ಬೆಂಗಳೂರಲ್ಲಿ ₹ 700,000 ಸಂಗ್ರಹಿಸಿದ ಜಿಬಿಎ: ಮೊದಲ ದಿನವೇ ಭರ್ಜರಿ ಕಾರ್ಯಾಚರಣೆ!

ಬೃಹತ್ ಬೆಂಗಳೂರು ಬದಲಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ಬುಧವಾರದಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಮೊದಲ ದಿನವೇ ಹಲವು ಮಹತ್ವದ ಕೆಲಸಗಳು ನಡೆದಿವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 9 ಸಾವಿರ ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಂಡು 7.38 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಬಿ.ಎಸ್.ಡಬ್ಲ್ಯೂ.ಎಂ.ಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರು ತಿಳಿಸಿದ್ದಾರೆ.

ನಗರದಾದ್ಯಂತ ಏಕ ಬಳಕೆ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಕೂಡ, ಅಕ್ರಮವಾಗಿ ಏಕ ಬಳಕೆ ಪ್ಲಾಸ್ಟಿಕ್ ಕವರ್‌ಗಳನ್ನು ಸಂಗ್ರಹಿಸಿಕೊಂಡು ಮಾಡಿಕೊಂಡು ಮಾರಾಟ ಮಾಡುತ್ತಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಅಧಿಕಾರಿಗಳು ಉತ್ಪಾದಕರು ಹಾಗೂ ಸಂಗ್ರಹಕಾರರ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪ್ಲಾಸ್ಟಿಕ್ ವಶಕ್ಕೆ ಪಡೆದು, ಕೆ.ಆರ್.ಮಾರುಕಟ್ಟೆಯಲ್ಲಿ ಒಂದು ಗೋಡೌನ್ ಸೀಜ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

GBA Collects 7 Lakh on Day One in Bengaluru Strong Start for New Authority

ಪರಿಶೀಲನೆಯ ವೇಳೆ ನಿಯಮಾನುಸಾರ ದಂಡ ವಿಧಿಸಿ ಸಂಗ್ರಹಿಸಲಾದ ದಂಡದ ವಿವರ

ಕೆ.ಆರ್. ಮಾರುಕಟ್ಟೆ: ಕೆ.ಆರ್ ಮಾರುಕಟ್ಟೆ ವ್ಯಾಪ್ತಿಯ ಎ ಬ್ಲಾಕ್ ನಲ್ಲಿ 3 ಪ್ರಕರಣಗಳಿಂದ 29 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 30,000/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ. ಜೊತೆಗೆ ವೆಂಡರ್ಸ್ ಸಿ ಬ್ಲಾಕ್ ನಲ್ಲಿ 22 ಪ್ರಕರಣಗಳಿಂದ 6310 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 3500/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

ಅವೆನ್ಯೂ ರಸ್ತೆ: ಅವೆನ್ಯೂ ರಸ್ತೆ ವ್ಯಾಪ್ತಿಯ ಬಿ ಬ್ಲಾಕ್ ನಲ್ಲಿ 17 ಪ್ರಕರಣಗಳಿಂದ 300 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 40,000/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

ಕಲಾಸಿಪಾಳ್ಯ: ಕಲಾಸಿಪಾಳ್ಯದಲ್ಲಿ 24 ಪ್ರಕರಣಗಳಿಂದ 150 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 45,900/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

ಯಶವಂತಪುರ ಮಾರುಕಟ್ಟೆ: ಯಶವಂತಪುರ ಮಾರುಕಟ್ಟೆಯಲ್ಲಿ 27 ಪ್ರಕರಣಗಳಿಂದ 110 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 61,800/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

ಪೀಣ್ಯ ಕೈಗಾರಿಕಾ ಪ್ರದೇಶ: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 27 ಪ್ರಕರಣಗಳಿಂದ 450 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 1,00,500/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

ದಾಸರಹಳ್ಳಿ (ಮ್ಯಾನುಪಾಕ್ಚರಿಂಗ್) ಪ್ರದೇಶ: ದಾಸರಹಳ್ಳಿ (ಮ್ಯಾನುಪಾಕ್ಚರಿಂಗ್) ಪ್ರದೇಶದಲ್ಲಿ 01 ಪ್ರಕರಣಗಳಿಂದ 218 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 50,000/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

ಚಾಮರಾಜಪೇಟೆ ಹಾಗೂ ಇತರೆ ಪ್ರದೇಶ: ಚಾಮರಾಜಪೇಟೆ-ಮಕ್ಕಳಕೂಟ, ಅಕ್ಕಿಪೇಟೆ, ಬಳೆಪೇಟೆ ಪ್ರದೇಶದಲ್ಲಿ 37 ಪ್ರಕರಣಗಳಿಂದ 2,000 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 4,07,000/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.

ಒಟ್ಟಾರೆಯಾಗಿ 158 ಪ್ರಕರಣಗಳಿಂದ 9,567 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದು ರೂ. 7,38,700 ಗಳ ದಂಡದ ಮೊತ್ತವನ್ನು ವಸೂಲಿ ಮಾಡಿ, ಸಾರ್ವಜನಿಕರು ಹಾಗೂ ಮಾರಾಟಗಾರರು ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಹಾಗೂ ಬಟ್ಟೆಯ ಚೀಲಗಳನ್ನು ಬಳಸಿ ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+