Bengaluru: ಕಿರಣ್ ಮಜುಂದಾರ್ ಶಾ ಪ್ರಸ್ತಾವನೆ: ಬೆಂಗಳೂರು & ಚೆನ್ನೈ ಸೂಕ್ತ ಎಂದ ಪಿ. ಚಿದಂಬರಂ
ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ಬೆಂಗಳೂರಿನ ಮೂಲಸೌಕರ್ಯ ಸುಧಾರಿಸಬೇಕು ಎಂದು ಉದ್ಯಮಿಗಳು ಪದೇ ಪದೇ ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಈ ವಿಚಾರವಾಗಿ ಉದ್ಯಮಿಗಳು ಹಾಗೂ ಕರ್ನಾಟಕ ಸರ್ಕಾರದ ಸಚಿವರ ನಡುವೆ ವಾಕ್ಸಮರ ನಡೆದಿತ್ತು. ಅಲ್ಲದೇ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರೇ ಯಾಕೆ ರಸ್ತೆಗಳನ್ನು ಅಭಿವೃದ್ಧಿಪಡಿಸಬಾರದು ಎಂದು ಸಚಿವ ಎಂ.ಬಿ ಪಾಟೀಲ್ ಅವರು ಪ್ರಶ್ನೆ ಮಾಡಿದ್ದರು.
ಈ ಬೆಳವಣಿಗೆಯ ನಂತರ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರೇ ತಮ್ಮ ಸಂಸ್ಥೆಯ ಸುತ್ತಮುತ್ತಲಿನ 10ರಿಂದ 15 ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದ್ದರು. ಈ ರೀತಿ ಕಿರಣ್ ಅವರೇ 15 ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದ ಮೇಲೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಸಹ ಕಿರಣ್ ಅವರು ಕೇಳಿದರೆ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡುವುದಾಗಿಯೂ ಹೇಳಿದ್ದರು.

ಇದೀಗ ಈ ವಿಚಾರ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಅವರು ಈ ಪ್ರಯೋಗಕ್ಕೆ ಬೆಂಗಳೂರು ಅಥವಾ ಚೆನ್ನೈ ಎರಡೂ ಪ್ರಮುಖ ನಗರಗಳು ಸೂಕ್ತವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಸಹ ಈ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು, ಬೆಂಗಳೂರಿನ ಕೆಲವು ರಸ್ತೆಗಳ ಅಭಿವೃದ್ಧಿಗೆ ಹಣಕಾಸು ನೆರವು ನೀಡುವುದಾಗಿ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಪ್ರಸ್ತಾಪಿಸಿದ್ದಾರೆ. ಈ ಪ್ರಸ್ತಾವನೆಯನ್ನು ನಾನು ಆಸಕ್ತಿಯಿಂದ ಗಮನಿಸಿದ್ದೇನೆ, ಇದೊಂದು ಉತ್ತಮ ವಿಚಾರ & ಕೊಡುಗೆ, ಅಭಿನಂದನೆಗಳು ಎಂದು ಕಿರಣ್ ಮಜುಂದಾರ್ ಶಾ ಅವರು ಹೇಳಿದ್ದಾರೆ.
ಅಲ್ಲದೇ ಮುಂದುವರಿದು ಸಾರ್ವಜನಿಕ ಕಾಮಗಾರಿಗಳಲ್ಲಿನ ಸಮಸ್ಯೆ ಹಣದ ಕೊರತೆಯಲ್ಲ; ಸಮಸ್ಯೆ ಸಾರ್ವಜನಿಕ ಕಾಮಗಾರಿಗಳ ಅನುಷ್ಠಾನದಲ್ಲಿದೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರಗಳು ಕಿರಣ್ ಶಾ ಅವರ ಆಲೋಚನೆ ಜಾರಿ ಮಾಡಬಹುದು. ಸಾರ್ವಜನಿಕ ಹಣ, ಟೆಂಡರ್ ಇತ್ಯಾದಿಗಳನ್ನು ಬಳಸಿಕೊಂಡು ಗುತ್ತಿಗೆದಾರರನ್ನು ಆಯ್ಕೆ ಮಾಡಬಹುದು. ಆಯ್ಕೆಯ ನಂತರ, ಗುತ್ತಿಗೆದಾರರನ್ನು ಕಿರಣ್ ಶಾ ಅವರಂತಹ ಇಚ್ಛಾಶಕ್ತಿಯುಳ್ಳ ಕಂಪನಿ ಅಥವಾ ಕೈಗಾರಿಕೋದ್ಯಮಿಯ ಮೇಲ್ವಿಚಾರಣೆಯಲ್ಲಿ ಇರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಗುತ್ತಿಗೆದಾರರು ಸಾರ್ವಜನಿಕ ಕಾಮಗಾರಿಗಳನ್ನು (ರಸ್ತೆ ಅಭಿವೃದ್ಧಿ) ನಿರ್ವಹಿಸುತ್ತಾರೆ. ಆದಾಗ್ಯೂ, ಕೆಲಸದ ಗುಣಮಟ್ಟ ಮತ್ತು ಸಕಾಲಿಕ ಅನುಷ್ಠಾನಕ್ಕೆ ಮೇಲ್ವಿಚಾರಣೆ ಕಂಪನಿ ಅಥವಾ ಕೈಗಾರಿಕೋದ್ಯಮಿಗಳು ಜವಾಬ್ದಾರರಾಗಿರುತ್ತಾರೆ. ಯಾವುದೇ ದಂಡ ಅಥವಾ ವೆಚ್ಚದ ಮಿತಿಮೀರಿದ ಮೊತ್ತವನ್ನು ಮೇಲ್ವಿಚಾರಣಾ ಕಂಪನಿ ಅಥವಾ ಕೈಗಾರಿಕೋದ್ಯಮಿ ಭರಿಸುತ್ತಾರೆ. ಚೆನ್ನೈ ಅಥವಾ ಬೆಂಗಳೂರು ಈ ವಿಚಾರವನ್ನು ಪ್ರಯೋಗಿಸಲು ಸೂಕ್ತ ಸ್ಥಳವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications