ಮಕ್ಕಳನ್ನು ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಬಂದ ಭವಾನಿ ರೇವಣ್ಣ

ಲೈಂಗಿಕ ದೌರ್ಜನ್ಯ ಪ್ರಕರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಜ್ವಲ್‌ ರೇವಣ್ಣ ಅವರನ್ನು ನೋಡಲು ತಾಯಿ ಭವಾನಿ ರೇವಣ್ಣ ಇಂದು ಪರಪ್ಪನ ಅಗ್ರಹಾರ ಜೈಲಿಗೆ ದೌಡಾಯಿಸಿದ್ದರು. ಪರಪ್ಪನ ಅಗ್ರಾಹರ ಜೈಲಿನ ಆವರಣದಲ್ಲಿನ ಕ್ಯಾಮೆರಾಗಳನ್ನು ಕಂಡು ಭವಾನಿ ಮುಜಗರಕ್ಕೆ ಈಡಾದಂತೆ ಆಗಿ, ಕೈ ಗಳಿಂದ ತಮ್ಮ ಮುಖವನ್ನು ಮುಚ್ಚಿಕೊಂಡು ಸಾಗಿದರು.

ಪುತ್ರ ಪ್ರಜ್ವಲ್‌ ರೇವಣ್ಣ ಜರ್ಮನಿಯ ಪ್ರವಾಸವನ್ನು ಮುಗಿಸಿ ನೇರವಾಗಿ ಪೊಲೀಸರ ಅತಿಥಿ ಆಗಿದ್ದಾರೆ. ಹೀಗಾಗಿ ತಾಯಿಯನ್ನು ಭೇಟಿ ಆಗಲು ಆಗಿರಲಿಲ್ಲ. ಇಂದು ಭವಾನಿ ರೇವಣ್ಣ ಅವರು ಕೇಂದ್ರ ಕಾರಗ್ರಹಕ್ಕೆ ಭೇಟಿ ನೀಡಿ ಮಗನನ್ನು ವಿಚಾರಿಸಿದರು.

Bhavani Revanna Visits Jail to See Prajwal Revanna

ಮಾಜಿ ಸಚಿವ ರೇವಣ್ಣ ಅವರ ಸಂಪೂರ್ಣ ಕುಟುಂಬಕ್ಕೆ ಈಗ ಸಂಕಷ್ಟ ಎದುರಾಗಿದೆ. ಪುತ್ರರಾದ ಪ್ರಜ್ವಲ್‌ ರೇವಣ್ಣ ಹಾಗೂ ಸೂರಜ್‌ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸಿಐಡಿ ಕಸ್ಟಡಿ ಹಾಗೂ ಜೈಲು ಸೇರಿದ್ದಾರೆ. ಮಾಜಿ ಸಚಿವ ರೇವಣ್ಣ ಸಹ ಜೈಲಿನ ವಾಸವನ್ನು ಅನುಭವಿಸಿ ಬಂದಿದ್ದಾರೆ. ಪತ್ನಿ ಭವಾನಿ ರೇವಣ್ಣ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಎಲ್ಲ ಘಟನೆಗಳಿಂದ ಮನ ನೊಂದಿರುವ ಭವಾನಿ ರೇವಣ್ಣ ಜೈಲಿಗೆ ಬರುವವ ವೇಳೆ ಮಾಧ್ಯಮದವನ್ನು ಕಂಡು ತಕ್ಷಣ ಮುಖ ಮುಚ್ಚಿಕೊಳ್ಳುವ ಪ್ರಯತ್ನವನ್ನು ಮಾಡಿದರು.

ಚುನಾವಣೆಯ ವೇಳೆ ಪೆನ್‌ಡ್ರೈವ್‌ ವಿಚಾರ ರಾಜ್ಯದಲ್ಲಿ ಬಹುವಾಗಿ ಚರ್ಚೆಗೀಡಾಯಿತು. ಮಾಜಿ ಸಂಸದ್‌ ಪ್ರಜ್ವಲ್‌ ರೇವಣ್ಣ, ವಿದೇಶದ ಫ್ಲೈಟ್‌ ಹತ್ತಿತು. ಜರ್ಮನಿ ಹೋದ ಪ್ರಜ್ವಲ್‌ರಿಗೆ ಹಲವು ನೋಟಿಸ್‌ ನೀಡಲಾಯಿತು. ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಸಹ ಎಸ್‌ಐಟಿ ತಂಡವನ್ನು ರಚಿಸಿತು. ಎಸ್‌ಐಟಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ನೋಟಿಸ್‌ ನೀಡಿದರೂ, ತಲೆ ಕೆಡಿಸಿಕೊಂಡಿರಲಿಲ್ಲ.

ನೋಟಿಸ್‌ ಜಾರಿ ಆದ ಕೆಲವು ದಿನಗಳ ಬಳಿಕ ಪ್ರಜ್ವಲ್‌ ಅಜ್ಞಾತ ಸ್ಥಳದಿಂದ ವಿಡಿಯೋ ಒಂದನ್ನು ರೆಕಾರ್ಡ್‌ ಮಾಡಿ ತಮ್ಮ ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದ್ದರು. ಅಲ್ಲದೆ ಸ್ವಲ್ಪ ಸಮಯಾವಕಾಶವನ್ನು ನೀಡಬೇಕು ಎಂದು ಮನವಿ ಮಾಡಿದ್ದರು.

ಪ್ರಜ್ವಲ್‌ ಜರ್ಮನಿಯಿಂದ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸುತ್ತಾರೆ ಎಂದು ತಿಳಿದ ತಕ್ಷಣ ಎಸ್‌ಐಟಿ ಅವರನ್ನು ಬಂಧಿಸಲು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿತ್ತು. ಅವರು ಹೊರಕ್ಕೆ ಬರುತ್ತಿದ್ದಂತೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+