ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 353ಕ್ಕೆ ಏರಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 17: ರಾಜ್ಯದಲ್ಲಿ ಕೊರೊನಾ ಪ್ರಕರಣ 353ಕ್ಕೆ ಏರಿಕೆಯಾಗಿದೆ. ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೆ 38 ಸೋಂಕಿತ ಪ್ರಕರಣಗಳು ದೃಢವಾಗಿದೆ.

ಒಂದೇ ದಿನದಲ್ಲಿ ಅತಿಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಕರ್ನಾಟಕದಲ್ಲಿ ಈವರೆಗೆ ಇಷ್ಟು ಪ್ರಮಾಣ ಕೇಸ್‌ಗಳು ಒಂದೇ ದಿನ ಕಂಡು ಬಂದಿರಲಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕ ಕೊರೊನಾ ಪ್ರಕರಣಗಳಲ್ಲಿ ಒಂದಷ್ಟು ನಿಯಂತ್ರಣ ಹೊಂದಿತ್ತು. ಆದರೆ, ಇದೀಗ ಒಂದೇ ದಿನ 38 ಸೋಂಕಿತರು ಪತ್ತೆಯಾಗಿದ್ದು, ಆತಂಕ ಹೆಚ್ಚಾಗಿದೆ.

3 ದಿನದಲ್ಲಿ 6 ರಾಜ್ಯ ದಾಟಿ 2700 ಕಿಮೀ ಸಾಗಿ ಮಗನನ್ನು ಸೇರಿದ ತಾಯಿ3 ದಿನದಲ್ಲಿ 6 ರಾಜ್ಯ ದಾಟಿ 2700 ಕಿಮೀ ಸಾಗಿ ಮಗನನ್ನು ಸೇರಿದ ತಾಯಿ

ಬೆಂಗಳೂರಿನಲ್ಲಿ 8, ಮೈಸೂರು ಜಿಲ್ಲೆ ನಂಜನಗೂಡು 10, ಮೈಸೂರು 2, ಮಂಡ್ಯ ಜಿಲ್ಲೆ ಮಳವಳ್ಳಿ 3, ಚಿಕ್ಕಬಳ್ಳಾಪುರ 3, ವಿಜಯಪುರ 2, ಬೀದರ್‌ 1, ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಯಲ್ಲಿ 1, ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ 7 ಪ್ರಕರಣ ಪತ್ತೆಯಾಗಿವೆ.

Coronavirus Positive Cases Reaches To 353 In Karnataka

ನಿನ್ನೆ ಬೆಳಗಾವಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿತ್ತು. ಒಂದೇ ದಿನ ಅಲ್ಲಿ 17 ಜನರಿಗೆ ಸೋಂಕು ದೃಢವಾಗಿತ್ತು. ಸದ್ಯ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆ ಕಂಡಿದೆ.

ಕರ್ನಾಟಕದಲ್ಲಿ 353 ಸೋಂಕಿತರು ದೃಢವಾಗಿದ್ದು, ಇದರಲ್ಲಿ 13 ಮಂದಿ ನಿಧನ ಹೊಂದಿದ್ದಾರೆ.

English summary
38 new coronavirus cases, Coronavirus positive cases reaches to 353 in karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X