Bengaluru traffic police warning: ಬೆಂಗಳೂರಲ್ಲಿ ಈ ತಪ್ಪು ಮಾಡಿದರೆ ಎಫ್‌ಐಆರ್, ವಾಹನವೂ ಜಪ್ತಿ ಹುಷಾರ್!
ಬೆಂಗಳೂರಿನಲ್ಲಿ ವಾಹನ ಚಲಾಯಿಸುವವರಿಗೆ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಈ ತಪ್ಪನ್ನು ಮಾಡಿದರೆ, ನಿಮ್ಮ ಮೇಲೆ ಎಫ್‌ಐಆರ್ ದಾಖಲಾಗಲಿದ್ದು, ಕಠಿಣ ಕಾನೂನು ಕ್ರಮ ತಗೆದುಕೊಳ್ಳುವ ಸಾಧ್ಯತೆಯೂ ಇದೆ. ಟ್ರಾಫಿಕ್ ಪೊಲೀಸರ ಸೂಚನೆ ಏನು, ನೀವು ಯಾವ ತಪ್ಪನ್ನು ಮಾಡಬಾರದು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ನಗರದ ವಾಹನ ಚಾಲಕರು, ಬಸ್ ಚಾಲಕರು ಹಾಗೂ ಶಾಲಾ ಮಕ್ಕಳ ಬಸ್ ಚಾಲಕರು ಸೇರಿದಂತೆ ಬೆಂಗಳೂರಿನ ಎಲ್ಲ ವಾಹನ ಸವಾರರಿಗೆ ವಾರ್ನಿಂಗ್‌ವೊಂದನ್ನು ಕೊಟ್ಟಿದ್ದಾರೆ. ಈ ನಿಯಮ ಉಲ್ಲಂಘನೆಯಾದರೆ ಎಫ್‌ಐಆರ್ ಹಾಗೂ ವಾಹನ ಜಪ್ತಿ ಸಹ ಮಾಡಲಾಗುತ್ತಿದೆ. ಅದೇ ಡ್ರಿಂಕ್ ಅಂಡ್ ಡ್ರೈವ್ ಕೇಸ್ (ಮದ್ಯಸೇವನೆ ಮಾಡಿ ವಾಹನ ಚಲಾಯಿಸುವುದು). ಡ್ರಿಂಕ್ ಅಂಡ್ ಡ್ರೈವ್ (Drink and drive)ಗೆ ಸಂಬಂಧಿಸಿದಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಫೀಲ್ಡ್‌ಗೆ ಇಳಿದಿದ್ದು, ಸೋಮವಾರ ದಿಢೀರ್ ಹಾಗೂ ವಿಶೇಷ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಬಸ್ ಚಾಲಕರ ಮೇಲೆ ಹದ್ದಿನ ಕಣ್ಣು: ಬೆಂಗಳೂರು ಟ್ರಾಫಿಕ್ ಪೊಲೀಸರು ನಗರದಲ್ಲಿನ ಬಸ್ ಚಾಲಕರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಇತ್ತೀಚಿನ ದಿಗಳಲ್ಲಿ ಕುಡಿದು ಶಾಲಾ ಶಾಲಾ ಬಸ್ ಚಲಾಯಿಸುವ ಡ್ರೈವರ್ ಗಳ ಸಂಖ್ಯೆ ಹೆಚ್ಚಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಕಳೆದ ಬಾರಿಯೂ ಟ್ರಾಫಿಕ್ ಪೊಲೀಸರು ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ಹಲವು ಶಾಲಾ ಬಸ್ ಚಾಲಕರು ಕುಡಿದು ವಾಹನ ಚಲಾಯಿಸುತ್ತಿದ್ದದ್ದು, ಕಂಡು ಬಂದಿತ್ತು. ಇದೀಗ ಸೋಮವಾರ ಬೆಳಿಗ್ಗೆಯೇ ಕುಡಿದು ವಾಹನ ಚಲಾಯಿಸುತ್ತಿದ್ದವರ ಪತ್ತೆ ಮಾಡುವುದಕ್ಕಾಗಿ ಫೀಲ್ಡ್‌ಗೆ ಇಳಿದಿದ್ದಾರೆ. ಇದರೊಂದಿಗೆ ಶಾಲಾ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಕೂರಿಸಿಕೊಂಡು ಹೋಗುವ ಶಾಲಾ ಬಸ್ ಚಾಲಕರಿಗೂ ಬಿಸಿ ಮುಟ್ಟಿಸಿದ್ದಾರೆ. ಟ್ರಾಫಿಕ್ ಪೊಲೀಸ್ ಸೋಮವಾರ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಬಸ್ ಡ್ರೈವರ್‌ಗಳು ಮದ್ಯ ಸೇವಿಸಿ ಚಲಾಯಿಸುತ್ತಿದ್ದ ವಾಹನಗಳನ್ನು ಜಪ್ತಿ ಮಾಡಲಾಗಿದೆ.
466 ಚಾಲಕ ವಿರುದ್ಧ ಎಫ್‌ಐಆರ್: ಸೋಮವಾರ ಒಂದೇ ದಿನ ಬೆಂಗಳೂರಿನಲ್ಲಿ 466 ಚಾಲಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದರಲ್ಲಿ ಮದ್ಯ ಸೇವಿಸಿ (ಡ್ರಿಂಕ್ ಅಂಡ್ ಡ್ರೈವ್) ವಾಹನ ಚಲಾಯಿಸಿದ 21 ಜನ ಚಾಲಕರು ಹಾಗೂ ಶಾಲಾ ವಾಹನಗಳಲ್ಲಿ ನಿಗದಿಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ 445 ಜನ ಚಾಲಕರ ಮೇಲೆ ಎಫ್‌ಐಆರ್ ದಾಖಲಿಸಿರುವುದಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಶಾಲಾ ವಾಹನ ಜಪ್ತಿ: ಪೊಲೀಸರು ಬಸ್ ಹಾಗೂ ಶಾಲಾ ವಾಹನ ಚಾಲಕರ ಮೇಲೆ (ಮದ್ಯಸೇವಿಸಿ ಚಾಲನೆ) ಮೇಲೆ ಕೇವಲ ಎಫ್‌ಐಆರ್ ದಾಖಲಿಸಿಲ್ಲ. ಅವರ ಚಲಾಯಿಸುತ್ತಿದ್ದ ಶಾಲೆಯ ವಾಹನಗಳನ್ನೂ ಜಪ್ತಿ ಮಾಡಲಾಗಿದೆ. ಈ ರೀತಿಯ ವಿಶೇಷ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿಯೂ, ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೂ, ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಟ್ರಾಫಿಕ್ ಪೊಲೀಸರು ಎಚ್ಚರಿಸಿದ್ದಾರೆ.












Click it and Unblock the Notifications