ವೇದಿಕಾ,ಐಶ್ವರ್ಯ ಗೋಪಾಲನ್ ಸಿಂಗರ್-2ನ ವಿಜೇತ ಕೋಗಿಲೆಗಳು
ಬೆಂಗಳೂರು, ಅಕ್ಟೋಬರ್, 14 : ಕಳೆದ ಎರಡು ತಿಂಗಳುಗಳಿಂದ ಬೆಂಗಳೂರಿನ ಗೋಪಾಲನ್ ಸೂಪರ್ ಸಿಂಗರ್-2ರ ಗಾಯನ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ಗೋಪಾಲನ್ ಸೂಪರ್ ಸಿಂಗರ್ -2ರ ಪ್ರಶಸ್ತಿ ವಿಜೇತರಾಗಿ ಬೆಂಗಳೂರಿನ ವೇದಿಕಾ (ಹಿರಿಯರ ವಿಭಾಗ) ಹಾಗೂ ಐಶ್ವರ್ಯ (ಕಿರಿಯರ ವಿಭಾಗ) ಹೊರ ಹೊಮ್ಮಿದ್ದಾರೆ.
ನಗರದ ಹಳೇ ಮದ್ರಾಸ್ ರಸ್ತೆಯಲ್ಲಿನ ಗೋಪಾಲನ್ ಸಿಗ್ನೇಚರ್ ಮಾಲ್ ನಲ್ಲಿ ಅಕ್ಟೋಬರ್ 13ರ ಮಂಗಳವಾರದಂದು ಗ್ರ್ಯಾಂಡ್ ಫಿನಾಲೆ ನಡೆಯಿತು. ಇದರಲ್ಲಿ ವಿಶೇಷ ಅತಿಥಿಯಾಗಿ ನಟಿ ಐಷಾನಿ ಶೆಟ್ಟಿ ಆಗಮಿಸಿದ್ದು, ವಿಜೇತರಾದ ವೇದಿಕಾ ಹಾಗೂ ಐಶ್ವರ್ಯ ಅವರಿಗೆ 1 ಲಕ್ಷ ಬಹುಮಾನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.[ಕ್ಯಾನ್ಸರಿಗೆ ಬಲಿಯಾದ ವೇಣು ವಾದಕ ಎನ್ ರಮಣಿ]

ಪ್ರತಿ ವರ್ಷ ನಡೆಯುವ ಈ ಗೋಪಾಲನ್ ಸೂಪರ್ ಸಿಂಗರ್-2 ಈ ಬಾರಿಯೂ ನಡೆದಿದ್ದು, ಸ್ಪರ್ಧೆಗೆ 4,000 ಕ್ಕೂ ಹೆಚ್ಚು ಗಾಯಕರನ್ನು ತರುವಲ್ಲಿ ಯಶಸ್ವಿಯಾಗಿದೆ. ಈ ಸ್ಪರ್ಧೆ ಕಿರಿಯರು (16 ವರ್ಷ) ಹಾಗೂ ಹಿರಿಯರು (34 ವರ್ಷ) ಎಂದು ಎರಡು ವಿಭಾಗದಲ್ಲಿ ನಡೆದಿದೆ. ಒಟ್ಟಿನಲ್ಲಿ ಹಲವಾರು ಪ್ರತಿಭೆಗಳ ಅನಾವರಣಕ್ಕೊಂದು ಭವ್ಯ ವೇದಿಕೆಯಾಗಿತ್ತು.
ಗೋಪಾಲನ್ ಸೂಪರ್ ಸಿಂಗರ್-2 ಸ್ಪರ್ಧೆಗೆ ಶಮಿತಾ ಮಲ್ನಾಡ್, ಹೇಮಂತ್ ಹಾಗೂ ಚಿನ್ಮಯಿ ತೀರ್ಪುಗಾರರಾಗಿದ್ದರು. ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಪ್ರತಿಭೆಗಳ ನಡುವೆ ಅತ್ಯುತ್ತಮ ಗಾಯಕರ ಆಯ್ಕೆ ಕಾರ್ಯವನ್ನು ಕೆಲ ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ತೀರ್ಪುಗಾರರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಪ್ರಶಸ್ತಿ ಗೆದ್ದವರು ಬೆಂಗಳೂರಿನ ಖ್ಯಾತನಾಮರಾಗಿ ಗುರುತಿಸಲ್ಪಡುತ್ತಾರೆ ಎಂದು ಗೋಪಾಲನ್ ಗ್ರೂಪ್ ನಿರ್ದೇಶಕ ಸಿ. ಪ್ರಭಾಕರ್ ಶ್ಲಾಘನೆಗೈದರು.












Click it and Unblock the Notifications