ಏಪ್ರಿಲ್ 27ರಿಂದ ಸಿದ್ದರಾಮಯ್ಯ ದುಬೈ, ಯುಎಇ ಪ್ರವಾಸ
ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ 27ರ ಗುರುವಾರ ದುಬೈ-ಯುಎಇ ಪ್ರವಾಸಕ್ಕೆ ತೆರಳಲಿದ್ದಾರೆ. ಭಾನುವಾರ ವಾಪಸ್ ಬೆಂಗಳೂರಿಗೆ ಹಿಂತಿರುಗಲಿರುವ ಅವರ ಪ್ರವಾಸದ ವೇಳಾಪಟ್ಟಿ ವಿವರ ಇಲ್ಲಿದೆ
ಬೆಂಗಳೂರು, ಏಪ್ರಿಲ್ 26: ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ 27ರ ಗುರುವಾರದಂದು ದುಬೈ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಸಕ್ಕೆ ತೆರಳಲಿದ್ದಾರೆ. ಮರುದಿನ ಮಧ್ಯಾಹ್ನ ಇಂಡಿಯನ್ ಕಾನ್ಸುಲೇಟ್ ಸಭಾಂಗಣದಲ್ಲಿ ಹೊಸದಾಗಿ ರಚಿಸಿರುವ ಕರ್ನಾಟಕ ಎನ್ ಆರ್ ಐ ಫೋರಂ ಅನ್ನು ಉದ್ಘಾಟಿಸಲಿದ್ದಾರೆ.
ಶನಿವಾರ ಬೆಳಗ್ಗೆ ಅಂದರೆ ಏಪ್ರಿಲ್ 29ರ ಬೆಳಗ್ಗೆ ಅಬುಧಾಬಿಯಲ್ಲಿ ಶೇಖ್ ಝಾಯೇದ್ ಮಸೀದಿಗೆ ಭೇಟಿ ನೀಡಲಿದ್ದು, ಅದೇ ದಿನ ಸಂಜೆ ದುಬೈಗೆ ತೆರಳುತ್ತಾರೆ. ಅಲ್ಲಿನ ಫಾರ್ಚುನ್ ಪಾರ್ಕ್ ಹೋಟೆಲ್ ನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುವ ಅವರು, ಕರ್ನಾಟಕ ಮೂಲದ ಉದ್ಯಮಿಗಳ ಜತೆ ಮಾತುಕತೆ ನಡೆಸಲಿದ್ದಾರೆ.[ಸಿದ್ದರಾಮಯ್ಯ ಕಾರಿನ ಕೆಂಪು ದೀಪ ತೆಗೆದವರ್ಯಾರು..?!]

ಏಪ್ರಿಲ್ 30ರ ಭಾನುವಾರ ಸಿದ್ದರಾಮಯ್ಯ ದುಬೈನಿಂದ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದ್ ರಾಜ್, ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ವಿಶೇಷಾಧಿಕಾರಿ ಮಿರ್ಜಾ ಮಹದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಪ್ರವಾಸಕ್ಕೆ ತೆರಳಲಿದ್ದಾರೆ.












Click it and Unblock the Notifications