RCB vs CSK Match: ತ್ಯಾಜ್ಯ ಉತ್ಪಾದನೆಯಲ್ಲೂ ದಾಖಲೆ ಬರೆದ ಆರ್‌ಸಿಬಿ-ಸಿಎಸ್‌ಕೆ

ಬೆಂಗಳೂರು, ಮೇ 20: ಬೆಂಗಳೂರಿನಲ್ಲಿ RCB vs CSK ಮ್ಯಾಚ್ ಇದೆ ಎಂದರೆ ಸಾಕು ಸಹಸ್ರ ಸಂಖ್ಯೆಯಲ್ಲಿ ಕ್ರಿಕೆಟ್ ಪ್ರೇಮಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಮೊನ್ನೆ ಶನಿವಾರ ಆಗಿದ್ದು ಇದೆ. ಮ್ಯಾಚ್ ಗೆಲ್ಲುವ ಮೂಲಕ ಆರ್‌ಸಿಬಿ ಪ್ಲೇಆಪ್ ಹೋಯಿತು. ಪ್ರತಿ ಭಾರಿ ಗೆಲ್ಲುತ್ತಿದ್ದ ಸಿಎಸ್‌ಕೆ ಈ ಬಾರಿ ಮಂಡಿಯೂರಿತು. ಕ್ರಿಕೇಟ್‌ನಲ್ಲಿ ಸಾಧನೆ ಮಾಡುವ ಈ ಎರಡು ಕ್ರಿಕೇಟ್ ತಂಡಗಳು ಇದೀಗ ತ್ಯಾಜ್ಯ ಉತ್ಪಾದನೆಯಲ್ಲೂ ದಾಖಲೆ ಬರೆದಿವೆ.

ಆರ್‌ಸಿಬಿ ಮತ್ತು ಸಿಎಸ್‌ಕೆ ಕ್ರಿಕೇಟ್ ತಂಡಗಳು ಪರೋಕ್ಷವಾಗಿ ಟನ್‌ಗಟ್ಟಲೇ ತ್ಯಾಜ್ಯ ಉತ್ಪಾದನೆಗೆ ಕಾರಣವಾಗಿವೆ. ಶನಿವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಹೈ-ಸ್ಟೇಕ್ ಪಂದ್ಯವು ಪ್ರೇಕ್ಷಕರನ್ನು ಆಕರ್ಷಿಸಿತು. ಮೈದಾನದ ಸುತ್ತಮುತ್ತ ಇದೇ ಜನಸಮೂಹದಿಂದ ಸುಮಾರು 06 ಟನ್‌ಗಳಷ್ಟು ತ್ಯಾಜ್ಯ ಉತ್ಪಾದನೆ ಆಗಿದೆ.

Bengaluru Chinnaswamy Stadium Around 6 Tonnes Waste Generated due RCB vs CSK Match

ಒಂದು ಕಾಂಪ್ಯಾಕ್ಟರ್, 04 ಆಟೋ ಟಿಪ್ಪರ್ ಬಳಕೆ

ಪಂದ್ಯಾವಳಿ ನಡೆದ ಮಾರನೇ ದಿನ ಬೆಳಗ್ಗೆ ಬರೋಬ್ಬರಿ 45 ಪೌರಕಾರ್ಮಿಕರು ಕ್ರೀಡಾಂಗಣದ ಬಳಿ ಉತ್ಪಾದನೆಯಾಗಿದ್ದ ತ್ಯಾಜ್ಯವನ್ನು ಸಂಗ್ರಹಿಸುವಲ್ಲಿ, ತೆರವುಗೊಳಿಸುವಲ್ಲಿ ನಿರತರಾದರು. ಒಂದು ಕಾಂಪ್ಯಾಕ್ಟರ್ ಮತ್ತು ನಾಲ್ಕು ಆಟೋ ಟಿಪ್ಪರ್ ಮೂಲಕ ಅಭಿಮಾನಿಗಳ ಶರ್ಟ್, ಟಿಕೆಟ್ ಮತ್ತಿತರ ಸಾಮಗ್ರಿಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ತ್ಯಾಜ್ಯವನ್ನು ತೆರವುಗೊಳಿಸಲಾಯಿತು.

ಕ್ರೀಡಾಂಗಣ ಸುತ್ತ ಕಂಡು ಬಂದ ತ್ಯಾಜ್ಯ ಪ್ರಮಾಣದ ನಿಖರ ಮಾಹಿತಿ ಇಲ್ಲವಾದರೂ ಹೇರಳ ಪ್ರಮಾಣದಲ್ಲಿ ಕಸ ಕಂಡು ಬಮದಿದ್ದಂತು ನಿಜ. ಈ ಬಗ್ಗೆ ಬಿಬಿಎಂಪಿಯು ಸುಮಾರು ಆರು ಟನ್ ಕಸ ಸಂಗ್ರಹವಾಗಿದೆ ಎಂದು ಅಂದಾಜಿಸಿದೆ. ತ್ವರಿತಗತಿಯಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಂಡಿದೆ.

Bengaluru Chinnaswamy Stadium Around 6 Tonnes Waste Generated due RCB vs CSK Match

ಮೈದಾನದೊಳಗಿನ ತ್ಯಾಜ್ಯ ಕೆಎಸ್‌ಸಿಎ ಸಿಬ್ಬಂದಿಯಿಂದ ಸ್ವಚ್ಚ

ಪಂದ್ಯ ನಡೆಯುವ ವೇಳೆ ಸ್ಥಳದಲ್ಲಿ ಬಿಬಿಎಂಪಿ ಅಧಿಕಾರಿ ಇದ್ದರೂ ಸಹ ಕಸ ಹಾಕಿದ್ದಕ್ಕೆ ದಂಡ ವಿಧಿಸಿದರೇ ವಿನಃ ತ್ಯಾಜ್ಯ ಸುರಿಯುವುದನ್ನು ತಡೆ ಹಿಡಿಯಲಿಲ್ಲ. ಇನ್ನೂ ಮೈದಾನದ ಒಳಗೆ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಸಿಬ್ಬಂದಿ ವಿಲೇವಾರಿ ಮಾಡುತ್ತಾರೆ ಎಂದು ಸಂಸ್ಥೆ ವಕ್ತಾರರು ಮಾಹಿತಿ ನೀಡಿದರು.

ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ತ್ಯಾಜ್ಯ ಉತ್ಪಾದನೆ

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೇಟ್ ಮ್ಯಾಚ್ ನಂತರ ಪೌರಕಾರ್ಮಿಕರು ಉತ್ಪತ್ತಿಯಾಗುವ ಹೇರಳ ಕಸ ತೆರವಿನಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಾರೆ. ಆದರೆ ಈ ಭಾರಿ ಪ್ರತಿ ಸಲಕ್ಕಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಕಸ ಸಂಗ್ರಹವಾಗಿದೆ. ಬೆಂಗಳೂರಿನಲ್ಲಿ ಇದುವರೆಗೆ ನಡೆದ ಐಪಿಎಲ್ ಪಂದ್ಯಗಳಲ್ಲಿ ಇದೇ ಮೊದಲ ಭಾರಿಗೆ ಶನಿವಾರದ ಪಂದ್ಯಾವಳಿ ಬಳಿಕ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆ ಆಗಿದೆ ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ.

ಪೌರ ಕಾರ್ಮಿಕರಿಗೆ ನೆರವಾದ ಸ್ವಯಂ ಸೇವಕರು

ಇಷ್ಟೊಂದು ಪ್ರಮಾಣದಲ್ಲಿ ಕಸ ವಿಲೇವಾರಿ ಮಾಡಲು ಪೌರ ಕಾರ್ಮಿಕರ ನೆರವಿಗೆ ಸ್ವಯಂ ಸೇವಕರು ಧಾವಿಸಿದ್ದು ಕಂಡು ಬಂತು. ಸ್ವಯಂಸೇವಕರು ಬಾಟಲಿಗಳು, ಪ್ಲಾಸ್ಟಿಕ್ ಕವರ್‌ಗಳು, ಆಹಾರ ತ್ಯಾಜ್ಯ, ಬಟ್ಟೆ, ಕವರ್ ಇನ್ನಿತರ ಅನೇಕ ವಸ್ತುಗಳನ್ನು ಕ್ರಿಕೇಟ್ ಪ್ರೇಮಿಗಳು ಎಲ್ಲೆಂದರಲ್ಲಿ ಬಿಸಾಡಿದ್ದರು. ಅದೆಲ್ಲವನ್ನು ಆಯ್ದು ಟಿಪ್ಪರ್‌ಗೆ ತುಂಬಿ ಕಳುಹಿಸಲಾಯಿತು.

KSCA ಸಂಸ್ಥೆಯ ಸುಮಾರು 25 ಸ್ವಯಂಸೇವಕರು ಪೌರಕಾರ್ಮಿಕರ ಜೊತೆಗೂಡಿ ತ್ಯಾಜ್ಯ ವಿಲೇವಾರಿ ಮಾಡಿದರು ಎಂದು ಇಂಡಿಯನ್ ಪ್ಲಾಗರ್ಸ್ ಆರ್ಮಿಯ ಪ್ಲೋಗ್ ರಾಜಾ ಮಾಹಿತಿ ನೀಡಿದರು. ಕ್ರೀಡಾಂಗಣದಿಂದ ಕೂಗಳತೆ ದೂರದಲ್ಲಿನ ಕಬ್ಬನ್ ಉದ್ಯಾನದ ಮೆಟ್ರೊ ನಿಲ್ದಾಣದ ಬಳಿ ಹಾಗೂ ಕ್ರೀಡಾಂಗಣದ ಇನ್ನಿತರ ಕಡೆಗಳಲ್ಲಿ ಬಿದ್ದಿದ್ದ ತ್ಯಾಜವನ್ನು ಬಿಬಿಎಂಪಿ ಪೌರ ಕಾರ್ಮಿಕರು ಸುಮಾರು 90 ನಿಮಿಷಗಳಲ್ಲಿ ಸ್ವಚ್ಛಗೊಳಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+