'ಪಾಕ್ ಸೇನೆಯಿಂದ ಬೆಂಗಳೂರು ಬಂದರು ನಾಶ' ಸುಳ್ಳು ಪೋಸ್ಟ್‌ಗೆ ಕೌಂಟರ್ ಮಾತ್ರ ಬೆಂಕಿ
ಭಾರತ ಹಾಗೂ ಪಾಕಿಸ್ತಾನದ ನಡುವೆ ಕಳೆದ ನಾಲ್ಕೈದು ದಿನಗಳಿಂದ ನಡೆದ ದಾಳಿ ಪ್ರತಿ ದಾಳಿಯು ಅಘೋಷಿತ ಯುದ್ಧದ ವಾತಾವರಣವನ್ನೇ ನಿರ್ಮಿಸಿತ್ತು. ಮತ್ತೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳು, ನಕಲಿ ವಿಡಿಯೋಗಳು ಕೂಡ ಹರಿದಾಡಿ ಜನರ ದಿಕ್ಕುತಪ್ಪಿಸಿವೆ. ಅಚ್ಚರಿ ಎಂದರೆ ಸಿಲಿಕಾನ್ ಸಿಟಿ ಬೆಂಗಳೂರಿನ ಮೇಲೂ ಪಾಕಿಸ್ತಾನ ದಾಳಿ ನಡೆಸಿದೆ ಎಂದು ಪೋಸ್ಟ್ ಮಾಡಲಾಗಿದ್ದು, ಮೊದಲಿಗೆ ಇದನ್ನು ನೋಡಿದವರು ಶಾಕ್ ಕೂಡ ಆಗಿದ್ದಾರೆ. ಆದರೆ ಬುದ್ಧಿವಂತರು ಮುಂದೆ ಬಂದು ಈ ಪೋಸ್ಟ್‌ಗೆ ಬೆಂಕಿ ಕೌಂಟರ್‌ಗಳನ್ನು ನೀಡಿದ್ದಾರೆ.
ಸೋಶಿಯಲ್ ಮೀಡಿಯಾ ಪೋಸ್ಟ್‌ವೊಂದರಲ್ಲಿ "ಪಾಕಿಸ್ತಾನದ ನೌಕಾಪಡೆ ಬೆಂಗಳೂರಿನ ಬಂದರನ್ನು ನಾಶ ಮಾಡಿದೆ" ಎಂದು ಪರಾಕ್ರಮದ ಚಿಹ್ನೆ ಹಾಕಲಾಗಿದೆ. ಇದು ಇಂಟರ್ನೆಟ್ ಬಳಕೆದಾರರ ಗಮನ ಸೆಳೆದಿದೆ. ಮೊದಲಿಗೆ ಬೆಂಗಳೂರಿನ ಮೇಲೂ ದಾಳಿ ಆಯ್ತಾ ಎಂದು ಜನ ಆಘಾತಕ್ಕೂ ಒಳಗಾಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ಕರೆಗಳೇ ನೆಟ್ಟಗೆ ಇಲ್ಲ, ಈ ಬಂದರು ಎಲ್ಲಿಂದ ಬಂತು ಎಂದು ತಲೆಗೆ ಹುಳ ಬಿಟ್ಕೊಂಡಿದ್ದಾರೆ.

ಪಾಕಿಸ್ತಾನಿಗಳು ಈ ರೀತಿ ಬೆಂಗಳೂರಿಗೆ ಸಂಬಂಧಿಸಿದಂತೆ ಸುಳ್ಳುಸುದ್ದಿಗಳನ್ನು ಹಬ್ಬಿಸಿರುವುದು ಆ ಮೇಲೆ ಬೆಳಕಿಗೆ ಬಂದಿದೆ. ಇದು ಗೊತ್ತಾಗಿದ್ದೇ ತಡ, ನಾ ಮುಂದು ತಾ ಮುಂದು ಎಂದು ಬೆಂಕಿ ಉತ್ತರಗಳನ್ನು ನೀಡಿದ್ದಾರೆ. ಪಾಕಿಸ್ತಾನ ನೌಕಾಪಡೆ ಬೆಂಗಳೂರು ಬಂದರನ್ನು ನಾಶ ಮಾಡಿರುವ ಬಗ್ಗೆ ಪಾಕಿಸ್ತಾನಿಗಳು ಸೆಲೆಬ್ರೇಷನ್ ಕೂಡ ಮಾಡಿದ್ದಾರೆ.
ಬಳಿಕ ಪಾಕಿಸ್ತಾನಿಗಳನ್ನು ಸಾಮಾನ್ಯ ಜ್ಞಾನ ಇಲ್ಲದವರು ಎಂದು ಸಾವಿರಾರು ಭಾರತೀಯರು ಈ ಕಾಮೆಂಟ್‌ಗೆ ಗೇಲಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇಲ್ಲದ ಬಂದರು ಈಗ ಎಲ್ಲಿಂದ ಬಂತು? ಎಂದು ಮೊದಲಿಗೆ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಅಯ್ಯೋ ಕರ್ಮವೇ ಮ್ಯಾಪ್‌ನಲ್ಲಿ ನೋಡ್ರೋ, ಬೆಂಗಳೂರು ಸಮುದ್ರದ ಹತ್ತಿರ ಎಲ್ರೋ ಇದೆ ಎಂದು ಶೇಪ್‌ಔಟ್ ಮಾಡಿದ್ದಾರೆ. ಕೆಲವರು ಮ್ಯಾಪ್ ಕೂಡ ಶೇರ್ ಮಾಡಿ ಪಾಕಿಸ್ತಾನಿಗಳಿಗೆ ಟಕ್ಕರ್ ನೀಡಿದ್ದಾರೆ. ಈ ಪೋಸ್ಟ್‌ನಿಂದ ರೊಚ್ಚಿಗೆದ್ದ ಬೆಂಗಳೂರಿಗರು ತಮ್ಮದೇ ಸ್ಟೈಲಲ್ಲಿ ಉತ್ತರ ನೀಡಿದ್ದಾರೆ. ನೀವು ಹೇಳಿದಂತೆ ಬೆಂಗಳೂರಿನ ಒಂದು ಪೋರ್ಟ್ ಇದೆ. ಅದು ಯುಎಸ್‌ಬಿ ಪೋರ್ಟ್ ಎಂದು ಅಣಕಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನಿ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ನೌಕಾಪಡೆಯು ಬೆಂಗಳೂರು ಬಂದರನ್ನು ನಾಶಪಡಿಸಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ವಾಸ್ತವದಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಕರಾವಳಿಯಿಂದ ಕನಿಷ್ಠ 300 ಕಿ.ಮೀ ದೂರದಲ್ಲಿದೆ ಎಂದು ತಿಳಿಹೇಳಿ ಆ ಕಾಮೆಂಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡು ಅಪಹಾಸ್ಯ ಮಾಡಿದ್ದಾರೆ.
ಎಐ ಫೋಟೋ ಮೂಲಕ ತಿರುಗೇಟು
ಪಾಕಿಸ್ತಾನಿಗಳ ಈ ಪೋಸ್ಟ್‌ಗೆ ಕೌಂಟರ್ ನೀಡಿರುವ ಬೆಂಗಳೂರಿಗರು ಎಐ ಫೋಟೋ ಮೂಲಕ ಬೆಂಗಳೂರು ಬಂದರನ್ನು ರಚಿಸಿದ್ದಾರೆ. ಬೆಂಗಳೂರು ಬಂದರನ್ನು ನಾಶಪಡಿಸಿದ್ದಕ್ಕಾಗಿ ಪಾಕಿಸ್ತಾನಕ್ಕೆ ಅಭಿನಂದನೆಗಳು. ಭಾರತದ ಸಿಲ್ಕ್ ಬೋರ್ಡ್, ಟಿನ್ ಫ್ಯಾಕ್ಟರಿ, ಹೆಬ್ಬಾಳ, ಗೋರಗುಂಟೆಪಾಳ್ಯ, ಕೆಂಗೇರಿ ಮತ್ತು ವೈಟ್‌ಫೀಲ್ಡ್ ನೌಕಾ ನೆಲೆಗಳಲ್ಲಿನ ಸುಧಾರಿತ ರಕ್ಷಣಾ ಪ್ರತಿಬಂಧಕ ವ್ಯವಸ್ಥೆಗಳನ್ನು ಅವರು ಹೇಗೆ ಭೇದಿಸಿದ್ದಾರೆ ಎಂಬುದನ್ನು ನೋಡಿ ಇಡೀ ಜಗತ್ತು ಆಘಾತಕ್ಕೊಳಗಾಗಿದೆ. ಬೆಂಗಳೂರಿನಲ್ಲಿ ಸುರಕ್ಷಿತವಾಗಿರಿ ಎಂದು ಅಪಹಾಸ್ಯ ಮಾಡಿದ್ದಾರೆ.












Click it and Unblock the Notifications