Heavy Rain: ಮಳೆ ಅಬ್ಬರ ಹಿನ್ನೆಲೆ ಶಾಲೆ & ಕಾಲೇಜುಗಳಿಗೆ ದಿಢೀರ್ ರಜೆ ಘೋಷಣೆ!
ಮಳೆ.. ಮಳೆ.. ಭಾರಿ ಭರ್ಜರಿ ಮಳೆ ಇದೀಗ ಶುರುವಾಗಿದೆ. ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಚಂಡಮಾರುತ ರೂಪುಗೊಂಡ ಕಾರಣಕ್ಕೆ ಇದೀಗ ಮಳೆರಾಯನ ಆರ್ಭಟ ಜೋರಾಗುತ್ತಿದೆ. ಅದರಲ್ಲೂ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಮುಂದಿನ 72 ಗಂಟೆಗಳ ಕಾಲ ಅಂದ್ರೆ ಸುಮಾರು 3 ದಿನಗಳ ಕಾಲ ಭಾರಿ ಮಳೆ ಬೀಳುವ ಭಯ ಆವರಿಸಿದೆ. ಹೀಗೆ ಮಳೆ ಅಬ್ಬರ ಹಿನ್ನೆಲೆ ಶಾಲೆ & ಕಾಲೇಜುಗಳಿಗೆ ದಿಢೀರ್ ರಜೆ ಘೋಷಣೆ ಮಾಡಲಾಗಿದೆ!
ದಕ್ಷಿಣ ಭಾರತದಲ್ಲಿ ಮಳೆ ತನ್ನ ವಿರಾಟ ರೂಪ ಪ್ರದರ್ಶನ ಮಾಡಲು ಶುರು ಮಾಡಿಬಿಟ್ಟಿದೆ. ಮಳೆ ಆರ್ಭಟ ಜೋರಾಗಿದ್ದು, ಭಯದ ವಾತಾವರಣ ಇದೀಗ ನಿರ್ಮಾಣ ಆಗುತ್ತಿದೆ. ಇದೇ ಕಾರಣಕ್ಕೆ ಜನರು ಕೂಡ ಮಳೆ ನಿಲ್ಲುವುದು ಯಾವಾಗ ದೇವರೆ ಅಂತಾ ಚಿಂತೆ ಮಾಡುವಂತೆ ಆಗಿದೆ. ವಾತಾವರಣ ಬದಲಾವಣೆ & ವಾಯುಭಾರ ಕುಸಿತದ ಪರಿಣಾಮ ಪರಿಸ್ಥಿತಿ ಕೂಡ ಈ ಸಮಯದಲ್ಲಿ ಕೈಮೀರಿದೆ. ಕೈಗೆ ಬಂದು, ರೈತರ ಬದುಕು ಕಾಪಾಡಬೇಕಿದ್ದ ಬೆಳೆ ಮಣ್ಣುಪಾಲು ಆಗುವ ಭಯ ಕಾಡುತ್ತಿದೆ. ಇಂತಹ ಸಮಯದಲ್ಲೇ ಶಾಲಾ & ಕಾಲೇಜುಗಳಿಗೂ ರಜೆ ನೀಡುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ!
ಮಳೆ ಅಬ್ಬರ ಹೆಚ್ಚಾಗಿರುವ ಕಾರಣ ಈಗಾಗಲೇ ತಮಿಳುನಾಡು, ಕೇರಳ ಸೇರಿದಂತೆ ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಇದರ ಜೊತೆಗೆ ಅಲ್ಲಿನ ಶಾಲಾ & ಕಾಲೇಜುಗಳಿಗೆ ಕೂಡ ರಜೆ ಘೋಷಣೆ ಮಾಡಲಾಗಿದೆ. ಅದರಲ್ಲೂ ತಮಿಳುನಾಡು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಕಾರಣ ದೊಡ್ಡ ಅವಾಂತರ ಸಂಭವಿಸುವ ಭಯ ಇದ್ದು, ಹೀಗಾಗಿ ಬಹುತೇಕ ಜಿಲ್ಲೆಗಳಲ್ಲಿ ಈಗ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಕರ್ನಾಟಕದ ಪರಿಸ್ಥಿತಿ ಹೇಗಿದೆ?
ಕರ್ನಾಟಕದ ಜಿಲ್ಲೆಗಳಲ್ಲಿ ಭರ್ಜರಿ ಮಳೆ!
ಮಳೆ.. ಮಳೆ.. ಯಾಕೆ ಹೀಗೆ ಚಳಿಗಾಲದ ಸಮಯದಲ್ಲಿ ಕೂಡ ಮಳೆ ಬೀಳುತ್ತಿದೆ? ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಿರಬಹುದು. ಅಷ್ಟಕ್ಕೂ, ಬಂಗಾಳ ಕೊಲ್ಲಿ ಸಮುದ್ರ ಪ್ರದೇಶ ಕರ್ನಾಟಕ ರಾಜ್ಯಕ್ಕೆ ಹತ್ತಿರದಲ್ಲೇ ಇದೆ. ಇದೀಗ ಬಂಗಾಳ ಕೊಲ್ಲಿ ಸಮುದ್ರ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿ ಚಂಡಮಾರುತ ಜನ್ಮ ಪಡೆದು ಮಳೆ ಬರಲು ಶುರುವಾಗಿದೆ. ಇದೀಗ ಹವಾಮಾನ ಇಲಾಖೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ನೀಡಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಕೋಲಾರ & ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಇದು ಮತ್ತಷ್ಟು ಟೆನ್ಷನ್ ತರಿಸಿದ್ದು, ಬೆಂಗಳೂರು ನಿವಾಸಿಗಳು ಚಿಂತೆ ಮಾಡುವಂತೆ ಆಗಿದೆ.












Click it and Unblock the Notifications