ರಾಜ್ಯದಲ್ಲಿ 'YST' ಸಂಗ್ರಹ ಆಗುತ್ತಿದೆ ಎಂದ HDKಗೆ ಕಾಂಗ್ರೆಸ್ 'KST' ಗುನ್ನ
ಬೆಂಗಳೂರು, ಜಲೈ 04: ದೇಶದಲ್ಲಿ 'ಜಿಎಸ್‌ಟಿ' ಇರುವಂತೆ ಕರ್ನಾಟಕದಲ್ಲಿ 'ವೈಎಸ್‌ಟಿ' ಇದೆ ಎಂದು ಹೇಳಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ 'ಕೆಎಸ್‌ಟಿ' ಪದ ಪ್ರಯೋಗಿಸಿ ತಿರುಗೇಟು ಕೊಟ್ಟಿದೆ. ರಾಜ್ಯದಲ್ಲೀಗ ಈ 'ವೈಎಸ್‌ಟಿ- ಕೆಎಸ್‌ಟಿ' ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ.
ರಾಜ್ಯದಲ್ಲಿ ಹೊಸ 'ವೈಎಸ್‌ಟಿ' ಸಂಗ್ರಹ ಬಗ್ಗೆ ನಾನು ಮಾಹಿತಿ ಸಂಗ್ರಹಿಸಿದ್ದೇನೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು.

ಈ ವಿಚಾರವಾಗಿ ಕುಮಾರಸ್ವಾಮಿಗೆ ತಿರುಗೇಟು ನೀಡಿ ಕಾಂಗ್ರೆಸ್ ಮಂಗಳವಾರ ಟ್ವೀಟ್ ಮಾಡಿದೆ. ರೇಸ್ ಕೋರ್ಸ್ ರಸ್ತೆ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಒಂದು ದಿನದ ಬಾಡಿಗೆ ಎಷ್ಟು ಎಚ್‌ಡಿ ಕುಮಾರಸ್ವಾಮಿ ಅವರೇ. ಅಲ್ಲೊಂದು ಖಾಯಂ ಅಡ್ಡ ತೆರೆದಿದ್ದೀರಿ ಅಂದರೆ ಅದಕ್ಕೆ ಎಷ್ಟು ಕೋಟಿ ಸುರಿದಿದ್ದೀರಿ? ಎಂದು ಕಾಂಗ್ರೆಸ್ ಕಾಲೆಳೆದಿದೆ.
ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಒಂದು ದಿನದ ಬಾಡಿಗೆ ಎಷ್ಟು @hd_kumaraswamy ಅವರೇ?
— Karnataka Congress (@INCKarnataka) July 4, 2023
ಅಲ್ಲೊಂದು ಖಾಯಂ ಅಡ್ಡ ತೆರೆದಿದ್ದೀರಿ ಅಂದರೆ ಅದಕ್ಕೆ ಎಷ್ಟು ಕೋಟಿ ಸುರಿದಿದ್ದೀರಿ?
ವೆಸ್ಟ್ ಎಂಡ್ ಹೋಟೆಲಿಗೆ ಜಮೀನಿನಲ್ಲಿ ಉಳುಮೆ ಮಾಡಿ ಬಾಡಿಗೆ ಕಟ್ಟುತ್ತಿದ್ದೀರಾ? ಅಥವಾ "KST" ಸಂಗ್ರಹದ ಹಣ ಬಳಸುತ್ತಿದ್ದೀರಾ?#KSTkumara ಅವರು ಉತ್ತರಿಸಬೇಕು.
ಉಳುಮೆ ಮಾಡಿ ಹೋಟೆಲಿನ ಬಾಡಿಗೆ ಕಟ್ಟುದ್ದೀರಾ?
ತಾಜ್ ವೆಸ್ಟ್ ಎಂಡ್ ಹೋಟೆಲಿಗೆ ಜಮೀನಿನಲ್ಲಿ ಉಳುಮೆ ಮಾಡಿ ಬಾಡಿಗೆ ಕಟ್ಟುತ್ತಿದ್ದೀರಾ? ಅಥವಾ "KST" ಸಂಗ್ರಹದ ಹಣ ಬಳಸುತ್ತಿದ್ದೀರಾ? ಇದಕ್ಕೆ ನೀವೆ ಕೆಎಸ್‌ಟಿ ಕುಮಾರ್ ಉತ್ತರಿಸಬೇಕು. ಹೀಗೆಂದು ಕೆಎಸ್‌ಟಿ ಕುಮಾರ (#KSTkumara) ಹ್ಯಾಷ್‌ಟ್ಯಾಗ್ ಹಾಕಿ ಕಾಂಗ್ರೆಸ್ ಕುಟುಕಿದೆ.
'ವೈಎಸ್ ತೆರಿಗೆಯ ವಿವರಗಳಿಗಾಗಿ, ಮಧ್ಯರಾತ್ರಿಯವರೆಗೆ ತಮ್ಮ ಮನೆಗಳಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವ 'ಉನ್ನತ' ಜನರನ್ನು ಕೇಳಬೇಕು ಎಂದು ಕುಮಾರಸ್ವಾಮಿ ಅವರು ಮೊನ್ನೆಯಷ್ಟೇ ಹೊಸ ಬಾಂಬ್ ಸಿಡಿಸಿದ್ದರು. ಈಗಾಗಲೇ ಕಷ್ಟಪಟ್ಟು ಕೆಲಸ ಮಾಡಲು ಪ್ರಾರಂಭಿಸಿದ ಮತ್ತು ವರ್ಗಾವಣೆ ದಂಧೆಯ ಭಾಗವಾಗಿರುವವರನ್ನು ಕೇಳಿ ಎಂದು ತಿಳಿಸಿದ್ದರು.

ಯತೀಂದ್ರ ವಿರುದ್ಧ ಎಚ್‌ಡಿಕೆ ಆರೋಪ
2018ರ ನಂತರ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಸುಮಾರು 17 ತಿಂಗಳು ಕಾಲ ಈ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಗಳಾಗಿದ್ದರು. ಈ ಅವಧಿಯಲ್ಲಿ ಹೆಚ್ಚಾಗಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟೆಂಡ್‌ನಲ್ಲಿ ಇರುತ್ತಿದ್ದರು. ಸಚಿವರು ಅವರನ್ನು ಅಲ್ಲಿಯೇ ಹೋಗಿ ಬೇಟಿ ಮಾಡಬೇಕಿತ್ತು. ಸರ್ಕಾರ ಚರ್ಚೆಗಳು ಆ ಹೋಟೆಲಿನಲ್ಲಿ ನಡೆದಿದ್ದವು. ಈ ಬಗ್ಗೆ ಮೈತ್ರಿ ಸರ್ಕಾರ ಪತನ ಬಳಿಕ ಕಾಂಗ್ರೆಸ್ ನಾಯಕರು ಹೇಳಿದ್ದರು.
ಇದೀಗ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ರಚನೆಯಾಗಿದೆ. ಸಿದ್ದರಾಮಯ್ಯನವರ ಪುತ್ರ ಮಾಜಿ ಶಾಸಕ ಯತೀಂದ್ರ ಅವರು ವಿರುದ್ಧ ಹಣ ಸಂಗ್ರಹದ ಆರೋಪವನ್ನು ಪರೋಕ್ಷವಾಗಿ ಎಚ್‌ಡಿ ಕುಮಾರಸ್ವಾಮಿ ಅವರು ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೆಎಸ್‌ಟಿ ಪದ ಪ್ರಯೋಗಿಸಿದೆ.












Click it and Unblock the Notifications