FASTag: ನಿಮ್ಮ ವಾಹನ ಮನೆಯಲ್ಲಿದ್ದರೂ ಫಾಸ್ಟ್ಯಾಗ್‌ನಲ್ಲಿ ಹಣ ಕಡಿತವಾಗುತ್ತಿದೆಯೇ? ಇಲ್ಲಿದೆ ಪರಿಹಾರ
ಬೆಂಗಳೂರು, ಡಿಸೆಂಬರ್ 27: ವಾಹನ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಸಮಯ ಉಳಿತಾಯವಾಗಲೆಂದು ಕೆಂದ್ರ ಸರ್ಕಾರದಿಂದ ಟೋಲ್‌ಗಳಲ್ಲಿ ಫಾಸ್ಟ್ಯಾಗ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಾಹನಗಳು ಮನೆಯ ಬಳಿಯೇ ನಿಂತಿದ್ದರೂ ಕೂಡ ಪಾಸ್ಟ್ಯಾಗ್‌ನಲ್ಲಿ ಹಣ ಕಟ್ಟಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಹಾಗಾದರೆ ಇಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕೆನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಟೋಲ್ ಫ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಕೆಂದ್ರ ಸರ್ಕಾರ ಜಾರಿ ಮಾಡಿದೆ. ಈ ಫಾಸ್ಟ್ಟ್ಯಾಗ್ನಿಂದ ಬೆಂಗಳೂರಿನ ವಾಹನ ಮಾಲಿಕರು ಹಣ ಕಳೆದುಕೊಂಡಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ, ಜೆನಿಲ್ ಜೈನ್ ಎಂಬುವವರು ಮನೆಯಲ್ಲಿದ್ದಾಗಲೇ ಅವರ ಮೊಬೈಲ್ಗೆ ಬೆಂಗಳೂರು-ಮಂಗಳೂರು ಹೆದ್ದಾರಿಯ ಟೋಲ್ ಫ್ಲಾಜಾದಲ್ಲಿ 60 ರೂಪಾಯಿ ಸಂಗ್ರಹಿಸಲಾಗಿದೆ ಎಂಬ ಸಂದೇ ಬಂದಿದೆ ಎನ್ನುವ ಆರೋಪ ಕೇಳಿಬಂದಿದೆ.

ಇದರಿಂದ ಗಾಭರಿಗೊಂಡ ಜೆನಿಲ್ ಜೈನ್, ತಮ್ಮ ಕಾರು ಅಥವಾ ಫಾಸ್ಟ್‌ಟ್ಯಾಗ್ ಕಳ್ಳತನವಾಗಿದಯೇ ಎಂದು ನೋಡಲು ಪಾರ್ಕಿಂಗ್ ಪ್ರದೇಶಕ್ಕೆ ಹೋದರು. ಆದರೆ ಕಾರು ಮತ್ತು ಫಾಸ್ಟ್‌ಟ್ಯಾಗ್ ಎರಡೂ ಅಲ್ಲಿಯೇ ಇದ್ದವು ಎಂದು ಟೆಕ್ಕಿ ಜೆನಿಲ್ ಜೈನ್ ಹೇಳಿದರು.
"ನಾವು ಈ ಟೋಲ್ ಫ್ಲಾಜಾದಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿರುವ ಹರಳೂರು-ಸರ್ಜಾಪುರ ರಸ್ತೆಯಲ್ಲಿ ವಾಸಿಸುತ್ತೇವೆ. ಈ ಟೋಲ್ ಗೇಟ್‌ನಲ್ಲಿ ಕೊನೆಯ ಬಾರಿ ಪಾಸ್ ಆಗಿದ್ದರ ಬಗ್ಗೆ ನನಗೆ ನೆನಪಿಲ್ಲ. ನನ್ನ ಫಾಸ್ಟ್‌ಟ್ಯಾಗ್ ಖಾತೆ ಪೇಟಿಎಂ ಪಾವತಿ ಬ್ಯಾಂಕ್‌ಗೆ ಲಿಂಕ್ ಮಾಡಲಾಗಿದೆ" ಎಂದು ಜೆನಿಲ್ ಜೈನ್ ತಿಳಿಸಿದರು.
ಅಲೆನ್ ಜೇಮ್ಸ್ ಎಂಬುವರು ಕೂಡ ಇದೇ ರೀತಿಯಾಗಿ 30 ರೂಪಾಯಿ ಕಳೆದುಕೊಂಡಿದ್ದಾರೆ. ಮತ್ತು ಅದೇ ಟೋಲ್ ಗೇಟ್‌ನಲ್ಲಿ. ಫಾಸ್ಟ್ಯಾಗ್ ಮೂಲಕ ಹಣ ಕಡಿತವಾಗಿರುವ ಬಗ್ಗೆ ಅಲೆನ್ ಜೇಮ್ಸ್ ಅವರ ಮೊಬೈಲ್ ನಂಬರ್ಗೆ ಸೆಪ್ಟೆಂಬರ್ 15 ರಂದು ಸಂದೇಶ ಬಂದಿದೆ. ಈ ಸಮಯದಲ್ಲಿ ಅಲೆನ್ ಜೇಮ್ಸ್ ತಮ್ಮ ಕಚೇರಿಯಲ್ಲಿದ್ದರು.
ಅಲೆನ್ ಜೇಮ್ಸ್ ಅವರು ತಮ್ಮ ವಾಹನವನ್ನು ಅವರ ಸಹೋದರರಿಗೆ ನೀಡಿದ್ದರು. ಹಣ ಕಡಿತವಾಗುತ್ತಿದ್ದಂತೆ ಅವರ ಸಹೋದನಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದಾರೆ. "ನೀನು ಬೆಂಗಳೂರು-ಮಂಗಳೂರು ಹೆದ್ದಾರಿ ಟೋಲ್‌ನಲ್ಲಿ ಹಾದು ಹೋಗಿದ್ದಿಯಾ?" ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅಲೆನ್ ಜೇಮ್ಸ್ ಸಹೋದರ "ಇಲ್ಲ, ನಾನು ಮನೆಯಲ್ಲೇ ಇದ್ದೇನೆ" ಎಂದು ಹೇಳಿದ್ದಾರೆ. ಆಗ ಅಲೆನ್ ಜೇಮ್ಸ್ ಅವರಿಗೆ ಕಾರು ಮನೆಯಲ್ಲೇ ಇರುವುದು ಖಚಿತವಾಗಿದೆ.
ಇನ್ನು ಆತಂಕಗೊಂಡ ಅಲೆನ್ ಕೆಲವು ಗಂಟೆಗಳ ಕಾಲ ಮತ್ತೊಂದು ಸಂದೇಶಕ್ಕಾಗಿ ಕಾಯುತ್ತಿದ್ದರು. ವ್ಯಕ್ತಿಯು ಮತ್ತೊಂದು ಟೋಲ್ ಗೇಟ್ ಅನ್ನು ದಾಟಬಹುದು ಮತ್ತು ನನ್ನ ಫಾಸ್ಟ್ಯಾಗ್ ಅನ್ನು ಮತ್ತೆ ಬಳಸಬಹುದು ಎಂದು ಅಲೆನ್ ಜೇಮ್ಸ್ ಭಾವಿಸಿದ್ದರು. ಆದರೆ ಅದು ಹಾಗಾಗಲಿಲ್ಲ. ನಂತರ ಅಲೆನ್ ಜೇಮ್ಸ್ ಅಕೌಂಟ್ನಿಂದ ಕಟ್ ಆಗಿದ್ದ ಸಣ್ಣ ಮೊತ್ತವೆಂದು ಸುಮ್ಮನಾದರು. ಮತ್ತೊಂದು ಪ್ರಕರಣದಲ್ಲಿ ಇದೇ ರೀತಿ ಆಗಿದೆ. ರಾಖಿ ಅನಿಲ್ ಎಂಬುವರ ಪತಿ ಕಚೇರಿಯಲ್ಲಿದ್ದಾಗ ಫಾಸ್ಟ್‌ಟ್ಯಾಗ್ ಮೂಲಕ ಹಣ ಕಳೆದುಕೊಂಡಿದ್ದಾರೆ.
ಈ ಬಗ್ಗೆ ಟೋಲ್‌ನ ಉಸ್ತುವಾರಿ ಅಜಯ್ ಸಿಂಗ್ ಮಾತನಾಡಿ, ಅವ್ಯವಹಾರಗಳಿರಬಹುದು ಆದರೆ ಅವು ಅಪರೂಪ. ಸಾಫ್ಟ್‌ವೇರ್ ಸಮಸ್ಯೆಗಳು ಅಥವಾ ಸ್ಕ್ಯಾನರ್ ವಾಹನದ ನಂಬರ್ ಅನ್ನು ಸ್ಕ್ಯಾನ್ ಅನ್ನು ಸರಿಯಾಗಿ ಮಾಡದೆ ಇರಬಹುದು. ನಾವು ಹೊಸ ಸಾಫ್ಟ್‌ವೇರ್ ಅನ್ನು ಅಳವಡಿಸುತ್ತಿದ್ದೇವೆ ಎಂದು ಹೇಳಿ ಆರೋಪದಿಂದ ಜಾರಿಕೊಂಡಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ್ ಮಾತನಾಡಿ, ಟೋಲ್ ನಿರ್ವಹಣಾ ವ್ಯವಸ್ಥೆ ಸಾಫ್ಟ್‌ವೇರ್‌ನಲ್ಲಿನ ದೋಷಗಳು ಸಮಸ್ಯೆಗೆ ಕಾರಣವಾಗಬಹುದು. ಇದನ್ನು ಸೆಪ್ಟೆಂಬರ್‌ನಲ್ಲಿ ನವೀಕರಿಸಲಾಯಿತು. ಪ್ರತಿ 3-5 ವರ್ಷಗಳಿಗೊಮ್ಮೆ TMS ಅನ್ನು ನವೀಕರಿಸಲಾಗುತ್ತದೆ. ಆದರೆ ಇತ್ತೀಚಿನ ಆವೃತ್ತಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಇನ್ನು ಅನಗತ್ಯವಾಗಿ ಟೋಲ್ ಮೊತ್ತ ಕಡಿತ ಆದರೆ ಇದಕ್ಕಾಗಿಯೇ ಸಹಾಯವಾಣಿ ಸಂಖ್ಯೆಯನ್ನು 93533 77195 ಮೀಸಲಿಡಲಾಗಿದೆ. ದಾಖಲೆ ಸಹಿತ ವಿವರ ನೀಡಿದರೆ ಹಣ ವಾಪಾಸ್‌ಗೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಪರಿಹಾರ ಮಾರ್ಗಗಳು
1. ಇನ್ನು ನಿಮ್ಮ ಹಣ ಟೋಲ್‌ಗಳಲ್ಲಿ ಅನಗತ್ಯವಾಗಿ ಕಡಿತವಾಗಿದ್ದರೆ ಮೊದಲು ನಿಮ್ಮ ಹಣ ಕಡಿತವಾಗಿರುವ ಕುರಿತು ಮಾಹಿತಿ ನೀಡಿ, ಕೂಡಲೇ 1033ಗೆ ಕರೆ ಮಾಡಿ.
2. ಯಾವ ಟೋಲ್‌ನಲ್ಲಿ ಹೀಗೆ ಹಣ ಕಡಿತವಾಗಿದೆ ಎನ್ನುವುದನ್ನು ಗಮನಿಸಿ ಅಲ್ಲಿನ ಟೋಲ್ ಮ್ಯಾನೇಜರ್ ನಂಬರ್ ಪಡೆಯಿರಿ.
3. ನಿಮ್ಮ ಹಣ ಕಡಿತದ ಸ್ಕ್ರೀನ್ ಶಾಟ್ ಸಹಿತ ಮಾಹಿತಿ ಕಳುಹಿಸಿ.
4. ನಿಮ್ಮ ಫಾಸ್ಟ್ಯಾಗ್ ಲಿಂಕ್ ಇರುವ ಬ್ಯಾಂಕ್‌ಗೂ ಮಾಹಿತಿ ನೀಡಿ
5. ಮಾಹಿತಿಗೆ npci.org.inಗೆ ಭೇಟಿ ನೀಡಿ.












Click it and Unblock the Notifications