Bengaluru Rain: ಒಂದೇ ದಿನ ಸುರಿಯಿತು ಒಂದು ತಿಂಗಳ ವಾಡಿಕೆ ಮಳೆ; 133 ವರ್ಷದ ದಾಖಲೆ ಮುರಿದ ಮಹಾ ಮಳೆ
ಜೂನ್, 2 ಭಾನುವಾರ ಸಂಜೆ ಬೆಂಗಳೂರು ಮಹಾಮಳೆಗೆ ಸಾಕ್ಷಿಯಾಗಿದೆ. ಇಡೀ ತಿಂಗಳ ವಾಡಿಕೆ ಮಳೆ ಒಂದೇ ಸಂಜೆ ಸುರಿದಿದ್ದು, ಹೊಸ ದಾಖಲೆ ಸೃಷ್ಟಿಯಾಗಿದೆ. 133 ವರ್ಷಗಳ ಹಿಂದೆ ಸುರಿದಿದ್ದ ಮಳೆ ಪ್ರಮಾಣವನ್ನು ಮೀರಿಸಿ ಹೊಸ ದಾಖಲೆ ಬರೆದಿದೆ.
ಭಾನುವಾರ ರಾತ್ರಿ 10.15ರವರೆಗೆ ನಗರದಲ್ಲಿ 104 ಮಿ.ಮೀ ಮಳೆ ದಾಖಲಾಗಿದೆ. ಇದು 133 ವರ್ಷಗಳ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದೆ. ಜೂನ್ ತಿಂಗಳಲ್ಲಿ ಇಷ್ಟು ಪ್ರಮಾಣದಲ್ಲಿ ಮಳೆಯಾಗಿರುವುದು ಇದೇ ಮೊದಲು, 1891ರ ಜೂನ್ 18ರಂದು ಬೆಂಗಳೂರಿನಲ್ಲಿ 24 ಗಂಟೆಗಳಲ್ಲಿ 101.6 ಮಿ.ಮೀ ಮಳೆಯಾಗಿದ್ದು ಈವರೆಗಿನ ದಾಖಲೆಯಾಗಿತ್ತು, ಭಾನುವಾರ ಸುರಿದ ಮಳೆ ಆ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆಯಿತು.

ಬೆಂಗಳೂರಿನ ಹಂಪಿ ನಗರದಲ್ಲಿ 101 ಮಿ.ಮೀ, ವಿದ್ಯಾಪೀಠ 88 ಮಿ.ಮೀ, ಕಾಟನ್‌ಪೇಟೆ 87 ಮಿ.ಮೀ, ಮಾರುತಿ ಮಂದಿರ ವಾರ್ಡ್ 83 ಮಿ.ಮೀ, ಹೊರಮಾವು 80 ಮಿ.ಮೀ, ಕೊಡಿಗೇಹಳ್ಳಿ 79 ಮಿ.ಮೀ, ಕೊಟ್ಟಿಗೆಪಾಳ್ಯ 77 ಮಿ.ಮೀ, ಸಂಪಂಗಿರಾಮನಗರ 71 ಮಿ.ಮೀ, ಚಾಮರಾಜಪೇಟೆ 71 ಮಿ.ಮೀ ಮಳೆಯಾಗಿದೆ.
Bengaluru City IMD AWS has got 104mm rainfall till 10:15 PM today ⛈️🌧️
— ರವಿ ಕೀರ್ತಿ ಗೌಡ (@ravikeerthi22) June 2, 2024
Breaks 133 year old record of heaviest 24 hour rainfall in June ie 18th June 1891 - 101.6mm (need to see how much IMD gives tomo morning)#BengaluruRains
ಭಾನುವಾರ ಆಗಿದ್ದಕ್ಕೆ ಬಚಾವು!
ಭಾನುವಾರ ಸಂಜೆ ಈ ಪ್ರಮಾಣದಲ್ಲಿ ಮಳೆಯಾಗಿದ್ದು ಬೆಂಗಳೂರು ಜನತೆಯ ಪುಣ್ಯ ಎನ್ನಬಹುದೇನೋ! ಹೌದು, ಅಕಸ್ಮಾತ್ ಸೋಮವಾರ ಸಂಜೆ ಈ ಪ್ರಮಾಣದಲ್ಲಿ ಮಳೆಯಾಗಿದ್ದರೆ ಕಚೇರಿಗೆ ಹೋದವರ ಪರಿಸ್ಥಿತಿ ಕಷ್ಟವಾಗಿರುತ್ತಿತ್ತು, ನಗರದ ಟ್ರಾಫಿಕ್ ಮತ್ತಷ್ಟು ಹೆಚ್ಚುತ್ತಿತ್ತು. ಆದರೆ ಭಾನುವಾರ ಆದ ಕಾರಣ ಹೆಚ್ಚಿನ ಜನ ಮನೆಯಲ್ಲಿದ್ದರು.
ಆದರೂ, ನಗರದ ಹಲವು ರಸ್ತೆಗಳು ಕೆರೆಗಳಂತಾಗಿದ್ದವು, ಹಲವು ಕಡೆಗಳಲ್ಲಿ ಚರಂಡಿ ಉಕ್ಕಿಹರಿದ ಪರಿಣಾಮ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತು ವಾಹನ ಸಂಚಾರರು ಪರದಾಡಿದರು. 150 ಕ್ಕೂ ಹೆಚ್ಚು ಕಡೆಗಳಲ್ಲಿ ಮರ ಬಿದ್ದ ಬಗ್ಗೆ ವರದಿಯಾಗಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗದ ಎಂ.ಜಿ.ರಸ್ತೆ ನಿಲ್ದಾಣ ಮತ್ತು ಟ್ರಿನಿಟಿ ನಿಲ್ದಾಣಗಳ ನಡುವಿನ ಹಳಿಗಳ ಮೇಲೆ ಮರದ ಕೊಂಬೆ ಬಿದ್ದ ಕಾರಣ, ಕೆಲ ಕಾಲ ಈ ಎರಡೂ ನಿಲ್ದಾಣಗಳ ನಡುವೆ ರೈಲು ಸಂಚಾರ ಸ್ಥಗಿತವಾಗಿತ್ತು.
ಬೆಂಗಳೂರು ಮಾತ್ರವಲ್ಲದ ಸುತ್ತಮುತ್ತಿನ ಹಲವು ಜಿಲ್ಲೆಗಳಲ್ಲಿ ಕೂಡ ವ್ಯಾಪಕ ಮಳೆಯಾಗಿದೆ. ಭಾನುವಾರ ರಾತ್ರಿ ಮತ್ತೆ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಸೋಮವಾರ ಕೂಡ ನಗರದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
-
ಮಾರ್ಚ್ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Rain Alert: ಬೇಸಿಗೆ ಮಳೆಗೆ ಬೆಂಗಳೂರಿನ ಕೆಲವೆಡೆ ಸಂಚಾರ ಅಸ್ತವ್ಯಸ್ತ, ಮಾ.21ರವರೆಗೂ ಮಳೆ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
Bengaluru Airport: ಮಳೆ ಅಬ್ಬರಕ್ಕೆ 30 ವಿಮಾನಗಳ ಮಾರ್ಗ ಬದಲು, ಏರ್ಪೋರ್ಟ್ ಟರ್ಮಿನಲ್ನಲ್ಲಿ ನೀರು ಸೋರಿಕೆ -
ಆಲಿಕಲ್ಲು ಮಳೆಗೆ ನೆಲಕಚ್ಚಿದ ಮಾವು, ಹಲಸು, ಕಲ್ಲಂಗಡಿ; ಕೈಗೆ ಬಂದ ತುತ್ತು ಬಾಯಿಗಿಲ್ಲ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಇನ್ಮುಂದೆ KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಕೃಷ್ಣ ಬೈರೇಗೌಡ ಸ್ಪಷ್ಟನೆ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Ugadi 2026: ಹಬ್ಬದ ಕಳೆ ಹೆಚ್ಚಿಸುವ ಸುಂದರ ರಂಗೋಲಿಗಳು; ಸರಳ, ಚುಕ್ಕಿ ಹಾಗೂ ಬಣ್ಣದ ರಂಗೋಲಿ ಐಡಿಯಾ ಇಲ್ಲಿದೆ











Click it and Unblock the Notifications