Bengaluru Rain: ಬರೋಬ್ಬರಿ 107 ಮಿ.ಮೀ. ಭಾರೀ ಮಳೆ ದಾಖಲು, ಅ.5ರ ವರೆಗೆ ವ್ಯಾಪಕ ಮಳೆ ಮುನ್ಸೂಚನೆ

ಬೆಂಗಳೂರು, ಸೆಪ್ಟಂಬರ್ 29: ರಾಜಧಾನಿ ಬೆಂಗಳೂರಿನಲ್ಲಿ ಬಹುದಿನಗಳ ಬಳಿಕ ಮತ್ತೆ ಮಳೆ ಆರ್ಭಟ ಶುರುವಿಟ್ಟುಕೊಂಡಿದೆ. ಶನಿವಾರ ರಾತ್ರಿ ಬರೋಬ್ಬರಿ 107 ಮಿಲಿ ಮೀಟರ್ ಮಳೆ ಆಗಿದೆ. ಇವತ್ತು ಭಾನುವಾರವು ಸಹ ಜೋರು ಮಳೆ ಆಗಲಿದೆ. ಅಕ್ಟೋಬರ್ 5ರವರೆಗೆ ಬೆಂಗಳೂರಿನಲ್ಲಿ ಮಳೆ ಆರ್ಭಟ ಕಂಡು ಬರಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಬೆಂಗಳೂರು ಹವಾಮಾನ ವರದಿ ಪ್ರಕಾರ, ಸಾಮಾನ್ಯವಾಗಿ ಮಬ್ಬು ಕವಿದ ವಾತಾವರಣ, ಕೆಲವು ಕಡೆಗಳಲ್ಲಿ ಸಾಮಾನ್ಯವಾಗಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಇನ್ನು ಒಂದಷ್ಟು ಬಡಾವಣೆಗಳಲ್ಲಿ ವ್ಯಾಪಕ ಮಳೆ ಆಗುವ ಮುನ್ಸೂಚನೆ ಇದೆ. ಬದಲಾದ ಹವಾಮಾನಗಳ ಸ್ಥಿತಿಗತಿಗಳಿಂದ ಉತ್ತರ ಕರ್ನಾಟಕ ಮಾತ್ರವಲ್ಲದೇ ಬೆಂಗಳೂರಿನ ವ್ಯಾಪ್ತಿಯಲ್ಲೂ ಮುಂಗಾರು ಚುರುಕುಗೊಂಡಿದೆ.

Heavy Rain Expected in Bengaluru City till October 5th 107 mm Rain recorded on Sep 28th Saturday

ಕಳೆದ ರಾತ್ರಿ ಶನಿವಾರ ದೊಡ್ಡಾನೆಕುಂದಿಯಲ್ಲಿ ಬರೋಬ್ಬರಿ 107.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಎಚ್‌ಎಎಲ್, 89.5 ಮಿಲಿ ಮೀಟರ್, ಹಗದೂರು ಮತ್ತು ವರ್ತೂರಿನಲ್ಲಿ ತಲಾ 80.5 ಮಿ.ಮೀ, ಮಾರತ್ತಹಳ್ಳಿ 62.5 ಮಿ.ಮೀ, ಗೊಟ್ಟಿಗೆರೆ 34.5ಮಿ.ಮೀ, ಬೇಗೂರು 43.5ಮಿ.ಮೀ, ವಿಜ್ಞಾನನಗರ 36.5 ಮಿ.ಮೀ, ಬೆಳ್ಳಂದೂರು-2 36 ಮಿ.ಮೀ, ಜಕ್ಕೂರು-2 35ಮಿ.ಮೀ, ಹೊರಮಾವು-2 33ಮಿ.ಮೀ, ವಿ.ನಾಗೇನಹಳ್ಳಿ 32ಮಿ.ಮೀ, ಕೆಂಗೇರಿ 28ಮಿ.ಮೀ, ಚೌಡೇಶ್ವರಿ 27ಮಿ.ಮೀ, ವನ್ನಾರಪೇಟೆ 27ಮಿ.ಮೀ, ಕೋರಮಂಗಲ 25ಮಿ.ಮೀ, ಸಿಂಗಸಂದ್ರ 25ಮಿ.ಮೀ, ಸಿಂಗಸಂದ್ರ-2 24.5ಮಿ.ಮೀ, ಆರ್‌ಆರ್‌ ನಗರ 25ಮಿ.ಮೀ, ಎಚ್‌ಎಸ್‌ಆರ್ ಬಡಾವಣೆ 24.5ಮಿ.ಮೀ, ಬಾಣಸವಾಡಿ ಪೂರ್ವ ಭಾಗದಲ್ಲಿ 24.5 ಮಿ.ಮೀ ಮಳೆ ದಾಖಲಾಗಿದೆ.

ಇಂದು ವಿವಿಧಡೆ ಕೆಲವೇ ಕ್ಷಣಗಳಲ್ಲಿ ಮಳೆ ಸಾಧ್ಯತೆ

ಈ ಮೇಲಿನ ಪ್ರದೇಶಗಳನ್ನು ಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ಸಾಮಾನ್ಯ ಮಳೆ ದಾಖಲಾಗಿದೆ. ಇಂದು ಭಾನುವಾರ ಸಂಜೆಯ ಬೆಂಗಳೂರಿನ ಅನೇಕ ಕಡೆಗಳಲ್ಲಿ ಮಳೆಯ ವಾತಾವರಣ ಕಂಡು ಬರುತ್ತಿದೆ. ಮೋಡ ಕವಿದ ವಾತಾವರಣ ಇದ್ದು, ಈಗಲೇ ಆಲೋ ಮಳೆ ಬರುವ ರೀತಿಯಲ್ಲಿ ಭಾಸವಾಗುತ್ತಿದೆ. ಬೆಂಗಳೂರಿನ ನಗರದ ಬಡಾವಣೆ, ಹೊರ ವಲಯದ ಬಡಾವಣೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಕೋಲಾರ, ಚಿಕ್ಕಬಳ್ಳಾಪುರ ರಸ್ತೆಗಳ ಅಕ್ಕಪಕ್ಕದ ಪ್ರದೇಶಗಳಲ್ಲಿ ಮಬ್ಬು ವಾತಾವರಣ ಸೃಷ್ಟಿಯಾಗಿದೆ. ಕೆಲವೇ ಕ್ಷಣಗಳಲ್ಲಿ ಮಳೆ ಸುರಿಯುವ ಮುನ್ಸೂಚನೆ ಇದಾಗಿದೆ. ಆದ್ದರಿಂದ ವಾಹನ ಸವಾರರು, ವ್ಯಾಪಾರಿಗಳು ಅಗತ್ಯ ಎಚ್ಚರಿಕೆ ವಹಿಸಬೇಕಿದೆ.

Heavy Rain Expected in Bengaluru City till October 5th 107 mm Rain recorded on Sep 28th Saturday

ಬೆಂಗಳೂರಿನಲ್ಲಿ ಅ. 5ರವರೆಗೆ ಭಾರಿ ಮಳೆ ಎಚ್ಚರಿಕೆ

ರಾಜಧಾನಿಯಲ್ಲಿ ಕಳೆದ 24 ಗಂಟೆಗಳಿಂದ ತಂಪು ವಾತಾವರಣ ಕಂಡು ಬರುತ್ತಿದೆ. ಇದೇ ವಾತಾವರಣ ಮುಂದಿನ ಒಂದು ವಾರ ಮುಂದುವರಿಯಲಿದೆ. ಅಕ್ಟೋಬರ್ 5ರವರೆಗೆ ಬೆಂಗಳೂರಿನಲ್ಲಿ ವ್ಯಾಪಕ ಮಳೆ ಆಗಲಿದೆ. ನಿತ್ಯ ಬೆಳಗ್ಗೆ ಅಷ್ಟಾಗಿ ಬಿಸಿಲು ಕಂಡು ಬಾರದಿದ್ದರೂ ಸಂಜೆ ಹೊತ್ತಿಗೆ ಅಲ್ಲಲ್ಲಿ ಸಾಮಾನ್ಯ, ಹಗುರ ಮಳೆ ಆಗಬಹುದು.

ಇನ್ನು ಒಂದಿಷ್ಟು ಬಡಾವಣೆಗಳಲ್ಲಿ ಅತ್ಯಧಿಕ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸಿರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.

ರಾಜ್ಯದ ಉತ್ತರ ಕರ್ನಾಟಕ ಹಾಗೂ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆಗಳು ಇವೆ. ಕರಾವಳಿಯಲ್ಲಿ ತಕ್ಕ ಮಟ್ಟಿಗೆ ಮಳೆ ತಗ್ಗಿದೆ. ಅಧಿಕೃತವಾಗಿ ಮುಂಗಾರು ಈ ತಿಂಗಳಾಂತ್ಯಕ್ಕೆ ಕೊನೆಯಾಗಲಿದೆ. ಜೂನ್ ನಿಂದ ಜುಲೈತನಕ ಉತ್ತಮ ಮಳೆ ಆಗಿದೆ ಎಂದು ವರದಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+