ಬಿಬಿಎಂಪಿ ಉಪ ಚುನಾವಣೆ : ಅಖಾಡಕ್ಕಿಳಿಯಲಿದ್ದಾರೆ ಮಾರಿಮುತ್ತು

ಬೆಂಗಳೂರು, ಮೇ 11 : ಬಿಬಿಎಂಪಿಯ ಸಗಾಯಪುರ ವಾರ್ಡ್‌ನ ಉಪ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಂತೆ ವಾರ್ಡ್‌ ಕಾಂಗ್ರೆಸ್‌ಗೆ ಸಿಗಬೇಕು. ಆದರೆ, ಈ ವಿಚಾರವೇ ಈಗ ವಿವಾದಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯ ಏಳುಮಲೈ ಅವರ ನಿಧನದಿಂದಾಗಿ ವಾರ್ಡ್‌ಗೆ ಉಪ ಚುನಾವಣೆ ಎದುರಾಗಿದೆ. ಮೇ 29ರಂದು ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.

ಸಗಾಯಪುರ ವಾರ್ಡ್‌ ಅನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್ ಮುಂದಾಗಿದೆ. ಆದರೆ, ಜೆಡಿಎಸ್‌ನ ಮಾಜಿ ಸದಸ್ಯೆ ಮಾರಿಮುತ್ತು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ ಪಕ್ಷೇತರ ಸದಸ್ಯೆಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ.

Marimuthu

ಕಾಂಗ್ರೆಸ್‌ನಲ್ಲೂ ಅಸಮಾಧಾನ : ಮತ್ತೊಂದು ಕಡೆ ಕಾಂಗ್ರೆಸ್‌ನಲ್ಲಿ ಏಳುಮಲೈ ಅವರ ಪತ್ನಿ ಲೀನಾರಿಗೆ ಟಿಕೆಟ್ ಕೊಡಲು ಚಿಂತನೆ ನಡೆದಿದೆ. ಆದರೆ, ಏಳುಮಲೈ ಸಹೋದರ ವೇಲು ಲೀನಾ ಬದಲು ಸಹೋದರಿ ಪಳನಿಯಮ್ಮಾಳ್‌ಗೆ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಲೀನಾರಿಗೆ ಟಿಕೆಟ್ ನೀಡಿದರೆ ತಮ್ಮ ದಾರಿ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಟಿಕೆಟ್‌ಗಾಗಿ ಏಳುಮಲೈ ಕುಟುಂಬದಲ್ಲಿಯೇ ಅಸಮಾಧಾನವಿದೆ. ಇದನ್ನು ಬಂಡವಾಳ ಮಾಡಿಕೊಂಡು ಚುನಾವಣೆ ಎದುರಿಸಲು ಮಾರಿಮುತ್ತು ಮುಂದಾಗಿದ್ದಾರೆ.

ಮಾರಿಮುತ್ತು ಬೆಂಗಳೂರಿನ ಮೊದಲ ಮಹಿಳಾ ರೌಡಿ ಶೀಟರ್. ಮಾರಿಮುತ್ತು ವಿರುದ್ಧ ರೌಡಿ ಶೀಟ್ ತೆರೆದಾಗ ಬಾರಿ ಸುದ್ದಿಯಾಗಿತ್ತು. ಮಹಿಳೆ ಮೇಲೆ ರೌಡಿ ಶೀಟರ್ ತೆರೆಯಲಾಗಿದೆ ಎಂದು ಪೊಲೀಸರು ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಕೆಲವು ದಿನಗಳ ಬಳಿಕ ಮಾರಿಮುತ್ತು ಮೇಲಿದ್ದ ರೌಡಿ ಶೀಟರ್ ಪಟ್ಟಿ ತೆಗೆದುಹಾಕಲಾಗಿತ್ತು. ಬಳಿಕ ಅವರು ಚುನಾವಣಾ ರಾಜಕೀಯಕ್ಕೆ ಬಂದು ಜೆಡಿಎಸ್ ಸೇರಿದ್ದರು. ಒಮ್ಮೆ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗ ಪಕ್ಷೇತರರಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+