₹1,00,00,000 ಸಂಬಳದ ಕೆಲಸ ಬಿಟ್ಟ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್; ಕಾರಣ ತಿಳಿಯಿರಿ
ಬೆಂಗಳೂರು, ಡಿಸೆಂಬರ್, 07: ಸಾಮಾನ್ಯವಾಗಿ ಒಂದು ಕಂಪನಿಯಲ್ಲಿ ಕಡಿಮೆ ಸಂಬಳ ಅಥವಾ ಬೇರೆ ಯಾವುದೋ ಉದ್ದೇಶಕ್ಕೆ ಕೆಲಸ ಬಿಡಬೇಕೆಂದರೆ ಬೇರೆ ಕಡೆ ಉದ್ಯೋಗ ಹುಡುಕಿಕೊಂಡಿರಬೇಕಾಗುತ್ತದೆ. ಆದರೆ, ಇಲ್ಲೊಬ್ಬ ಇಂಜಿನಿಯರ್ ಯಾವುದೇ ಬೇರೆ ಆಫರ್ ಇಲ್ಲದಿದ್ರೂ ಕೂಡ ಮಾಸಿಕ 1,00,00,000 ಕೋಟಿ ರೂಪಾಯಿ ಸಿಗುವ ಕೆಲಸಕ್ಕೆ ಗುಡ್ ಬೈ ಹೇಳಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಾಗಾದರೆ ಕಾರಣ ಏನೆಂದು ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ ಕೆಲಸ ಸಿಗದೇ ಎಷ್ಟೊ ಮಂದಿ ಪರದಾಡುತ್ತಿದ್ದಾರೆ. ಮತ್ತೊಂದು ವರ್ಗ ಕೈತುಂಬಾ ಸಂಬಳ ಸಿಕ್ಕರೂ ಕೂಡ ಅದಕ್ಕೆ ರಾಜೀನಾಮೆ ನೀಡಿರುವ ಪ್ರಸಂಗಗಳು ನಡೆದಿವೆ. ಸುಮ್ಮನೆ ಅಂತೂ ಯಾರೂ ಕೈತುಂಬ ಸಂಬಳದ ಉದ್ಯೋಗ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಒಂದು ವೇಳೆ ರಾಜೀನಾಮೆ ನೀಡುತ್ತಾರೆಂದರೆ ಇದಕ್ಕೆ ಕಾರಣವೂ ಇರುತ್ತದೆ. ಅಂತಹದ್ದೇ ಒಂದು ಘಟನೆ ಇದೀಗ ನಡೆದಿದೆ.

ಬೆಂಗಳೂರಿನಲ್ಲಿ ಇಂಜಿನಿಯರ್‌ವೊಬ್ಬ ಯಾವುದೇ ಆಫರ್ ಇರದಿದ್ರೂ 1 ಕೋಟಿ ರೂಪಾಯಿ ಸಂಬಳ ನೀಡುವ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ತಾವು ಕೆಲಸ ಯಾಕೆ ಬಿಡುತ್ತಿರುವುದಾಗಿ ಕಾರಣಗಳನ್ನು ಸಹ ಸಾಲು ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಲ್ಲದೆ, ಇದಕ್ಕೆ ನೆಟ್ಟಿಗರು ಸಹ ವಿವಿಧ ರೀತಿಯಲ್ಲಿ ಟ್ವೀಟ್ ಮೂಲಕ ಕಾಮೆಂಟ್ ಮಾಡಿದ್ದಾರೆ.
ಇದೀಗ ಟೆಕ್ಕಿ 1 ಕೋಟಿ ರೂಪಾ ಸಂಬಳದ ಕೆಲಸ ಬಿಟ್ಟಿರುವ ಬಗ್ಗೆ ತನ್ನ ಟ್ವೀಟ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ಚರ್ಚೆ ಹುಟ್ಟುಹಾಕಿದೆ. 30 ವರ್ಷದ ವರುಣ್ ಹಸಿಜಾ ಎಂಬವರು ಪ್ರೊಡಕ್ಟ್ ಮ್ಯಾನೇಜರ್ ಆಗಿ ಕಳೆದ 10 ವರ್ಷದಿಮದ ಖಾಸಗಿ ಕಂಪನಿಯೊಂದನ್ನು ಕೆಲಸ ಮಾಡಿಕೊಂಡಿದ್ದರು.
A couple of months ago, I made one of the hardest decisions of my life: I left my cushy, high-paying (₹1 Cr+) job without another offer in hand.
— Varun Hasija (@warunhasija) December 5, 2024
No plan. No backup. Just the decision that I needed a break—a real one—for the first time in my decade-long career.
1 ಕೋಟಿ ರೂಪಾಯಿಗೂ ಹೆಚ್ಚು ಸಂಬಳ ನೀಡುತ್ತುದ್ದ ಕಂಪನಿಯನ್ನು ಬಿಟ್ಟಿರುವ ವರುಣ್, ತಮ್ಮ ನಿರ್ಧಾರವನ್ನು ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವರುಣ್ ತೆಗೆದುಕೊಂಡು ಈ ನಿರ್ಧಾರ ಬೆಂಗಳೂರು ಸೇರಿದಂತೆ ದೇಶದ ಹಲವು ಟೆಕ್ಕಿಗಳನ್ನು ಅಚ್ಚರಿಗೆ ಒಳಗಾಗುವಂತೆ ಮಾಡಿದೆ.
"ಕೆಲ ತಿಂಗಳುಗಳ ಹಿಂದೆ ನನ್ನ ಜೀವನದ ಅತ್ಯಂತ ಕಠಿಣ ಮತ್ತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನಾನು ನನ್ನ ಆರಾಮದಾಯಕ ಮತ್ತು ಅತ್ಯಧಿಕ ಅಂದರೆ 1 ಕೋಟಿಗೂ ಅಧಿಕ ಸಂಬಳದ ಕೆಲಸವನ್ನು ಬಿಟ್ಟಿದ್ದೇನೆ. ಯಾವುದೇ ಬ್ಯಾಕ್‌ಅಪ್ ಪ್ಲಾನ್ ಅಂತೂ ಇಲ್ಲ. ಬೇರೆ ಕಂಪನಿ ಕೆಲಸದ ಆಫರ್ ಸಹ ನನ್ನ ಬಳಿಯಿಲ್ಲ. ಒಂದು ದಶಕದ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬ್ರೇಕ್ ಬೇಕು ಅನ್ನಿಸಿದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಂಡೆ," ಎಂದು ವರುಣ್ ಹಸಿಜಾ ಬರೆದುಕೊಂಡಿದ್ದಾರೆ.
"ಈ ನಿರ್ಧಾರವನ್ನು ದಿಢೀರ್ ಆಗಿ ತೆಗೆದುಕೊಂಡಿದ್ದಲ್ಲ. ಇಷ್ಟು ವರ್ಷಗಳಲ್ಲಿ ಎಲ್ಲಿ ಮತ್ತು ಹೇಗೆ ಕೆಲಸ ಮಾಡಬೇಕೆಂಬ ನಿಯಮ ಮಾಡಿಕೊಂಡಿದ್ದೆ. ಇದಕ್ಕಾಗಿ ನಾನೇ ಸಂತೋಷ, ಪ್ರತಿಫಲ ಮತ್ತು ಹಣ ಗಳಿಸುವುದು (Happiness, Impact and Wealth Creation) ಎನ್ನುವ ಚೌಕಟ್ಟನ್ನು ಹಾಕಿಕೊಂಡಿದ್ದೆ," ಎಂದು ಟ್ವೀಟ್ ಮೂಲಕ ವರುಣ್ ವಿವರಣೆ ನೀಡಿದ್ದಾರೆ.
ಕೆಲಸ ಬಿಡಲು ವರುಣ್ ಕೊಟ್ಟ 3 ಕಾರಣಗಳೇನು?
P1: Happiness: ದಿನದ 24 ಗಂಟೆಗಲ್ಲಿ ಶೇಕಡ 80ರಷ್ಟು ಸಮಯವನ್ನು ಕೆಲಸ ಮಾಡುವುದರಲ್ಲಿಯೇ ಕಳೆಯುತ್ತೇವೆ. ಆದರೆ, ಕೆಲಸ ಮಾಡುವ ಸ್ಥಳದಲ್ಲಿ ಸಂತೋಷ ಇಲ್ಲದಿದ್ದರೆ ಏನು ಮಾಡುವುದು? ನನ್ನ ಪ್ರಕಾರ ಕೆಲಸಕ್ಕಾಗಿ ಸಂತೋಷವನ್ನು ನಿರ್ಲಕ್ಷ್ಯಿಸಲು ಆಗಲ್ಲ. ಕೆಲಸ ವಾತಾವರಣ ಚೆನ್ನಾಗಿರಬೇಕಾಗುತ್ತದೆ.
P2: Impact: ನಮ್ಮ ಕೆಲಸವು ಗ್ರಾಹಕರು, ವ್ಯಾಪಾರ ಅಥವಾ ಎರಡರ ಮೌಲ್ಯವನ್ನು ಸೃಷ್ಟಿಸಬೇಕಾಗುತ್ತದೆ. ಸಂತೋಷದಿಂದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು, ತಂಡವನ್ನು ಮುನ್ನಡೆಸಿದಾಗ ಹೆಚ್ಚಾಗುವ ಆದಾಯ ಕೆಲಸ ಮಾಡಲು ಪ್ರೋತ್ಸಾಹಿಸುತ್ತದೆ.
P3: Wealth Creation: ಸಂತೋಷ, ಪ್ರತಿಫಲ ಮತ್ತು ಸಂಪತ್ತು ಒಂದೇ ಕೆಲಸದಲ್ಲಿ ಕಾಣಲು ಸಿಗುವುದಿಲ್ಲ. ನನ್ನ ಕೆಲಸದಲ್ಲಿ ಸಂತೋಷ ಮತ್ತು ಪ್ರತಿಫಲ ಇರಲಲ್ಲ. ಯಾವುದಕ್ಕೆ ಅದ್ಯತೆ ನೀಡಬೇಕು ಎಂದು ನೀವು ನಿರ್ಧರಿಸಿ ಎಂದು ವರುಣ್ ಹೇಳಿದ್ದಾರೆ.
ಇನ್ನು ವರುಣ್ ಹಸಿಜಾ ಡಿಸೆಂಬರ್ 5ರಂದು ಈ ಟ್ವೀಟ್ ಮಾಡಿದ್ದು, ಇಲ್ಲಿವರೆಗೂ 1.4K ಮೆಚ್ಚುಗೆಗಳು ಬಂದಿದ್ದು, ಲಕ್ಷಾಂತರ ಪ್ರತಿಕ್ರಿಯೆಗಳು ಬಂದಿವೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications