Breaking: ಬೊಮ್ಮನಹಳ್ಳಿ ಬಳಿ ಬಸ್‌ಗೆ ಬೆಂಕಿ: ಆತಂಕ ಹೆಚ್ಚಿಸಿದ ದಟ್ಟ ಹೊಗೆ!
ಬೆಂಗಳೂರು ಅಕ್ಟೋಬರ್ 25: ಚಲಿಸುತ್ತದ ಬಸ್‌ಗೆ ಏಕಾಏಕಿ ಬೆಂಕಿ ಹೊತ್ತುಕೊಂಡ ಭೀಕರ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಬಳಿ ನಡೆದಿದೆ. ರಸ್ತೆಯಲ್ಲಿ ಭಾರೀ ಪ್ರಮಾಣದ ಹೊಗೆ ಕಾಣಿಸಿಕೊಂಡಿದ್ದು, ವಾಹನ ಸವಾರರು ವಾಹನ ಅಲ್ಲೇ ನಿಲ್ಲಿಸಿ ರಸ್ತೆ ಪಕ್ಕಕ್ಕೆ ಬಂದು ನಿಂತಿದ್ದಾರೆ. ರಸ್ತೆಯಲ್ಲಿ ದಟ್ಟ ಹೊಗೆ ಆವರಿಸಿದ್ದು ಸಾವು ನೋವುನ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.
ದಟ್ಟ ಹೊಗೆ ಆವರಿಸಿದ್ದರಿಂದ ಬಸ್ ನಂಬರ್ ಕೂಡ ಕಂಡುಬಂದಿಲ್ಲ. ಅಷ್ಟೇ ಅಲ್ಲ ಬೆಂಕಿ ಹೊತ್ತುಕೊಂಡ ಬಸ್ ಖಾಸಗಿ ಬಸಾ? ಕೆಎಸ್‌ಆರ್‌ಟಿಸಿನಾ ಅಥವಾ ಬಿಬಿಎಂಟಿಸಿನಾ? ಅನ್ನೋದು ಕೂಡ ಗೋಚರಿಸುತ್ತಿಲ್ಲ. ಅಷ್ಟೊಂದು ದಟ್ಟ ಹೊಗೆ ಬಸ್ ಸುತ್ತಲು ಆವರಿಸಿದೆ. ಇದರಿಂದಾಗಿ ಆತಂಕಗೊಂಡ ಇತರ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ಕೊಂಚ ದೂರ ಬಂದಿದ್ದಾರೆ. ಜೊತೆಗೆ ಬಸ್ ಯಾವ ಮಾರ್ಗವಾಗಿ ಚಲಿಸುತ್ತಿತ್ತು ಎನ್ನುವ ಬಗ್ಗೆ ಇನ್ನಷ್ಟು ತಿಳಿದುಬರಬೇಕಿದೆ. ಇದು ಬಿಎಂಟಿಸಿ ಬಸ್ ಇರಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಚಾರ ಪೊಲೀಸರು, 'ರೂಪೇನಗ್ರಹಾರದಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ಬೊಮ್ಮನಹಳ್ಳಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ಕಂಡು ಬಂದಿದೆ. ದಯಮಾಡಿ ಸಹಕರಿಸಿ' ಎಂದು ಟ್ವಿಟ್ ಮೂಲಕ ಹಂಚಿಕೊಂಡಿದ್ದಾರೆ.
“ಸಂಚಾರ ಸಲಹೆ/Traffic Advisory"
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) October 25, 2024
ರೂಪೇನಗ್ರಹಾರದಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ಬೊಮ್ಮನಹಳ್ಳಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ.
Slow-moving traffic due to Vehicle breakdown at Rupenagrahar towards bommanahalli junction, Kindly co-operate. pic.twitter.com/GlHzBfpXjI












Click it and Unblock the Notifications