ಈಶ್ವರ ಖಂಡ್ರೆ ಸಹೋದರಿ ಪುತ್ರನ ನಾಪತ್ತೆ ಪ್ರಕರಣ ಸುಖಾಂತ್ಯ

ಸಚಿವ ಈಶ್ವರ್ ಖಂಡ್ರೆ ಅವರ ಸಹೋದರಿಯ ಪುತ್ರ ಹೈದರಾಬಾದ್ ನಲ್ಲಿ ಪತ್ತೆ. ಗುರುವಾರ (ಆಗಸ್ಟ್ 31 ) ಸಂಜೆ ಸ್ನೇಹಿತರ ಜತೆಯಲ್ಲಿ ಮನೆಯಿಂದ ಪರಾರಿಯಾಗಿದ್ದ ಲಕ್ಷ್ಯ.

ಬೆಂಗಳೂರು, ಸೆಪ್ಟಂಬರ್ 1: ಕಳೆದೊಂದು ದಿನದಿಂದ ನಾಪತ್ತೆಯಾಗಿದ್ದ, ಸಚಿವ ಈಶ್ವರ ಖಂಡ್ರೆ ಅವರ ಸಹೋದರಿಯ ಪುತ್ರ ಲಕ್ಷ್ಯ ಅವರ ಪ್ರಕರಣ ಸುಖಾಂತ್ಯ ಕಂಡಿದೆ.

ತನ್ನ ಸ್ನೇಹಿತರೊಂದಿಗೆ ನಾಪತ್ತೆಯಾಗಿದ್ದ ಲಕ್ಷ್ಯ ಅವರು ಹೈದರಾಬಾದ್ ನಲ್ಲಿ ಪತ್ತೆಯಾಗಿದ್ದು, ಅವರನ್ನು ಸಂಧಿಸಿರುವ ಬೀದರ್ ಪೊಲೀಸರು ಆ ಹುಡುಗರೆಲ್ಲರನ್ನೂ ಬೆಂಗಳೂರಿಗೆ ಕರೆತರುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

Eeshwar Khandre's sister son disappear case turned into happy ending

ಗುರುವಾರ ಸಂಜೆ, ಖಂಡ್ರೆ ಅವರ ಸಹೋದರಿ ಜ್ಯೋತ್ಸ್ನಾ ಅವರ ಮನೆಯಿಂದ ಲಕ್ಷ್ಯ ತನ್ನ ಸ್ನೇಹಿತರ ಜತೆಗೆ ಪರಾರಿಯಾಗಿದ್ದ. ಮನೆಯ ಮುಂದೆ ಆಟೋವೊಂದನ್ನು ನಿಲ್ಲಿಸಿ ಅದರಲ್ಲೇ ಸ್ಕೂಲ್ ಬ್ಯಾಗ್ ಸಮೇತ ಪರಾರಿಯಾಗಿದ್ದ ಆತ.

ಯಾರಿಗೂ ಏನನ್ನೂ ಹೇಳದೇ ಆತ ಹೋಗಿದ್ದು ಹಾಗೂ ಸ್ನೇಹಿತರೊಂದಿಗೆ ಸ್ಕೂಲ್ ಬ್ಯಾಗನ್ನೂ ತೆಗೆದುಕೊಂಡು ಹೋಗಿದ್ದು ಅನೇಕ ಗೊಂದಲಗಳಿಗೆ ಕಾರಣವಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಕೊನೆಗೂ ಆತ ಹೈದರಾಬಾದ್ ನಲ್ಲಿ ಇರುವ ವಿಚಾರ ಪತ್ತೆಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+