ಇನ್ಮುಂದೆ ಎಟಿಎಂ ವಾಹನಕ್ಕೆ ಗೈಡ್‌ಲೈನ್, ಚುನಾವಣಾ ಆಯೋಗ ಸೂಚನೆ

ಬೆಂಗಳೂರು, ಮಾರ್ಚ್ 6: ಇನ್ನುಮುಂದೆ ಎಟಿಎಂ ವಾಹನಗಳಿಗೂ ಗೂಡ ಕೆಲವು ನಿಯಮಗಳನ್ನು ಚುನಾವಣಾ ಆಯೋಗ ವಿಧಿಸಿದೆ. ಈ ಕುರಿತು ಸುತ್ತೋಲೆಯನ್ನು ಎಲ್ಲಾ ಬ್ಯಾಂಕ್‌ಗಳಿಗೂ ಕಳುಹಿಸಲಾಗಿದೆ.

ಲೋಕಸಭಾ ಚುನಾವಣೆ ಅಕ್ರಮ ತಡೆಯುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅನುಮಾನಾಸ್ಪದ ಬ್ಯಾಂಕ್ ಖಾತೆಗಳಲ್ಲಿನ ಹಣ ವರ್ಗಾವಣೆ ಮೇಲೆ ನಿಗಾ ಇಡಲು ಆರಂಭಿಸಿರುವ ಚುನಾವಣಾ ಆಯೋಗ ಈ ಎಲ್ಲಾ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬಿಸುವ ವಾಹನಗಳಿಗೆ ಮಾರ್ಗಸೂಚಿ ಹೊರಡಿಸಿದೆ.

ರ ವಿಧಾನಸಭಾ ಚುನಾವಣೆ,ರ ಲೋಕಸಭಾ ಚುನಾವೆ ವೇಳೆ ಅನೇಕ ಅಕ್ರಮ ಹಣ ಸಾಗಾಟ ನಡೆದಿತ್ತು. ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳು ಪ್ರಮುಖವಾಗಿ ಬಳಸಿಕೊಂಡಿದ್ದರು.

Election commission made a guidelines for ATM vehicles

ಬ್ಯಾಂಕ್‌ಗಳ ಎಟಿಎಂಗಳಿಗೆ ಹಣ ತುಂಬಿಸಲು ಖಾಸಗಿ ಸೆಕ್ಯುರಿಟಿ ಏಜೆನ್ಸಿ ವಾಹನಗಳನ್ನು ಬಳಸಿಕೊಳ್ಳುತ್ತಿವೆ. ರಾಜಕೀಯ ಪಕ್ಷಗಳು ಪ್ರಭಾವ ಬೀರಿ ಈ ವಾಹನಗಳಲ್ಲಿ ಚುನಾವಣಾ ಬಳಕೆಗಾಗಿ ಹಣವನ್ನು ವರ್ಗಾಯಿಸುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.

ನಿಯಮಗಳೇನೇನು?
-ಹಣ ಸಾಗಣೆ ವಾಹನವು ನಿಗದಿತ ಮಾರ್ಗದಲ್ಲೇ ಸಂಚರಿಸಬೇಕು.
-ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಾಗಾಟ ಸಂದರ್ಭದಲ್ಲಿ ಕಡ್ಡಾಯವಾಗಿ ಇಟ್ಟುಕೊಂಡಿರಲೇಬೇಕು. ಎಲ್ಲಿಂದ ಎಲ್ಲಿಗೆ ಸಾಗಾಟ? ಯಾವ ಉದ್ದೇಶದ ಹಣ, ಎಂಬುದು ಸ್ಪಷ್ಟವಾಗಿರಬೇಕು.
ಬ್ಯಾಂಕ್ ನಿಯೋಜಿತ ನೌಕರ ತನ್ನ ಗುರುತಿನ ಚೀಟಿಯೊಂದಿಗೇ ಹಣ ಸಾಗಣೆ ವೇಳೆ ಹಾಜರಿರಬೇಕು.
-ಹಣ ಸಾಗಣೆ ಸಂದರ್ಭದಲ್ಲಿ ಸಂಬಂಧಪಟ್ಟ ಭದ್ರತಾ ಸಿಬ್ಬಂದಿ ಇರಬೇಕಾಗುತ್ತದೆ.
-ಬ್ಯಾಂಕ್‌ಗಳ ಅಧಿಕೃತ ವಾಹನ ಅಥವಾ ಬ್ಯಾಂಕ್ ಗುರುತಿಸಲ್ಪಟ್ಟ ವಾಹನಗಳಲ್ಲಿ ಮಾತ್ರ ಹಣ ವರ್ಗಾವಣೆ ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+