Darshan Thoogudeepa Case: ಪವಿತ್ರಾ ಗೌಡಗೆ ಕಳುಹಿಸಿದ್ದ ಅಶ್ಲೀಲ ಸಂದೇಶಗಳ ದತ್ತಾಂಶ ಸಂಗ್ರಹ-ಮಾಹಿತಿ ಇಲ್ಲಿದೆ
Darshan Thoogudeepa Case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹಾಗೆಯೇ ಇದೀಗ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮೊಬೈಲ್‌ನಿಂದ ಏನೆಲ್ಲಾ ಅಶ್ಲೀಲ ಸಂದೇಶಗಳು ರವಾನೆಯಾಗಿವೆ ಎನ್ನುವ ದತ್ತಾಂಶವನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ವಿವರವನ್ನು ಇಲ್ಲಿ ತಿಳಿಯಿರಿ.
ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ನಟ ದರ್ಶನ್ & ಗ್ಯಾಂಗ್ ಭೀಕರವಾಗಿ ಹತ್ಯ ಮಾಡಿತ್ತು ಎನ್ನುವ ಮಾಹಿತಿ ಲಭ್ಯವಾಗಿತ್ತು. ಬಳಿಕ ಪೊಲೀಸರು ರೇಣುಕಾಸ್ವಾಮಿ ಮೊಬೈಲ್ ಪತ್ತೆ ಹಚ್ಚಲು ಮುಂದಾಗಿದ್ದರು. ಇದೀಗ ಅವರ ಫೋನ್‌ನಿಂದ ಪವಿತ್ರಾ ಗೌಡಗೆ ರವಾನೆಯಾಗಿರುವ ಅಶ್ಲೀಲ ಸಂದೇಶಗಳ ದತ್ತಾಂಸವನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎಂದು ತಿಳಿಸುಬಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ & ಗ್ಯಾಗ್ ಜೈಲು ಸೇರಿದೆ. ಇನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವಂತಹ ಎಸ್‌ಐಟಿ ಪೊಲೀಸರು, ಇದೀಗ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ತನ್ನ ಮೊಬೈಲ್‌ನಿಂದ ಕಳುಹಿಸಿದ್ದಂತಹ ಅಶ್ಲೀಲ ಸಂದೇಶಗಳ ದತ್ತಾಂಶವನ್ನು ಸಂಗ್ರಹಣೆ ಮಾಡಿರುವುದಾಗು ತಿಳಿದುಬಂದಿದೆ.
ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎಂಬ ಒಂದೇ ಕಾರಣಕ್ಕೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದ್ದು, ಬಳಿಕ ಆತನ ಮೃತದೇಹವನ್ನು ಮೋರಿಗೆ ಎಸೆದಿದ್ದರು.
ಮೃತದೇಹ ಪತ್ತೆಯಾದ ಬಳಿಕ ರೇಣುಕಾಸ್ವಾಮಿ ಕೊಲೆ ಹಿಂದಿನ ಅಸಲಿ ಕಾರಣ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದದ್ದು ಎಂಬುದಾಗಿ ಪೊಲೀಸರಿಗೆ ತಿಳಿದುಬಂದಿತ್ತು. ಆದ್ದರಿಂದ ಆತನ ಮೊಬೈಲ್ ಸಂಖ್ಯೆಯ ಮೂಲಕ ಆತ ಬಳಸುತ್ತಿದ್ದಂತಹ ಸಾಮಾಜಿಕ ಜಾಲತಾಣಗಳಲ್ಲಿನ ದತ್ತಾಂಶ ಮಾಹಿತಿ ಸಂಗ್ರಹಿಸುವುದಕ್ಕೆ ಎಸ್‌ಐಟಿ ಪೊಲೀಸರು ಮುಂದಾಗಿದ್ದರು.
ರೇಣುಕಾಸ್ವಾಮಿ ಬಳಸುತ್ತಿದ್ದಂತಹ ಎರಡು ಪೋನ್ ನಂಬರ್‌ಗಳ ಪೈಕಿ ಒಂದು ನಂಬರ್ ಪತ್ನಿ ಹೆಸರಿನಲ್ಲಿ ಖರೀದಿ ಮಾಡಿದ್ದರು. ಆ ನಂಬರ್ ಅನ್ನು ಸರ್ವೀಸ್ ಪ್ರೊವೈಡಿಂಗ್ ಕಂಪನಿಗೆ ಕಳುಹಿಸಿ, ಎರಡು ಪೋನ್ ನಂಬರ್‌ನ ನಕಲಿ ಸಿಮ್ ಕಾರ್ಡ್ ಖರೀದಿಸಿದ್ದಂತಹ ಪೊಲೀಸರು, ಆತನ ಸಾಮಾಜಿಕ ಜಾಲತಾಣ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲದೆ, ರೇಣುಕಾಸ್ವಾಮಿ ಬಳಸುತ್ತಿದ್ದಂತಹ ಸಾಮಾಜಿಕ ಖಾತೆಗಳಿಗೆ ಪ್ರವೇಶಿಸಿರುವಂತಹ ಪೊಲೀಸರು, ಸಿಇಎನ್ ಠಾಣೆಯ ತಜ್ಞರ ಸಹಾಯದಿಂದ ಅದರಲ್ಲಿ ಇದ್ದಂತಹ ದತ್ತಾಂಶವನ್ನು ಕಲೆ ಹಾಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications