30 ಮಕ್ಕಳ ಪ್ರಾಣ ಉಳಿಸಿತು ಚಾಲಕನ ಸಮಯಪ್ರಜ್ಞೆ
ಬೆಂಗಳೂರು, ಸೆ. 17 : ಶಾಲಾ ಬಸ್‌ನ ಎಡಭಾಗದ ಹಿಂಬದಿ ಚಕ್ರ ಕಳಚಿದರೂ ಚಾಲಕನ ಸಮಯಪ್ರಜ್ಞೆ 30 ಮಕ್ಕಳ ಜೀವ ಉಳಿಸಿದೆ.
ಅತ್ತಿಬೆಲೆಯ ಬಳಿಯ ಮಂಚನಹಳ್ಳಿ ಸೇಂಟ್ ಫಿಲೋಮಿನಾ ಶಾಲೆಯ ಬಸ್ ವಿದ್ಯಾರ್ಥಿಗಳನ್ನು ಕರೆತರುತ್ತಿದ್ದಾಗ ಎಡಭಾಗದ ಹಿಂಬದಿ ಚಕ್ರ ದಾಸನಪುರ ರಸ್ತೆಯಲ್ಲಿ ಕಳಚಿಕೊಂಡಿದೆ. ಇದರಿಂದ ನಿಯಂತ್ರಣ ತಪ್ಪಿದ ವಾಹನ ಅಡ್ಡಾದಿಡ್ಡಿ ಚಲಿಸಿದೆ.(5,8ನೇ ತರಗತಿಗೆ ಮಕ್ಕಳಿಗಿನ್ನು ಪಬ್ಲಿಕ್ ಪರೀಕ್ಷೆ?)

ಆದರೆ ಚಾಲಕ ರಾಜು ಸಮಯಪ್ರಜ್ಞೆ ಮೆರೆದು ವಾಹನವನ್ನು ನಿಯಂತ್ರಣಕ್ಕೆ ತಂದಿದ್ದಾರೆ. ನಿಧಾನವಾಗಿ ಚಲಿಸುತ್ತಿದ್ದ ಬಸ್ ಅನ್ನು ಸುರಕ್ಷಿತವಾಗಿ ನಿಲ್ಲಿಸಿದ್ದಾರೆ. ಈ ವೇಳೆ ಎಡಭಾಗದ ಹಿಂಬದಿಯ ಇನ್ನೊಂದು ಚಕ್ರವು ಕಳಚಿಕೊಂಡಿದೆ. ಆದರೆ ಮಕ್ಕಳೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಾಲೆಗೆ ಭೇಟಿ ನೀಡಿದ ಬಿಇಒ ರಾಮಮೂರ್ತಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ಬಸ್ ಚಕ್ರ ಕಳಚಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು. ಚಕ್ರ ಬದಲಿಸುವ ವೇಳೆ ಬೋಲ್ಟ್‌ಗಳನ್ನು ಸರಿಯಾಗಿ ಕೂರಿಸದಿರುವುದೇ ಅವಘಡಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.











Click it and Unblock the Notifications