ಬೆಂಗಳೂರಿನ ಈ ಭಾಗದ ಆಸ್ತಿದಾರರಿಗೆ ಬಂಪರ್: ಭೂಮಿಗೆ ಬಂಗಾರದ ಬೆಲೆ ನಿರೀಕ್ಷೆ, ಭೂಸ್ವಾಧೀನ ಪ್ರಕ್ರಿಯೆ ಜೋರು!
Bengaluru Business Corridor (BBC): ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಕೆಲವು ಆಸ್ತಿ ಮಾಲೀಕರು ಹಾಗೂ ಸ್ಥಳೀಯ ನಾಯಕರ ವಿರೋಧದ ನಡುವೆಯೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 74 ಕಿ.ಮೀ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಗಾಗಿ ಅಂತಿಮ ಹಂತದ ಭೂಸ್ವಾಧೀನವನ್ನು ಪ್ರಾರಂಭಿಸಿದೆ. ಈ ಮೂಲಕ ವರ್ಷಗಳಿಂದ ಕಗ್ಗಂಟಾಗಿರುವ ಯೋಜನೆಯಲ್ಲಿ ಮಹತ್ವದ ಪ್ರಗತಿ ಆಗುವ ಮುನ್ಸೂಚನೆ ಸಿಕ್ಕಿದೆ.
ಇನ್ನು ಬೆಂಗಳೂರಿನ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯು ಹಲವು ದಿನಗಳಿಂದ ಕಗ್ಗಂಟಾಗಿ ಉಳಿದಿದೆ. ಒಂದು ತಿಂಗಳೊಳಗೆ ಐದು ಪರಿಹಾರ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಆಸ್ತಿ ಮಾಲೀಕರನ್ನು ಕೋರಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನಾಲ್ಕು ತಿಂಗಳೊಳಗೆ ಈ ಯೋಜನೆಗೆ ಅಗತ್ಯವಾಗಿರುವ ಭೂಮಿಯಲ್ಲಿ ಕನಿಷ್ಠ 80 ಪ್ರತಿಶತವನ್ನು ಭೂಸ್ವಾಧೀನ ಮಾಡಿಕೊಳ್ಳುವ ಯೋಜನೆಯನ್ನು ರೂಪಿಸಿಕೊಂಡಿರುವುದಾಗಿ ಬಿಡಿಎ ಹೇಳಿದೆ.

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಲಿ. ಅಧ್ಯಕ್ಷರಾಗಿರುವ ಎಲ್‌ಕೆ ಅತೀಕ್ ಅವರು ಈ ಸಂಬಂಧ ಮಹತ್ವದ ಅಪ್ಡೇಟ್ಸ್ ಕೊಟ್ಟಿದ್ದಾರೆ. ವಿಶೇಷ ಭೂಸ್ವಾಧೀನ ಅಧಿಕಾರಿಗಳು (ಎಸ್‌ಎಲ್‌ಎಒಗಳು) ಸೋಮವಾರದಿಂದ ಆಸ್ತಿ ಮಾಲೀಕರೊಂದಿಗೆ ಮಾತನಾಡಿ ಚರ್ಚೆ ನಡೆಸಲಿದ್ದಾರೆ ಎಂದು ವರದಿ ಆಗಿದೆ. ಇನ್ನು ಬೆಂಗಳೂರಿನ ಪ್ರಮುಖ ಯೋಜನೆ ಜಾರಿಯಾಗುತ್ತಿರುವುದರಿಂದ ಸಹಜವಾಗಿಯೇ ಉದ್ದೇಶಿತ ಯೋಜನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದೆ.
ಆಸ್ತಿ ಮಾಲೀಕರಿಗೆ ನೀಡಲಾಗಿರುವ ಐದು ಪ್ರಮುಖ ಪರಿಹಾರಗಳ ವಿವರ: ಇನ್ನು ಬೆಂಗಳೂರಿನ ಈ ಮಹತ್ವದ ಯೋಜನೆಗೆ ಸಂಬಂಧಿಸಿದಂತೆ ಐದು ಪರಿಹಾರ ಆಯ್ಕೆಗಳನ್ನು ಕೊಡಲಾಗಿದೆ. ಅದರಲ್ಲಿ ಹಣ ಪರಿಹಾರ, ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳು (ಟಿಡಿಆರ್), ಹೆಚ್ಚುವರಿ ಮಹಡಿ ವಿಸ್ತೀರ್ಣ ಅನುಪಾತ (ಎಫ್‌ಎಆರ್), ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿರುವ ಅಭಿವೃದ್ಧಿ ಹೊಂದಿರುವ ವಸತಿ ಭೂಮಿ ಅಥವಾ ವಾಣಿಜ್ಯ ಭೂಮಿ ಎನ್ನುವ ಐದು ಪ್ರಮುಖ ಆಯ್ಕೆಗಳು ಸೇರಿವೆ ಎಂದು DH ವರದಿ ಮಾಡಿದೆ.
ಇನ್ನು ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಸ್ತಿ ಮಾಲೀಕರಿಗೆ ಐದು ಆಯ್ಕೆಗಳಲ್ಲಿ ನಿರ್ದಿಷ್ಟವಾಗಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಲಾಗಿದೆ. ಅಲ್ಲದೇ ಇದರಲ್ಲಿ 5,000 ಸಾವಿರ ಆಸ್ತಿ ಮಾಲೀಕರಿಗೆ ಈ ಸಂಬಂಧ ಸೂಚನೆ ನೀಡಲಾಗಿದೆ ಎಂದೂ ಬಿಡಿಎಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ: ಇನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆ ಕಾರ್ಯ ರೂಪಕ್ಕೆ ಬರುತ್ತಿರುವುದರಿಂದ ಈ ಭಾಗದಲ್ಲಿ ಭೂಮಿಗೆ ಬಂಗಾರ ಬೆಲೆ ಬರುವ ನಿರೀಕ್ಷೆ ಮೂಡಿದೆ. ಈಗಾಗಲೇ ಈ ಭಾಗದಲ್ಲಿ ಭೂಮಿಗೆ ಬಂಗಾರ ಬೆಲೆ ಬಂದಿದೆಯಾದರೂ, ಈ ಯೋಜನೆಗೆ ಭೂಸ್ವಾಧೀನ ಕಗ್ಗಂಟಾಗಿರುವುದರಿಂದ ರಿಯಲ್ ಎಸ್ಟೇಟ್ ಬೂಸ್ಟ್‌ಗೆ ತಡೆಯಾಗಿತ್ತು. ಇದೀಗ ಬಿಡಿಎ ಐದು ಪ್ರಮುಖ ಆಯ್ಕೆಗಳನ್ನು ಕೊಟ್ಟಿರುವುದು ರಿಯಲ್ ಎಸ್ಟೇಟ್‌ಗೆ ಹೊಸ ಬೂಸ್ಟ್ ಕೊಡಲಿದೆ ಎಂದೇ ಹೇಳಲಾಗುತ್ತಿದೆ.












Click it and Unblock the Notifications