದು ಕಡ್ಡಾಯವಲ್ಲ.












Click it and Unblock the Notifications