ಬೈಕ್ ಸ್ಟಿಕ್ಕರ್ ನೀಡಿದ ಸುಳಿವಿನಿಂದ ಇಬ್ಬರು ದರೋಡೆಕೋರರು ಸೆರೆ

ಬೆಂಗಳೂರು,ಜು.07: ಶೋಕಿಗಾಗಿ ಬೈಕ್ ಮತ್ತು ಕಾರಿನ ಮೇಲೆ ಸ್ಟಿಕ್ಕರ್ ಹಾಕುವುದು ಸಾಮಾನ್ಯ. ಹೀಗೆ ವಾಹನ ಮೇಲೆ ಹಾಕುವ ಸ್ಟಿಕ್ಕರ್‌ಗಳೇ ಪೊಲೀಸರು ಕೇಸ್ ಪತ್ತೆ ಮಾಡಲಿಕ್ಕೆ ಸಹಕಾರಿಯಾಗಲಿವೆ. ಪಾರ್ಕ್ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ ಕದ್ದು ಪರಾರಿಯಾಗಿದ್ದ ಕಳ್ಳರನ್ನು ಬಂಧಿಸಲು ನೆರವಾಗಿದ್ದು ಅವರು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನದ ಮೇಲೆ ಅಂಟಿಸಿದ್ದ ಸ್ಟಿಕ್ಕರ್!

ಹೌದು. ದ್ವಿಚಕ್ರ ವಾಹನ ಮೇಲೆ ಅಂಟಿಸಿದ್ದ ಸ್ಟಿಕ್ಕರ್ ನೀಡಿದ ಸುಳಿವಿನ ಮೇರೆಗೆ ಒಂಟಿ ಮಹಿಳೆಯರ ಬ್ಯಾಗ್ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಜೀವನ ಭೀಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಹೋಂಡಾ ಆಕ್ಟೀವಾ ಬೈಕ್ ಹಾಗೂ ಮೊಬೈಲ್ ಮತ್ತು ಮನೆಯ ಕೀ ಗಳನ್ನು ವಶಪಡಿಸಿಕೊಂಡಿದ್ದಾರೆ.

Bike sticker helps to detect robbery case in Bengaluru

Recommended Video

      Zodiac Sign ರಾಶಿ ನಕ್ಷತ್ರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ!! | Oneindia Kannada

      ಜೀವನ್ ಭೀಮಾ ನಗರದ ವಿಶ್ವೇಶ್ವರಯ್ಯ ಪಾರ್ಕ್ ಸಮೀಪ ಮಹಿಳೆ ನಡೆದುಕೊಂಡು ಹೋಗುತ್ತಿದ್ದರು. ಹೋಂಡಾ ಆಕ್ಟೀವಾದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆಯ ವ್ಯಾನಿಟಿ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದರು. ಈ ಕುರಿತು ಜೀವನ ಭೀಮಾ ನಗರ ಠಾಣೆಗೆ ದೂರು ನೀಡಿದ್ದ ಮಹಿಳೆ, ಹೊಂಡಾ ಆಕ್ಟೀವಾ ಬೈಕ್ ಹಾಗೂ ಅದರ ಮೇಲೆ ಅಂಟಿಸಿದ್ದ ಸ್ಟಿಕ್ಕರ್ ಸುಳಿವು ನೀಡಿದ್ದಳು. ಇದನ್ನೇ ಆಧಾರವಾಗಿಟ್ಟುಕೊಂಡು ಜೀವನ ಭೀಮಾನಗರ ಪೊಲೀಸರು ಬೈಕ್ ಹುಡುಕಾಟ ಶುರು ಮಾಡಿದ್ದರು. ಸಿಸಿಟಿವಿ ಕ್ಯಾಮರಾ ಆಧರಿಸಿ ಬೈಕ್ ವಿವರ ಸಂಗ್ರಹಿಸಿರುವ ಪೊಲೀಸರು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡಿ ಕದಿಯುವ ಸಂಗತಿ ಗೊತ್ತಾಗಿದೆ. ಆರೋಪಿಗಳು ಮಹಿಳೆ ಬಳಿ ಕದ್ದಿದ್ದ ವ್ಯಾನಿಟಿ ಬ್ಯಾಗ್ , ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಅಂತೂ ದ್ವಿಚಕ್ರ ವಾಹನದ ಮೇಲಿನ ಸ್ಟಿಕ್ಕರ್ ಪ್ರಕರಣ ಪತ್ತೆ ಮಾಡಲು ನೆರವಾಗಿರುವುದು ವಿಶೇಷ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+