ಬೆಂಗಳೂರು "ಕೆಟ್ಟ ಸಿಟಿ ಬ್ರೋ"; ಕನ್ನಡ ಖ್ಯಾತ ಕಮಿಡಿಯನ್, ಗಾಯಕ ಕೆಂಡ!

ಬೆಂಗಳೂರಲ್ಲಿ ಕಳೆದ 15 ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನ ಪರದಾಡ್ತಿದ್ದಾರೆ ನಿಜ. ಆದರೆ, ಬೇರೆ ಸಿಟಿಗಳಲ್ಲಿ ಮಳೆಯಿಂದ ಆಗುವ ಅನಾಹುತಗಳಿಗೆ ಅಯ್ಯೋ ಪಾಪ ಎನ್ನುವ ಜನ ಬೆಂಗಳೂರಲ್ಲಿ ಮಳೆ ಬಂದು ಸಮಸ್ಯೆಯಾದರೆ ಮಾತ್ರ ಅಯ್ಯೋ ಅನ್ನಲ್ಲ. ಬೆಂಗಳೂರು ಮಳೆ ಸಮಸ್ಯೆಯ ಬಗ್ಗೆ ಇದೀಗ ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಹಾಗೂ ಕನ್ನಡದ ಕಮಿಡಿಯನ್ ಮಾತನಾಡಿದ್ದಾರೆ.

ಬೆಂಗಳೂರಲ್ಲಿ ಮಳೆ ಬಂದರೆ ಸಮಸ್ಯೆ ಶುರುವಾಗುತ್ತೆ. ಆದರೆ, ಈ ಬಾರಿ ಧಾರಾಕಾರ ಮಳೆಯಾಗುತ್ತಿದೆ. ಈ ಬಾರಿ ಬೆಂಗಳೂರಿನ ಕೆಲವು ಭಾಗದಲ್ಲಿ ಕಳೆದ 115 - 120 ವರ್ಷಗಳಲ್ಲಿ ಕಾಣದ ಮಳೆಯಾಗಿದೆ.ಆದರೆ, ಈ ಮಳೆಯಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ.

Bengaluru rain bad city bro Famous Kannada comedian singer displeasure

ಆದರೆ, ದೆಹಲಿ,ಕೇರಳ ಅಥವಾ ಮುಂಬೈನಲ್ಲಿ ಮಳೆ ಬಂದಾಗ ನಾವೆಲ್ಲ (Prayer for City) ನಾವು ಪ್ರಾರ್ಥನೆ ಮಾಡುತ್ತೇವೆ. ಆದರೆ, ಬೆಂಗಳೂರಲ್ಲಿ ಮಳೆಯಾದಾಗ ಮಾತ್ರ ಕೆಟ್ಟ ಸಿಟಿ ಅಂತಿವೆ ಎಂದು ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಹಾಗೂ ಕಾಮಿಡಿಯನ್‌ ಗಣೇಶ್ ಕಾರಂತ್ ಹೇಳಿದ್ದಾರೆ.

ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಬೇರೆ ದೊಡ್ಡ ಸಿಟಿಯಲ್ಲಿ ಮಳೆಯಾಗಿ ಸಮಸ್ಯೆಯಾದರೆ ಮಾತ್ರ ಅಯ್ಯೋ ಅಂತಾರೆ. ಬೆಂಗಳೂರಿನ ಬಗ್ಗೆ ಆ ಕನಿಕರ ಯಾಕಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ನನಗೆ ಬೆಂಗಳೂರು ಮತ್ತು ಇಲ್ಲಿನ ಜನರ ಬಗ್ಗೆ ಫೀಲ್ ಅನಿಸುತ್ತದೆ. ದೆಹಲಿ, ಕೇರಳ ಅಥವಾ ಮುಂಬೈನಲ್ಲಿ ಮಳೆ ಬಂದಾಗ ನಾವು ಪ್ರಾರ್ಥನೆ ಮಾಡಲು ಒಟ್ಟಿಗೆ ಸೇರುತ್ತೇವೆ. ಆದರೆ, ಬೆಂಗಳೂರು ಮಳೆ ವಿಚಾರಕ್ಕೆ ಬಂದಾಗ "ಕೆಟ್ಟ ನಗರ ಬ್ರೋ!" ಅಂತಾರೆ. ಇಲ್ಲಿ ಸಹ ಧಾರಾಕಾರ ಮಳೆಯಾಗಿದೆ ಅಂತ ಯಾಕೆ ಅರ್ಥ ಆಗ್ತಿಲ್ಲ ಎಂದಿದ್ದಾರೆ.

Bengaluru rain bad city bro Famous Kannada comedian singer displeasure

ಬೆಂಗಳೂರು ಈಗ ಇರುವ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಮಾಡಿಲ್ಲ. ಬೆಂಗಳೂರಲ್ಲಿ ಈಗ ಮಿತಿ ಮೀರಿ ಜನಸಂಖ್ಯೆ ಆಗಿದೆ. ಬೆಂಗಳೂರಲ್ಲಿ ಜನಸಂಖ್ಯೆ ಸ್ಫೋಟವಾಗಿರುವುದು (ಅತೀ ಹೆಚ್ಚು ಜನ ಸಿಟಿಯಲ್ಲಿ ಸೇರಿರುವುದು) ನಾವು ಎದುರಿಸುತ್ತಿರುವ ಪ್ರವಾಹದ ಸಮಸ್ಯೆಗಳಿಗೆ ಪರೋಕ್ಷ ಕಾರಣವಾಗುತ್ತಿದೆ. ಜನಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಸಮಸ್ಯೆ ಉಲ್ಭಣಕ್ಕೆ ಕಾರಣವಾಗಿದೆ. ಅಲ್ಲದೇ ಈ ಸಮಸ್ಯೆಯನ್ನು ನಿಭಾಯಿಸಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಪರಿಸ್ಥಿತಿಗೂ ಸ್ವಲ್ಪ ಸಹಾನುಭೂತಿ ಮತ್ತು ಬೆಂಬಲವನ್ನು ತೋರಿಸೋಣ ಎಂದು ಹೇಳಿದ್ದಾರೆ.

ಜನರಿಂದ ಮಿಶ್ರ ಪ್ರತಿಕ್ರಿಯೆ: ಗಣೇಶ್ ಕಾರಂತ್ ಅವರ ಟ್ವೀಟ್‌ಗೆ ಜನ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಈ ಜನ ಬೆಂಗಳೂರಲ್ಲಿ ಸಮಸ್ಯೆಯಾದರೆ ಮಾತ್ರ ಸರಿ ಇಲ್ಲ ಅಂತಾರೆ. ಆದರೆ, ಬೇರೆ ಸಿಟಿಗಳಲ್ಲಿ ಮಳೆಯಿಂದ ಸಮಸ್ಯೆಯಾದರೆ ಮಾತ್ರ ಆ ಸಿಟಿಗಾಗಿ ಪ್ರಾರ್ಥನೆ ಮಾಡೋಣ ಅಂತಾರೆ. ಇಷ್ಟೊಂದು ತಾರತಮ್ಯ ಯಾಕೆ ಅಂತ ಜನ ಪ್ರಶ್ನೆ ಮಾಡಿದ್ದಾರೆ. ಜನ ಹೆಚ್ಚಾಗುವುದಕ್ಕೂ ಬೆಂಗಳೂರು ನೀರು ಸಮಸ್ಯೆಗೂ ಕಾರಣ ಏನು, ಒಂದಕ್ಕೊಂದು ಸಂಬಂಧ ಕಲ್ಪಿಸುವುದರಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ.

ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ಗಣೇಶ್ ಕಾರಂತ್ ಅವರು ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯಗಳಿಗೆ ವ್ಯಕ್ತಪಡಿಸುವ ಹಾಗೂ ಪ್ರಶ್ನೆ ಮಾಡುವ ಅಧಿಕಾರ ಹಾಗೂ ಹಕ್ಕು ಇದೆ. ಅದರಲ್ಲೂ ಕಠಿಣ ಸಂದರ್ಭಗಳಲ್ಲಿ ಮಾತನಾಡಬೇಕಾಗುತ್ತದೆ. ಆದಾಗ್ಯೂ, ನಮ್ಮ ಬೆಂಗಳೂರಲ್ಲಿ ಮಾತ್ರವಲ್ಲ. ಎಲ್ಲ ಕಡೆಯೂ ಸಮಸ್ಯೆ ಮತ್ತು ಹೋರಾಟ ನಡಿತಿದೆ ಎನ್ನುವುದನ್ನು ಗಮನಿಸುವುದು ಮುಖ್ಯ. ಸಂಕಷ್ಟದ ಪರಿಸ್ಥಿತಿಯಲ್ಲಿ ವ್ಯಕ್ತಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಮ್ಯಾಟರ್‌ ಆಗುತ್ತೆ. ಬೆಂಗಳೂರಲ್ಲಿ ಕೆಲವರ ಬಗ್ಗೆ ಕೃತಜ್ಞತೆಯ ಕೊರತೆ ಇದೆ. ಯಾರೂ ಯಾರಿಗೂ ಏನ್ನನ್ನು ಕೇಳುತ್ತಿಲ್ಲ. ನಮ್ಮ ನಗರದ ಬಗ್ಗೆ ಸ್ವಲ್ಪ ನಮ್ರತೆ ಮತ್ತು ಗೌರವ ಬೆಳೆಸಿಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ.

ಯಾರು ಈ ಗಣೇಶ್‌ ಕಾರಂತ್‌ ?

ಗಣೇಶ್‌ ಕಾರಂತ್‌ ಅವರು ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದಾರೆ.‌ ಇವರು ಸಿನಿಮಾದ ಹಿನ್ನೆಲೆ ಗಾಯಕರಾಗಿದ್ದಾರೆ. ಯೂಟ್ಯೂನ್‌ ಕಾಮಿಡಿ ವಿಡಿಯೋಗಳ ಮೂಲಕ ಇವರು ಫೇಮಸ್‌ ಆಗಿದ್ದಾರೆ. ಅಲ್ಲದೇ ಇವರ ಪತ್ನಿ ಹಾಗೂ ಕುಟುಂಬದವರು ಸಹ ಕಾಮಿಡಿ ಮೂಲಕ ಮಿಂಚಿದ್ದಾರೆ. ಯೂಟ್ಯೂಬ್‌ ಚಾನೆಲ್‌ ಮೂಲಕ ಕಾಮಿಡಿ, ಕ್ರಿಕೆಟ್‌ ಹಾಗೂ ಸಿನಿಮಾ ರಿವ್ಯೂ ಮಾಡುವ ಮೂಲಕ ಫೇಮಸ್‌ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+