ಬೆಂಗಳೂರು: ಮಹಿಳಾ ಅಥ್ಲೀಟ್ ಸ್ನಾನ ಮಾಡುತ್ತಿದ್ದ ವಿಡಿಯೋ ಸೆರೆಹಿಡಿದ ವಾಲಿಬಾಲ್ ಆಟಗಾರ್ತಿ
ಬೆಂಗಳೂರು: ನಗರದ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ ವಿಕೃತ ಘಟನೆಯೊಂದು ನಡೆದಿದ್ದು, ಮಹಿಳಾ ಕ್ರೀಡಾಪಟುವೊರು ಸ್ನಾನ ಮಾಡುವಾಗ ಇನ್ನೋರ್ವ ಆಟಗಾರ್ತಿ ವಿಡಿಯೋವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿರುವ ಆರೋಪ ಕೇಳಿ ಬಂದಿದೆ.
ಈ ಘಟನೆ ಕುರಿತು ಡೇಕ್ವಾಂಡೋ ಆಟಗಾರ್ತಿ ತನ್ನ ಖಾಸಗಿ ವಿಡಿಯೋ ಸೆರೆ ಹಿಡಿದ ವಾಲಿಬಾಲ್ ಆಟಗಾರ್ತಿ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಬ್ಬರು ಆಟಗಾರ್ತಿಯರು ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲೇ ತರಬೇತಿ ಪಡೆಯುತ್ತಿದ್ದಾರೆ.

ಸೋಮವಾರ ರಾತ್ರಿ ಟೇಕ್ವಾಂಡೋ ಆಟಗಾರ್ತಿ ಅಭ್ಯಾಸ ಮುಗಿದ ಬಳಿಕ ರೂಮ್ಗೆ ಬಂದಿದ್ದರು. ಬಳಿಕ ಸ್ನಾನಕ್ಕೆ ಹೋಗಿದ್ದರು. ಆದರೆ ಇದೇ ಸಮಯದಲ್ಲಿ ವಾಲಿಬಾಲ್ ಆಟಗಾರ್ತಿ ಕದ್ದು ಆಕೆಯ ಖಾಸಗಿ ವಿಡಿಯೋವನ್ನು ಸೆರೆಹಿಡಿದಿದ್ದಾಳೆ ಎನ್ನಲಾಗಿದೆ. ಟೇಕ್ವಾಂಡೋ ಆಟಗಾರ್ತಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಯಾರೋ ವಿಡಿಯೋ ಮಾಡುತ್ತಿರುವಂತೆ ಭಾಸವಾಗಿದೆ.
ಕೂಡಲೇ ಆಕೆ ಹೊರ ಬಂದಿದ್ದು, ವೀಡಿಯೊವನ್ನು ಚಿತ್ರೀಕರಿಸಿದ ಯುವತಿ ಇದ್ದ ಬಾತ್ರೂಮ್‌ನ ಬಾಗಿಲು ತಟ್ಟಿದ್ದಾರೆ. ಅಲ್ಲದೇ ಆರೋಪಿಗಾಗಿ ಅಲ್ಲೇ ಕಾದಿದ್ದಾರೆ. ಎರಡು ಮೂರು ನಿಮಿಷದ ಬಳಿಕ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲೇ ತರಬೇತಿ ಪಡೆಯುತ್ತಿದ್ದ ವಾಲಿಬಾಲ್ ಆಟಗಾರ್ತಿ ಅಲ್ಲಿಂದ ಹೊರಬಂದಿದ್ದಾಳೆ.
ವಿಡಿಯೋ ರೆಕಾರ್ಡ್ ಆದ ಬಗ್ಗೆ ಟೇಕ್ವಾಂಡೋ ಆಟಗಾರ್ತಿ ಗಾಬರಿಯಾಗಿದ್ದು, ಇದನ್ನು ಪ್ರಶ್ನಿಸಿದ ಆಕೆ ವಾಲಿಬಾಲ್ ಆಟಗಾರ್ತಿ ಯ ರೆಕಾರ್ಡ್ ಮಾಡಿದ್ದ ಮೊಬೈಲ್ ಅನ್ನು ಒಡೆದು ಹಾಕಿದ್ದಾಳೆ. ಈ ವಿಡಿಯೋ ಬೇರೆಯವರಿಗೆ ಕಳುಹಿಸುವ ಅನುಮಾನವನ್ನೂ ವ್ಯಕ್ತಪಡಿಸಿದ್ದು, ಈ ಬಗ್ಗೆ ದೂರಿನಲ್ಲೂ ಉಲ್ಲೇಖಿಸಿದ್ದಾರೆ. ಸದ್ಯ ಆ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಘಟನೆ ಕುರಿತು ಸಂತ್ರಸ್ತೆ ದೂರನ್ನೂ ದಾಖಲಿಸಿರುವ ಬಗ್ಗೆ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಬಿ.ನಿಂಬರಗಿ ಮಾಹಿತಿ ನೀಡಿದ್ದಾರೆ. ಐಪಿಸಿ ಸೆಕ್ಷನ್ 354, ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಮೊಬೈಲ್ ಪರಿಶೀಲಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಮೊಬೈಲ್‍ನಲ್ಲಿ ಚಿತ್ರೀಕರಿಸಿದ ಆರೋಪಿಯ ವಿರುದ್ಧ ಸೆಕ್ಷನ್ 354, 201, 66ಸಿ ಐಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಪೊಲೀಸರು ರೆಕಾರ್ಡ್ ಮಾಡಿದ ಮೊಬೈಲ್ ಅನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
15 ಕೋಟಿ ರೂ.ಮೌಲ್ಯದ ತಿಮಿಂಗಿಲದ ವಾಂತಿ ವಶ: ಐವರ ಬಂಧನ
ಬೆಂಗಳೂರು: ನಗರದಲ್ಲಿ 15 ಕೋಟಿ ರೂ. ಮೌಲ್ಯದ ಅಂಬರ್ಗ್ರೀಸ್(ಇದನ್ನು ತಿಮಿಂಗಿಲದ ವಾಂತಿ ಎನ್ನಲಾಗುತ್ತದೆ) ಮಾರಾಟ ಮಾಡಲು ಯತ್ನಿಸುತ್ತಿದ್ದ ಈವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಸಾಜೀರ್, ಸಲೀಂ, ಚಾಲ್ಸ್, ವಿಜು, ನೌಶಾದ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು ಕೇರಳದಿಂದ ಅಂಬರ್ಗ್ರೀಸ್ ತಂದು ಬೆಂಗಳೂರಿನಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಏಕಾಏಕಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 15 ಕೋಟಿ ರೂಪಾಯಿ ಬೆಲೆಬಾಳುವ 49 ಕೆಜಿ ಅಂಬರ್ಗ್ರೀಸ್(ತಿಮಿಂಗಿಲದ ವಾಂತಿ)ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications