Darshan in Jail: ದರ್ಶನ್‌ ಜೈಲಿನಲ್ಲಿ ಓದುತ್ತಿರುವ ಪುಸ್ತಕಗಳು ಯಾವವು?

ನಟ ದರ್ಶನ್‌ ತೂಗುದೀಪ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಹೊರಗಡೆ ಐಶಾರಾಮಿ ಜೀವನ ನಡೆಸಿದ್ದ ನಟ ದರ್ಶನ್‌, ನರಕದ ದರ್ಶನವನ್ನು ಮಾಡುತ್ತಿದ್ದಾರೆ. ದಿನವೂ ಜೈಲಿನಲ್ಲಿ ದಿನವೂ ಸಮಯವನ್ನು ಹೇಗೆ ಕಳೆಯುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಿಗೆ ಇರುತ್ತದೆ.

ದರ್ಶನ್‌ ಮೈಸೂರಿನಲ್ಲಿ ಜೂನ್‌ 11 ರಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದರು. ಅಂದಿನಿಂದ ಸುಮಾರು 12 ದಿನಗಳ ಕಾಲ ಪೊಲೀಸ್‌ ಕಸ್ಟಡಿಯಲ್ಲಿದ್ದ ದರ್ಶನ್‌, ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದ್ಯ ಇವರನ್ನು ಪರಪ್ಪನ ಅಗ್ರಹಾರ ಕಾರಾಗ್ರಹದಲ್ಲಿ ಇಟ್ಟಿದ್ದಾರೆ.

Darshan in Jail What are the books Darshan is reading in Jail

ನರಕ ದರ್ಶನ

ಹೊರ ಜಗತ್ತಿನಲ್ಲಿ ತನ್ನದೇ ಆದ ಜಗತ್ತಿನಲ್ಲಿ ರಾಜನಂತೆ ಮೆರೆಯುತ್ತಿದ್ದ ದರ್ಶನ್‌, ಜೈಲಿನಲ್ಲಿ ದಾಸನಂತೆ ಆಗಿದ್ದಾರೆ. ಇವರಿಗೆ ಅಲ್ಲಿಯ ಊಟ ಒಗ್ಗುತ್ತಿಲ್ಲ. ಮಲಗಲು ಸಹ ತೊಂದರೆ ಆಗುತ್ತಿದೆ. ಮನೆಯೂಟವನ್ನು ನೀಡುವಂತೆ ದರ್ಶನ್‌, ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ನಡುವೆ ದರ್ಶನ್‌ ಅವರನ್ನು ಭೇಟಿ ಆಗಿ ಬಂಧ ಖೈದಿ ಒಬ್ಬರು ದರ್ಶನ್‌ ಸ್ಥಿತಿಗತಿಯನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ.

ದರ್ಶನ್‌ ಜೈಲಿನಲ್ಲಿ ಏನನ್ನು ಮಾಡುತ್ತಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ಇದಕ್ಕೆ ಉತ್ತರವಾಗಿ ಸನ್ನಡತೆಯ ಆಧಾರದ ಮೇಲೆ ಬಿಡುಗಡೆಯಾದ ಸಿದ್ಧಾರೂಢ ಅವರು ಉತ್ತರ ನೀಡಿದ್ದಾರೆ. ಜೈಲಿನಲ್ಲಿ ದರ್ಶನ್‌ ಅವರನ್ನು ಭೇಟಿ ಮಾಡುವ ಅವಕಾಶವನ್ನು ಪಡೆದಿದ್ದ, ಸಿದ್ಧಾರೂಢ ಜೈಲಿನಲ್ಲಿ ತಾ ಕಂಡ ದರ್ಶನ್‌ ಬಗ್ಗೆ ತಿಳಿಸಿದ್ದಾರೆ.

ಯಾವೆಲ್ಲಾ ಪುಸ್ತಕಗಳನ್ನು ಓದುತ್ತಿದ್ದಾರೆ ದರ್ಶನ್‌?

ಎಲ್ಲ ಖೈದಿಗಳಿಗೂ ಇರುವ ಅವಕಾಶದಂತೆ ದರ್ಶನ್‌ಗೂ ಜೈಲಿನಲ್ಲಿರುವ ಗ್ರಂಥಾಲಯವನ್ನು ಉಪಯೋಗಿಸುವ ಅವಕಾಶ ಸಿಕ್ಕಿದೆ. ಅವರ ರೂಮ್‌ನಲ್ಲಿ ಹತ್ತು ಹಲವು ಪುಸ್ತಕಗಳನ್ನು ಅಭಿಮಾನಿ ಸಿದ್ಧಾರೂಢ ನೋಡಿದ್ದಾರೆ. ಅಲ್ಲದೆ ಆ ಪುಸ್ತಕಗಳ ಸಹಾಯದಿಂದಲೇ ಶಾಂತಿಯನ್ನು ಕಂಡುಕೊಳುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಸಿದ್ಧಾರೂಢ ಹೇಳಿದ್ದಾರೆ.

ದರ್ಶನ್‌ ಅವರ ರೂಮ್‌ನಲ್ಲಿ ಯೋಗಿ ಆತ್ಮಕಥೆ, ಇಸ್ಕಾನ್ ಸಂಸ್ಥೆಯ ಭಗವತ್‌ಗೀತೆ, ತುಸು ಶಾಮರಾಯರು ವಚನ ಭಾಗವತ, ರಾಮಾಯಣ, ಮಹಾಭಾರತ, ವಿವೇಕಾನಂದ ಅವರ ಕೆಲವು ಪುಸ್ತಕಗಳು ಇದ್ದವು ಎಂದು ಸಿದ್ಧಾರೂಢ ತಿಳಿಸಿದ್ದಾರೆ.

ದರ್ಶನ್‌ ಜೈಲಿಗೆ ಹೋಗುತ್ತಿದ್ದಂತೆ ಅವರ ಗುರುಗಳು ಅವರಿಗೆ ಜೈಲಿನಲ್ಲಿ ಏನು ಮಾಡಿ ಹೊರ ಬರಬೇಕು ಎಂಬುದನ್ನು ತಿಳಿಸಿದ್ದರು. ಅದರಂತೆ ಜೈಲಿನಲ್ಲಿ ಸ್ವಾಮಿ ವಿವೇಕಾನಂದ್, ಡಾಕ್ಟರ್‌ ರಾಜಕುಮಾರ್‌ ಅವರ ಪುಸ್ತಕಗಳನ್ನು ಓದುವಂತೆ ಸಲಹೆಯನ್ನು ನೀಡಿದ್ದರು. ಅದರಂತೆ ದರ್ಶನ್‌ ಸೆಲ್‌ನಲ್ಲಿ ಪುಸ್ತಕಗಳನ್ನು ಓದುತ್ತಿರುವುದು ನಿಜಕ್ಕೂ ಗುರಿವಿಗೆ ಸಮಾಧನ ತಂದಿರುವುದಂತೂ ಸುಳ್ಳು ಅಲ್ಲವೇ ಅಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+