ಆಲೂರು ವೆಂಕಟರಾವ್ ರಸ್ತೆಗೆ ಟಿಪ್ಪು ಹೆಸರೇಕೆ?

ಬೆಂಗಳೂರು, ಮೇ 29 : ಆಲೂರು ವೆಂಕಟರಾವ್ ರಸ್ತೆಗೆ ಟಿಪ್ಪು ಸುಲ್ತಾನ್ ಹೆಸರಿಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಸ್ತಾವನೆಗೆ ಹಿರಿಯ ಸಂಶೋಧಕ ಎಂ.ಚಿದಾನಂದ ಮೂರ್ತಿ ವಿರೋಧ ವ್ಯಕ್ತಪಡಿಸಿದ್ದಾರೆ. ಟಿಪ್ಪು ಹೆಸರಿಡುವ ಮೂಲಕ ಪಾಲಿಕೆ ಕನ್ನಡಿಗರಿಗೆ ಅವಮಾನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಚಿನಾನಂದ ಮೂರ್ತಿಗಳು, 'ಟಿಪ್ಪು ಸುಲ್ತಾನ್ ಒಬ್ಬ ದೇಶದ್ರೋಹಿ. ಆತನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯುವುದು ನಾಚಿಕೆಗೇಡಿನ ವಿಚಾರ. ಆಲೂರು ವೆಂಕಟರಾವ್ ರಸ್ತೆಗೆ ಟಿಪ್ಪು ಹೆಸರಿಟ್ಟರೆ, ಘೋರ ಅಪಚಾರವಾಗುತ್ತದೆ' ಎಂದರು. [ಅಲ್ಪಸಂಖ್ಯಾತರ ವಿವಿಗೆ ಟಿಪ್ಪು ಹೆಸರು ಬೇಡ]

Chidananda Murthy

'ಆಲೂರು ವೆಂಕಟರಾಯರು ಅಖಂಡ ಕರ್ನಾಟಕದ ಕನಸು ಕಂಡು ಅದಕ್ಕಾಗಿ ಜೀವನವನ್ನು ಮುಡುಪಾಗಿಟ್ಟವರು. ಅಂಥವರ ಹೆಸರು ಅಜರಾಮರವಾಗಿರಬೇಕು. ಈಗ ಪಾಲಿಕೆ ರಸ್ತೆಯ ಹೆಸರನ್ನು ಬದಲಾವಣೆ ಮಾಡುವ ಅಗತ್ಯವೇನಿದೆ?' ಎಂದು ಅವರು ಪ್ರಶ್ನಿಸಿದರು. [ಟಿಪ್ಪು :ಮೈಸೂರು ಹುಲಿಯಲ್ಲ, ನರಭಕ್ಷಕ ಹುಲಿ]

ಸುರೇಶ್ ಕುಮಾರ್ ವಿರೋಧ ಮಾಡಿದ್ದರು : ಟಿಪ್ಪು ಸುಲ್ತಾನ್ ಹೆಸರಿಡಲು ಬಿಜೆಪಿ ನಾಯಕ ಸುರೇಶ್ ಕುಮಾರ್ ಸಹ ವಿರೋಧ ವ್ಯಕ್ತಪಡಿಸಿದ್ದರು. ಏಕೀಕೃತ ಕರ್ನಾಟಕಕ್ಕಾಗಿ ಹೋರಾಡಿದ ಹಿರಿಯ ಚೇತನಗಳಲ್ಲಿ ಆಲೂರು ವೆಂಕಟರಾಯರದು ದೊಡ್ಡ ಹೆಸರು. ಅಖಂಡ ಕರ್ನಾಟಕಕ್ಕಾಗಿ ಅವರು ವಹಿಸಿದ ಪರಿಶ್ರಮ ಇಂದು ಊಹೆ ಮಾಡುವುದೂ ಅಸಾಧ್ಯ.

ಅವರ ಹೆಸರಿನಲ್ಲಿರುವ ರಸ್ತೆಗೆ ಬೇರೊಂದು ಹೆಸರು ಇಡಲು ಹವಣಿಕೆ ನಡೆಯುತ್ತಿದೆ. ಇದು ಕರ್ನಾಟಕ ಏಕೀಕರಣದ ಇತಿಹಾಸಕ್ಕೆ ಬಗೆಯ ಹೊರಟಿರುವ ಅವಮಾನ. ಯಾವುದೇ ಕಾರಣಕ್ಕೂ ಆಲೂರು ವೆಂಕಟರಾವ್ ರಸ್ತೆಗೆ ಟಿಪ್ಪುಸುಲ್ತಾನ್ ರಸ್ತೆ ಎಂಬ ಹೆಸರು ಇಡಬಾರದು ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದರು.

aluru venkata rao
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+