ನೈಸ್‌ರೋಡ್ ಸುತ್ತ ಇರುವ ಅಕ್ರಮ ಬಡಾವಣೆಗಳ ಬಗ್ಗೆ ಎಚ್ಚರವಿರಲಿ
ಬೆಂಗಳೂರು, ಜನವರಿ 17: ಬೆಂಗಳೂರು ಸುತ್ತಮುತ್ತ ಇರುವ ಆಸುಪಾಸಿನಲ್ಲಿ ಅಕ್ರಮ ಬಡಾವಣೆಗಳು ತಲೆ ಎತ್ತುತ್ತಿವೆ. ಈ ಬಡಾವಣೆಗಳಲ್ಲಿ ನಿವೇಶನಕೊಳ್ಳುವ ಮುನ್ನ ಸಾರ್ವಜನಿಕರು ಎಚ್ಚರವಹಿಸುವುದು ಒಳಿತು.
ನೈಸ್‌ರೋಡ್ ಸುತ್ತಮುತ್ತ ಅಧಿಕೃತ ಬಡಾವಣೆಯೆಂದು ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ರೀತಿಯ ಮೋಸ ಹಾಗೂ ಆಮಿಷಗಳಿಗೆ ಜನರು ಬಲಿಯಾಗಬಾರದೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಬೆಂಗಳೂರು-ತುಮಕೂರು ರಸ್ತೆ-ಹೊಸೂರು ರಸ್ತೆಯ ನಾಲ್ಕು ರಸ್ತೆಗಳ ಸುಮಾರು 111 ಕಿ.ಮೀ ಆಸುಪಾಸಿನಲ್ಲಿ ಹಾಗೂ ಬೆಂಗಳೂರು-ತಮಕೂರು ನಡುವಿನ 125 ಹಳ್ಳಿಗಳು ಮತ್ತು ಕೆಲವಡೆ 171 ಚದರ ಕಿ.ಮೀ ವ್ಯಾಪ್ತಿಯಲ್ಲಿ ಬಿಎಂಐಸಿ ವ್ಯಾಪ್ತಿಗೆ ಈ ಜಾಗಗಳು ಬರುತ್ತವೆ.

ಅನುಮತಿ ಇಲ್ಲದೆ ಬಡಾವಣೆಗಳನ್ನು ನಿರ್ಮಿಸುವಂತಿಲ್ಲ ಆದರೆ, ಇವರ ಅನುಮತಿ ಇಲ್ಲದೆ ಸಾಕಷ್ಟು ಬಡಾವಣೆಗಳು ತಲೆ ಎತ್ತುತ್ತಿವೆ. ಇದರಿಂದ ಸಾರ್ವಜನಿಕರು ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ನ ಉಪ ನಿರ್ದೇಶಕ ಹರ್ಷಾ ಅವರು ಹೇಳುವ ಪ್ರಕಾರ ಬೆಂಗಳೂರು-ಮೈಸೂರು ಕಾರಿಡಾರ್‌ಗೆ ಹೊಂದಿಕೊಂಡಂತಿರುವ ಕೆಲವು ಕಡೆಗಳಲ್ಲಿ ಅಕ್ರಮ ಲೇಔಟ್‌ಗಳನ್ನು ಸ್ಥಾಪಿಸುತ್ತಿರುವ ಕುರಿತು ದೂರುಗಳು ಬಂದಿವೆ. ಆ ಸ್ಥಳ ಪರಿಶೀಲನೆಗೆಂದು ಹೋದಾಗ ಈ ಘಟನೆಗಳು ಬೆಳಕಿಗೆ ಬಂದಿವೆ.

ಕೆಲವು ಲೇಔಟ್‌ಗಳು ಈ ಕಾರಿಡಾರ್ ನಿರ್ಮಾಣ ಪ್ರದೇಶದಲ್ಲಿ ಬಂದಿದ್ದರೆ ಮನೆ, ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಬೇಕಿದ್ದರೆ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ಮೈಸೂರು ರಸ್ತೆಯ ಕುಂಬಳಗೋಡಿನಲ್ಲಿಯೂ ಇಂತಹ ಕೆಲವು ಘಟನೆಗಳು ಬೆಳಕಿಗೆ ಬಂದಿವೆ ಶೀಘ್ರವೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications