New Year on Brigade Road : ಬೆಂಗಳೂರು: ಬ್ರಿಗೇಡ್ ರೋಡ್‌ನಲ್ಲಿ ಮತ್ತೆ ಜನರ ದಂಡು, ವ್ಯಾಪಾರಿಗಳಲ್ಲಿ ಹೊಸ ಭರವಸೆ
ಬೆಂಗಳೂರು, ಡಿ. 26: ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ಗಳಲ್ಲಿ ಈ ಬಾರಿಯ ಹಬ್ಬ ಹರಿದಿನಗಳಲ್ಲಿ ಭಾರಿ ಜನಸಂದಣಿ ಕಂಡು ಬರುತ್ತಿದೆ. ಕಾಲ್ತುಳಿತದ ಸಂಭವದಿಂದಾಗಿ ಟ್ರಾಫಿಕ್ ಪೊಲೀಸರು ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದ ಘಟನೆ ಕೂಡ ಶನಿವಾರ ನಡೆದಿದೆ.
ಈ ಜನಸಂದಣಿಯು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ಗಳಲ್ಲಿನ ವ್ಯಪಾರಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಕೊರೊನಾದಿಂದಿ ಅಂಗಡಿ ಮುಚ್ಚುದ್ದ, ನಷ್ಟದಲ್ಲಿ ಅಂಗಡಿ ಮುನ್ನಡೆಸುತ್ತಿದ್ದ ಹಲವರು ವ್ಯಾಪಾರ ವಹಿವಾಟಿನ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ.
ಎಂಜಿ ರೋಡ್, ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿರುವ ವ್ಯಾಪಾರ ಸಂಸ್ಥೆಗಳು ತಮ್ಮ ಮಾರಾಟವು ಕೋವಿಡ್ ಮುಂಚಿನ ಮಟ್ಟಕ್ಕೆ ಮರಳುತ್ತದೆ ಎಂಬ ಭರವಸೆಯಲ್ಲಿವೆ. ಬ್ರಿಗೇಡ್ ರಸ್ತೆಯಲ್ಲಿ ಮಾತ್ರ 2020 ಮತ್ತು 2021ರ ಕೋವಿಡ್ ಪೀಡಿತ ವರ್ಷಗಳಲ್ಲಿ 35 ಅಂಗಡಿಗಳನ್ನು ಮುಚ್ಚಲಾಗಿದ್ದು, ಈಗ ವ್ಯಾಪಾರ ಸಂಸ್ಥೆಗಳು ಮತ್ತೆ ಹಳೆಯ ವ್ಯವಹಾರಕ್ಕೆ ಸಿದ್ಧವಾಗುತ್ತಿವೆ.

ಬ್ರಿಗೇಡ್ ರಸ್ತೆಯಲ್ಲಿರುವ ಎಲ್ಲಾ 125 ಅಂಗಡಿಗಳು ಈಗ ವ್ಯಾಪಾರಕ್ಕಾಗಿ ತೆರೆದಿವೆ. 'ಚಿಲ್ಲರೆ ಮಾರಾಟದಲ್ಲಿ ಶೇ.32-35ರಷ್ಟು ಏರಿಕೆಯಾಗಿದೆ' ಎಂದು ಬ್ರಿಗೇಡ್ ರಸ್ತೆಯ ಅಡಿಡಾಸ್‌ನ ಸಹಾಯಕ ವ್ಯವಸ್ಥಾಪಕಿ ಇನಾಶ್ರೀ ಹೇಳಿದ್ದಾರೆ.
"ಜನರು ಕೋವಿಡ್ ಜೊತೆಗೆಗೆ ಬದುಕುವ ವಿಶ್ವಾಸ ಹೊಂದಿದ್ದಾರೆ. ಗ್ರಾಹಕರು ಲಸಿಕೆ ಮತ್ತು ಬೂಸ್ಟರ್ ಡೋಸ್‌ಗಳನ್ನು ತೆಗೆದುಕೊಂಡಿರುವುದರಿಂದ ಯಾವುದೇ ಭಯವಿಲ್ಲ" ಎಂದು ಇನಾಶ್ರೀ ಭರವಸೆ ವ್ಯಕ್ತಪಡಿಸಿದ್ದಾರೆ.
" ಕಳೆದ ಎರಡು ವರ್ಷಗಳಿಂದ ಲಾಕ್‌ಡೌನ್‌ಗಳು ಮತ್ತು ಕೊರೊನಾ ನಿರ್ಬಂಧಗಳಿಂದ ವ್ಯಾಪಾರ ವ್ಯವಹಾರಗಳು ಬಳಲುತ್ತಿದ್ದವು. ಕೋವಿಡ್ ಸಮಯದಲ್ಲಿ, 35 ಅಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಯಿತು, ಮಾರಾಟವು ಕುಸಿಯಿತು. ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡರು. ಈ ಬಾರಿ ರಸ್ತೆಯಲ್ಲಿ ಅಲಂಕಾರ ಮತ್ತು ವಿದ್ಯುತ್ ದೀಪಗಳಿಂದ ಂಗೊಳಿಸುವುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇವೆ" ಎಂದು ಬ್ರಿಗೇಡ್ ರಸ್ತೆಯ ವ್ಯಾಪಾರಿ ಪ್ರಜ್ಞಾ ಮಾಲು ಹೇಳಿದ್ದಾರೆ.

"ಹೊಸ ವರ್ಷವನ್ನು ಎಂದಿನಂತೆ ದೀಪಾಲಂಕಾರ, ಅಲಂಕಾರದೊಂದಿಗೆ ಆಚರಿಸುತ್ತಿದ್ದೇವೆ. ಪ್ರತಿ ವರ್ಷದಂತೆ ಬ್ರಿಗೇಡ್ ರೋಡ್ ಅಸೋಸಿಯೇಷನ್ ಸುಮಾರು 12 ರಿಂದ 13 ಲಕ್ಷ ರೂಪಾಯಿ ವೆಚ್ಚದಲ್ಲಿ 700 ಮೀಟರ್ ರಸ್ತೆಯನ್ನು ಅಲಂಕರಿಸಿ ದೀಪಾಲಂಕಾರ ಮಾಡಿದೆ ಎಂದು ಬ್ರಿಗೇಡ್ ಅಂಗಡಿಗಳು ಮತ್ತು ಸಂಸ್ಥೆಗಳು ಸಂಸ್ಥೆಯ ಕಾರ್ಯದರ್ಶಿ ಸುಹೇಲ್ ಯೂಸುಫ್ ತಿಳಿಸಿದ್ದಾರೆ.
"ಸಂಘದ ಪ್ರಮುಖ ಕಾಳಜಿ ಸಾರ್ವಜನಿಕರ ಸುರಕ್ಷತೆಯಾಗಿದ್ದು, ಈ ಬಗ್ಗೆ ಸಲಹೆಗಳನ್ನು ನಗರ ಪೊಲೀಸ್ ಆಯುಕ್ತರಿಗೆ ರವಾನಿಸಿದೆ. ಕೋವಿಡ್ ಹರಡುವ ಭಯವೂ ಇದೆ. ಸರ್ಕಾರ ನಿರ್ಬಂಧಗಳನ್ನು ವಿಧಿಸಿದರೆ ಜನರು ಸರ್ಕಾರದ ನಿಯಮಗಳನ್ನು ಪಾಲಿಸಲು ಸಿದ್ಧರಾಗಿದ್ದಾರೆ" ಎಂದು ಸುಹೇಲ್ ಯೂಸುಫ್ ಹೇಳಿದ್ದಾರೆ.
ಡಿಸೆಂಬರ್ 31 ರಂದು ರಾತ್ರಿ 7 ಗಂಟೆಯಿಂದ ಬ್ರಿಗೇಡ್ ರಸ್ತೆಯಲ್ಲಿ ಎಲ್ಲಾ ವಾಹನಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಅಸೋಸಿಯೇಷನ್ ಮನವಿ ಮಾಡಿದೆ. ಬ್ರಿಗೇಡ್ ರಸ್ತೆಯಿಂದ ಚರ್ಚ್ ಸ್ಟ್ರೀಟ್ ಮತ್ತು ರೆಸ್ಟ್ ಹೌಸ್ ರಸ್ತೆಯವರೆಗಿನ ಎಲ್ಲಾ ಪ್ರವೇಶ ದ್ವಾರಗಳಲ್ಲಿ ವಾಹನಗಳಿಗೆ ನಿರ್ಬಂಧ ವಿಧಿಸಿ, ಒಪೆರಾ ಜಂಕ್ಷನ್ ಕಡೆಗೆ ಪಾದಚಾರಿಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಬೇಕು. ಬೀದಿ ವ್ಯಾಪಾರಿಗಳು ಮತ್ತು ತಳ್ಳುಗಾಡಿಗಳನ್ನು ನಿಷೇಧಿಸಬೇಕು ಎಂದಿದೆ. ಸಾರ್ವಜನಿಕರು ಅಂಗಡಿಗಳ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವುದನ್ನು ತಡೆಯಬೇಕು ಮತ್ತು ಅಂಗಡಿಗಳ ನೆಲಮಾಳಿಗೆಗೆ ಅವರ ಪ್ರವೇಶವನ್ನು ನಿರ್ಬಂಧಿಸಬೇಕು ಎಂದು ಸಂಘ ಮನವಿ ಮಾಡಿದೆ.
(ಮಾಹಿತಿ ಕೃಪೆ- ಟೈಮ್ಸ್ ಅಫ್ ಇಂಡಿಯಾ)
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications