• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐತಿಹಾಸಿಕ ಬೆಂಗಳೂರು ಕರಗಕ್ಕೆ ತಡೆ ನೀಡಿದ ಹೈಕೋರ್ಟ್

|

ಬೆಂಗಳೂರು, ಏಪ್ರಿಲ್ 7: ಐತಿಹಾಸಿಕ ಬೆಂಗಳೂರು ಕರಗ ನಡೆಸದಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಮಾರ್ಚ್ 31 ರಿಂದ ಏಪ್ರಿಲ್ 10 ರವರೆಗೂ ಬೆಂಗಳೂರು ಕರಗ ಮಹೋತ್ಸವ ನಡೆಯಬೇಕಿತ್ತು. ಇದಕ್ಕೆ ಇದೀಗ ಹೈಕೋರ್ಟ್ ಬ್ರೇಕ್ ಹಾಕಿದೆ.

''ಬೆಂಗಳೂರು ಕರಗ ಸಂಪ್ರದಾಯವನ್ನು ಮುರಿಯುವುದು ಬೇಡ. ನಾಲ್ಕೈದು ಜನ ಇದ್ದು ಸರಳವಾಗಿ ಕರಗವನ್ನು ಆಚರಿಸಿ'' ಎಂದು ಇತ್ತೀಚೆಗೆಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದರು.

ಸರಳವಾಗಿ ಕರಗ ಆಚರಿಸಿ: ಸಿಎಂ ಯಡಿಯೂರಪ್ಪ ಸೂಚನೆ

ಆದ್ರೀಗ, ಗೌರವಾನ್ವಿತ ರಾಜ್ಯ ಉಚ್ಛ ನ್ಯಾಯಾಲಯವು ಧಾರ್ಮಿಕ ಆಚರಣೆ ಸಂಬಂಧ ಜನರು ಸೇರುವುದನ್ನು ತಡೆಯುವಂತೆ ನಿರ್ದೇಶನ ನೀಡಿರುವುದರಿಂದ ಈ ಬಾರಿಯ ಧರ್ಮರಾಯಸ್ವಾಮಿ ಕರಗ ಮಹೋತ್ಸವವನ್ನು ರದ್ದು ಪಡಿಸಲಾಗಿದೆ.

ಬೆಂಗಳೂರು ಕರಗ ಮಹೋತ್ಸವ ರದ್ದಾಗಿದೆ ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ಸಮಿತಿ ಕೂಡ ಸ್ಪಷ್ಟ ಪಡಿಸಿದೆ.

ಮಾರಣಾಂತಿಕ ಕೊರೊನಾ ವೈರಸ್ ತಡೆಗಟ್ಟಲು ಲಾಕ್ ಡೌನ್ ಹೇರಲಾಗಿದೆ. ಈ ವೇಳೆ ಜನಜಂಗುಳಿ ಸೇರುವಂತಹ ಯಾವುದೇ ಕಾರ್ಯಕ್ರಮಗಳು ನಡೆಯುವಂತಿಲ್ಲ. ಹೆಚ್ಚು ಜನ ಸೇರುವ ಧಾರ್ಮಿಕ ಕಾರ್ಯಕ್ರಮಗಳನ್ನೂ ನಡೆಸದಂತೆ ಆದೇಶಿಸಲಾಗಿದೆ.

English summary
Bengaluru Karaga 2020 cancelled by Karnataka High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X