​Heart Attack: ಟೂರ್ನಿ ವೇಳೆ ಹೃದಯಾಘಾತ, ಕರ್ನಾಟಕದ ಕ್ರಿಕೆಟಿಗ ಸಾವು

ಬೆಂಗಳೂರು, ಫೆಬ್ರವರಿ 22: ಕ್ರಿಕೆಟ್‌ ಆಡಿದ ಬಳಿಕ ಮೈದಾನದಲ್ಲಿ ಹೃದಯಘಾತದಿಂದ ಕರ್ನಾಟಕದ ವೇಗಿ ಕೆ.ಹೊಯ್ಸಳ ಹಠಾತ್ ಸಾವನ್ನಪ್ಪಿದ್ದಾರೆ. ಏಜಿಸ್ ಸೌತ್ ಝೋನ್ ಟೂರ್ನಿಯ ವೇಳೆ ದುರ್ಘಟನೆ ಸಂಭವಿಸಿದ್ದು, ಕೆ.ಹೊಯ್ಸಳ ಅವರ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ.

ಕೆ.ಹೊಯ್ಸಳ ಅವರ ಸಾವು ಕರ್ನಾಟಕ ಕ್ರಿಕೆಟ್‌ಗೆ ತುಂಬಲಾರದ ನಷ್ಟವಾಗಿದೆ. ಹೊಯ್ಸಳ ಇಂದು ಕರ್ನಾಟಕ ಏಜಿಸ್​​ ತಂಡದ ಪರ ಆಡುತ್ತಿದ್ದರು. ತಮಿಳುನಾಡು ವಿರುದ್ಧ ಗೆದ್ದ ಬಳಿಕ ​​ತಂಡದ ಸಭೆ ಕರೆಯಲಾಗಿತ್ತು. ಪಂದ್ಯದ ಬಳಿಕ ವಿಶ್ರಾಂತಿ ಪಡೆದಿದ್ದ ಕೆ.ಹೊಯ್ಸಳ ತಮ್ಮ ಸಹ ಆಟಗಾರರ ಜೊತೆ ಸಭೆಗೆ ತೆರಳಿದ್ದರು.

Cricketer K Hoysal Dies Due To Heart Attack At Bengaluru

ಸಭೆ ನಡೆಯುತ್ತಿರುವ ವೇಳೆ ಕೆ. ಹೊಯ್ಸಳ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಿದ್ದು ಕೂಡಲೇ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದರೆ ದುರಾದೃಷ್ಟವಶಾತ್ ವೈದ್ಯರು ತಪಾಸಣೆ ನಡೆಸಿ ಬಳಿಕ ಹೊಯ್ಸಳ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ವರದಿ ನೀಡಿದ್ದಾರೆ ಎಂದು ವರದಿಯಾಗಿದೆ.

ಕೆ. ಹೊಯ್ಸಳ ಅವರು ಕರ್ನಾಟಕ ಪ್ರೀಮಿಯರ್ ಲೀಗ್​​ನಲ್ಲಿ ಶಿವಮೊಗ್ಗ ಹಾಗೂ ಬಳ್ಳಾರಿ ಟಸ್ಕರ್ಸ್​ ತಂಡವನ್ನ ಪ್ರತಿನಿಧಿಸಿದ್ದರು. ಕರ್ನಾಟಕ ಜೂನಿಯರ್​​​ ತಂಡದ ಪರ ಕೂಡ ಆಡಿದ್ದಾರೆ ಎನ್ನಲಾಗಿದೆ.

ತಡರಾತ್ರಿವರೆಗೂ ಓದಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು

ತಡರಾತ್ರಿವರೆಗೂ ಓದುತ್ತಿದ್ದ ವಿದ್ಯಾರ್ಥಿನಿ ಮಲಗಿದ ಹಾಸಿಗೆಯಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಪಟ್ಟಣ ಬಳಿಯ ನೆಕ್ಕಿಲಾಡಿ ಕುರ್ವೇಲುನ ಗ್ರಾಮದಲ್ಲಿ ನಡೆದಿತ್ತು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಫೀಜಾ (17) ಮೃತ ದುರ್ದೈವಿ.

ಹಫೀಜಾ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ಕಲಿಯುತ್ತಿದ್ದಳು. ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 15 ರ ತಡರಾತ್ರಿಯವರೆಗೆ ಓದಿ ಮಲಗಿದ್ದಾಳೆ. ದುರಾದೃಷ್ಟವಶಾತ್ ಹಫೀಜಾ ಬೆಳ್ಳಗೆ ಏಳಲೇ ಇಲ್ಲ. ಮಲಗಿದಲ್ಲೇ ಹೃದಯಾಘಾತ ಸಂಭವಿಸಿದ್ದು, ಬೆಳಗ್ಗೆ ಹಾಸಿಗೆಯಲ್ಲಿ ಮಲಗಿದ ಸ್ಥಿತಿಯಲ್ಲೇ ಮೃತಪಟ್ಟಿದ್ದಳು. ಉಪ್ಪಿನಂಗಡಿ ಪಟ್ಟಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+