ಒಂದು ಕಾಲದ ಬೆಂಗಳೂರು ರೌಡಿ ಕೊರಂಗು ಕೃಷ್ಣ ಇನ್ನಿಲ್ಲ
ಬೆಂಗಳೂರು, ಜೂನ್ 19: ಜಯರಾಜ್ ಅವರ ಕಾಲದಲ್ಲಿ ಮಿಂಚಿದ್ದ ರೌಡಿ ಕೊರಂಗು ಕೃಷ್ಣ ಇಂದು ತನ್ನ ಊರಿನಲ್ಲಿ ಕರಳುಬೇನೆಗೆ ತುತ್ತಾಗಿ ಅಸುನೀಗಿದ್ದಾನೆ. ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೈಯಾಡಿಸಲು ಹೋಗಿ ಹೆಬ್ಬಟ್ಟು ಮಂಜ ಗ್ಯಾಂಗಿನಿಂದ ಹಲ್ಲೆಗೊಳಗಾಗಿದ್ದ
ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಕೊರಂಗುಗೆ ಮಧುಮೇಹ, ಅಧಿಕ ರಕ್ತದೊತ್ತಡ ಕೂಡಾ ಇತ್ತು. ಆಂಧ್ರದ ಚಿತ್ತೂರಿಗೆ ಮರಳಿ ಕೊನೆಕಾಲ ಕಳೆಯಲು ನಿರ್ಧರಿಸಿದ್ದ. ಆದರೆ, ಅನಾರೋಗ್ಯಕ್ಕೆ ತುತ್ತಾದ ಕೊರಂಗು ಮತ್ತೆ ಚೇತರಿಸಿಕೊಳ್ಳಲಿಲ್ಲ. ಚಿತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
17ನೇ ವರ್ಷಕ್ಕೆ ಭೂಗತ ಜಗತ್ತಿಗೆ ಕಾಲಿಟ್ಟ ಕೊರಂಗು ನಂತರ ಅಂದಿನ ಡಾನ್ ಜಯರಾಜ್ ಅವರ ಬಲಗೈ ಬಂಟನಾಗಿ ಬೆಳೆದಿದ್ದ. ಕೊಲೆ, ಸುಲಿಗೆ, ಕೊಲೆ ಯತ್ನ, ಕಿಡ್ನಾಪ್, ಬೆದರಿಕೆ ಹೀಗೆ 50ಕ್ಕೂ ಅಧಿಕ ಕೇಸುಗಳನ್ನು ಮೈಮೇಲೆ ಎಳೆದುಕೊಂಡಿದ್ದವ.

ಜೈಲಲ್ಲೇ ಕುಳಿತು ಸ್ಕೆಚ್:
ಕೊಗಿಲು ಕ್ರಾಸ್ ದಾಸನಪುರ ಎಪಿಎಂಸಿ ಯಾರ್ಡ್ ಬಳಿ ಕಡಬಗೆರೆ ಶ್ರೀನಿವಾಸ ಮೇಲೆ ಅಪರಿಚಿತರು ಗುಂಡು ಹಾರಿಸಿದ್ದರು. 2016ರ ಫೆಬ್ರವರಿಯಲ್ಲಿ ನಡೆದ ಈ ಘಟನೆಗೆ ಬಳ್ಳಾರಿ ಜೈಲಿನಲ್ಲಿ ಕುಳಿತೇ ಕೊರಂಗು ಕೃಷ್ಣ ಸ್ಕೆಚ್ ಹಾಕಿದ್ದ.
ಡಿಸಿಪಿ ಎಂ ನಾರಾಯಣ ನೇತೃತ್ವದ ತಂಡ ಬಳ್ಳಾರಿಯಿಂದ ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸಿದ್ದರು. 2011ರಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಸ್ಪಿಗೆ ಅವಾಜ್ ಹಾಕಿ ಹಲ್ಲೆ ನಡೆಸಲು ಯತ್ನಿಸಿದ್ದರಿಂದ ಬಳ್ಳಾರಿ ಜೈಲಿಗೆ ಹಾಕಲಾಗಿತ್ತು.

ರೌಡಿ ಬಲರಾಮ್ ಕೊಲೆ
ಕೊರಂಗು ಆಪ್ತ ತಿಮ್ಮೇನಹಳ್ಳಿ ತಮ್ಮಯ್ಯನಿಗೆ ಬಲರಾಮ ಬೈದಿದ್ದಕ್ಕೆ ಸಿಟ್ಟಿಗೆದ್ದು ಬಲರಾಮನನ್ನು ಕೊರಂಗು ಕೊಲ್ಲಿಸಿದ್ದ. ಬೆಂಗಳೂರಿನ ಹಳೆ ಸೆಂಟ್ರಲ್ ಜೈಲಿನಲ್ಲಿದ್ದ ಬಲರಾಮನನ್ನು ಜೈಲಿನಲ್ಲೇ ಕೊಲೆ ಮಾಡಿಸಿದ್ದ ಕೊರಂಗು.
ಬಲರಾಮನ ಶಿಷ್ಯ ಹೆಬ್ಬೆಟ್ಟು ಮಂಜ ತನ್ನ ಗುರುವಿನ ಸಾವಿನ ಪ್ರತೀಕಾರ ತೀರಿಸಿಕೊಳ್ಳಲು ಹೊಂಚು ಹಾಕಿ ಹಿರಿಯೂರಿನ ಬಳಿ ಡಾಬದಲ್ಲಿದ್ದ ಕೊರಂಗು ಮೇಲೆ ದಾಳಿ ಮಾಡಿದ್ದ ಅಂದು ಜೊತೆಗಿದ್ದ ದೀಪು ಸತ್ತಿದ್ದ, ಕೊರಂಗು ಬದುಕಿದ್ದ.

ವಿದೇಶದಿಂದ ಡೀಲ್
ಹೆಬ್ಬೆಟ್ಟು ಮಂಜ ತನ್ನ ಬಾಲ್ಯ ಸ್ನೇಹಿತ ಅಶ್ರಫ್ ಗೆ ಸುಪಾರಿ ನೀಡಿದ್ದ. ಅಶ್ರಫ್ ಹಾಗೂ ನದೀಮ್ ಇಬ್ಬರು ಕೇರಳದಿಂದ ಗನ್ ತರೆಸಿಕೊಂಡು ಅಂಬರೀಷ್ ಮೂಲಕ ಕೊರಂಗು ಕೃಷ್ಣ ಹತ್ಯೆಗೆ ಸ್ಕೆಚ್ ಹಾಕಿದ್ದರು. ಆದರೆ, ಸುಪಾರಿ ಪಡೆದವರು ಶಿವಮೊಗ್ಗ ಜಿಲ್ಲೆ ಮಂಡಗದ್ದೆಯ ಅಡಿಕೆ ತೋಟದಲ್ಲಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಬಂಧಿತರ ಬಳಿ 4 ಗನ್ 48 ಸಜೀವ ಗುಂಡು ವಶವಾಗಿತ್ತು.

ಉಪೇಂದ್ರ ಅವರ ಓಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕೊರಂಗು
ಉಪೇಂದ್ರ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ''ಓಂ'' ಸಿನಿಮಾದಲ್ಲಿ ರಿಯಲ್ ರೌಡಿಗಳನ್ನು ಬಳಸಿಕೊಳ್ಳಲಾಗಿತ್ತು. ಅಂದಿನ ಕಾಲದ ಅಂದಿನ ರೌಡಿಗಳು ಬಣ್ಣ ಹಚ್ಚಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಕೊರಂಗು ಕೃಷ್ಣ ಅಲ್ಲದೆ, ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ತನ್ವೀರ್, ಸಿನಿಮಾದಲ್ಲಿ ನಟಿಸಿದ್ದರು. ಮುತ್ತಪ್ಪ ರೈ ನಂತರ ಆ ಕಾಲದ ಪಂಟರ್, ರೌಡಿ ಕೊರಂಗು ಕಥೆ ಕೂಡಾ ಅಂತ್ಯವಾಗಿದೆ. ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ, ರಾಜರಾಜೇಶ್ವರಿ ನಗರದ ರಾಜಕೀಯ ಮುಖಂಡ, ನಿರ್ಮಾಪಕ ಮುನಿರತ್ನಂ ನಾಯ್ಡು ಸೋದರ ಕೊರಂಗು ಚಾಪ್ಟರ್ ಕ್ಲೋಸ್ ಆಗಿದೆ.
-
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ











Click it and Unblock the Notifications