ಮಳೆಗಾಲದಲ್ಲಿ ಅಂಡರ್ ಪಾಸ್, ಫ್ಲೈಓವರ್‌ಗಳ ಕೆಳಗೆ ನಿಲ್ಲಬೇಡಿ ಎಂದ ಬಿಬಿಎಂಪಿ
ಬೆಂಗಳೂರು, ಮೇ. 22: ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ನಿಲ್ಲುತ್ತಿಲ್ಲ. ಕೆಲ ಕಾಲ ಸುರಿಯುವ ಮಳೆಗೆ ರಾಜಧಾನಿಯ ರಸ್ತೆಗಳು ತುಂಬುತ್ತಿವೆ. ಒಳಚರಂಡಿ, ಅಂಡರ್‌ಪಾಸ್‌ಗಳು ತುಂಬಿ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ. ಈಗಾಗಲೇ ಎರಡು ಜೀವಗಳು ಬಲಿಯಾಗಿದ್ದು, ಮತ್ತೆ ಇಂತಹ ಅವಘಡಗಳು ಸಂಭವಿಸದಂತೆ ಇರಲು ನಾಗರಿಕರೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಭಾನುವಾರ ಸುರಿದ ಮಳೆಗೆ ಅಂಡರ್‌ಪಾಸ್‌ಗಳಲ್ಲಿ ವಾಹನಗಳು ಸಿಲುಕಿಕೊಂಡಿದ್ದು, ಪ್ರಯಾಣಿಕರು ಸುರಕ್ಷತೆಗಾಗಿ ಹರಸಾಹಸ ಪಡುತ್ತಿದ್ದರು. ಇಂತಹ ಘಟನೆಗಳು ಇದೇ ಮೊದಲಲ್ಲ. ಆದರೆ, ಕೆ.ಆರ್ ಸರ್ಕಲ್‌ನಲ್ಲಿ ಯುವತಿಯ ಸಾವು ತೀವ್ರ ಕಳವಳ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

"ನಾಗರಿಕರು ಮಳೆ ಬಂದಾಗಲೆಲ್ಲಾ ಅಂಡರ್‌ಪಾಸ್‌ಗಳಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು" ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಸಿದ್ದಾರೆ. " ಅಂಡರ್‌ಪಾಸ್‌ಗಳು ದುರ್ಬಲ ತಾಣಗಳಾಗಿವೆ. ಅಂಡರ್‌ಪಾಸ್‌ಗಳ ಕೆಳಗಿರುವ ಒಳಚರಂಡಿಯು ಕಳಪೆಯಾಗಿ ರಚನೆಯಾಗಿದ್ದು, ನೀರು ನಿಲ್ಲಲು ಕಾರಣವಾಗುತ್ತದೆ. ವಾಸ್ತವಿಕವಾಗಿ, ಮಳೆ ಪ್ರಾರಂಭವಾದ ತಕ್ಷಣ ಅಂಡರ್‌ಪಾಸ್‌ಗಳನ್ನು ಮುಚ್ಚಬೇಕು ಎಂಬ ಅಲಿಖಿತ ನಿಯಮವಿದೆ. ಹೆಚ್ಚಿನ ಸ್ಪಷ್ಟತೆ ನೀಡಲು, ನಾವು ಸಂಚಾರ ಪೊಲೀಸ್ ಇಲಾಖೆಗೆ ತಿಳಿಸುತ್ತೇವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಸಾಮಾನ್ಯವಾಗಿ, ಮಳೆ ಬಂದಾಗ ವಾಹನಗಳು ಅಂಡರ್‌ಪಾಸ್‌ಗಳಲ್ಲಿ ಹೋಗುವುದಿಲ್ಲ. ಏಕೆಂದರೆ, ಅಂಡರ್‌ಪಾಸ್‌ಗಳಲ್ಲಿ ನೀರು ಎಷ್ಟು ಆಳವಾಗಿರಬಹುದು ಎಂಬ ಬಗ್ಗೆ ಸರಿಯಾಗಿ ತಿಳಿಯುವುದಿಲ್ಲ. ಹೀಗಾಗಿ ಸುರಕ್ಷತೆಗಾಗಿ, ಅಂಡರ್‌ಪಾಸ್‌ಗಳನ್ನು ತಪ್ಪಿಸಬೇಕು" ಎಂದು ಅಧಿಕಾರಿ ಒತ್ತಿ ಹೇಳಿದ್ದಾರೆ.

ಬೆಂಗಳೂರು ನಗರ ಸಂಚಾರ ಪೊಲೀಸರು ಸಹ ಸಾರ್ವಜನಿಕರಿಗೆ ಮಳೆ ಸಮಯದಲ್ಲಿ ಫ್ಲೈ ಓವರ್ ಮತ್ತು ಅಂಡರ್‌ಪಾಸ್‌ಗಳ ಕೆಳಗೆ ನಿಲ್ಲದಂತೆ ಸೂಚಿಸಿದ್ದಾರೆ. ಭಾರೀ ಮಳೆಯ ಕಾರಣ ಸಾರ್ವಜನಿಕರು ವಿಧಾನಸೌಧದ ಸುತ್ತಲಿನ 6 ಕಿಮೀ ವ್ಯಾಪ್ತಿಯಲ್ಲಿರುವ ಅಂಡರ್‌ಪಾಸ್‌ಗಳಲ್ಲಿ ಸಂಚರಿಸಬಾರದು ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸಂಜೆ ಕೂಡ ನಗರದಲ್ಲಿ ಮಳೆಯಾಗಿದೆ. ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಕಾರ್ಪೊರೇಷನ್, ಗಿರಿನಗರ, ಶಾಂತಿನಗರ, ಕೋರಮಂಗಲ, ಜಯನಗರ, ಕತ್ರಿಗುಪ್ಪೆ, ಜೆಪಿ ನಗರ, ರಿಚ್ಮಂಡ್ ರಸ್ತೆ, ರಾಜಾಜಿ ನಗರ, ಮಲ್ಲೇಶ್ವರಂ, ಯಶವಂತಪುರ, ಜಾಲಹಳ್ಳಿ ಕ್ರಾಸ್ ಸೇರಿದಂತೆ ಹಲವು ಕಡೆಗಳಲ್ಲಿ ಗಾಳಿ ಸಹಿತ ಧಾರಕಾರ ಮಳೆ ಸುರಿಯುತ್ತಿದೆ.












Click it and Unblock the Notifications