ಒಬ್ಬಂಟಿ ಮಹಿಳೆ ಮೇಲೆ ಡ್ರೈವರ್, ಕಂಡಕ್ಟರ್ ಪುಂಡಾಟ
ಬೆಂಗಳೂರು, ನವೆಂಬರ್ 23 : 'ಬಸ್ ನ ಎಲ್ಲಾ ಟಿಕೆಟ್ ಗಳನ್ನು ಕೊಂಡರಷ್ಟೆ ಬಸ್ ಸ್ಟಾರ್ಟ್ ಮಾಡುತ್ತೇವೆ ಇಲ್ಲವೆಂದರೆ ಇಲ್ಲ' ಎಂದು ಬಸ್ ನ ಕಂಡಕ್ಟರ್ ಮತ್ತು ಡ್ರೈವರ್ ಗಳು ಮಹಿಳೆಯೊಬ್ಬಳಿಗೆ ಧಮಕಿ ಹಾಕಿದ ಘಟನೆ ನಗರದ ಶಾಂತಿನಗರದಲ್ಲಿ ನಡೆದಿದೆ.
ಮಹಿಳೆ ಡಾಕ್ಟರ್ ಪಟೇಲ್ ನವೆಂಬರ್ 22ರ ಮಧ್ಯರಾತ್ರಿ ಅಹಮದಾಬಾದ್ ನಿಂದ ಬೆಂಗಳೂರು ಏರ್ಪೋರ್ಟ್ ಗೆ ಬಂದು ಅಲ್ಲಿಂದ ಶಾಂತಿನಗರದಕ್ಕೆ ಬಂದು ತಮಿಳುನಾಡಿನ ವೆಲ್ಲೂರ್ ಗೆ ತೆರಳಲು ಟಿ.ಎನ್.01.ಎ.ಎನ್.0012 ರಿಜಿಸ್ಟರ್ ನಂಬರಿನ ಬಸ್ ಹತ್ತಿದ್ದಾರೆ. ಆದರೆ ಹತ್ತುವಾಗ 15 ನಿಮಿಷದಲ್ಲಿ ಬಸ್ ಹೊರಡುತ್ತದೆಂದು ಹೇಳಿದ್ದ ಕಂಡಕ್ಟರ್ ಒಂದು ಗಂಟೆಯಾದರೂ ಹೊರಡದಾಗ ಡಾಕ್ಟರ್ ಪಟೇಲ್ ಗೆ ಆತಂಕವಾಗಿದೆ.

ಕಂಡಕ್ಟರ್ ಮತ್ತು ಡ್ರೈವರ್ ಗಳನ್ನು ಈ ಬಗ್ಗೆ ಪ್ರಶ್ನಿಸಿದಾಗ ಮಹಿಳೆ ಡಾಕ್ಟರ್ ಪಟೇಲ್ ಅವರನ್ನು ಮೂದಲಿಸಿದ್ದಾರೆ. ಅಷ್ಟೆ ಅಲ್ಲದೆ ಉಳಿದ ಟಿಕೆಟ್ ಗಳನ್ನು ಕೊಂಡರಷ್ಟೆ ಬಸ್ ಹೊರಡುತ್ತದೆ ಇಲ್ಲವಾದರೆ ಇಳಿದು ಹೋಗು ಎಂದು ಒಂಟಿ ಮಹಿಳೆಯ ಮೇಲೆ ತಡರಾತ್ರಿಯಲ್ಲಿ ಜೋರು ಮಾಡಿದ್ದಾರೆ.
ಡಾ.ಪಟೇಲ್ ಈ ಕುರಿತು ದೂರು ದಾಖಲಿಸಿದ್ದು, ಪೊಲೀಸರು ಡ್ರೈವರ್ ಮತ್ತು ಕಂಡಕ್ಟರ್ ಅನ್ನು ವಶಕ್ಕೆ ಪಡೆದಿದ್ದಾರೆ.












Click it and Unblock the Notifications