BBMP Property Tax: ಓಟಿಎಸ್ ಯೋಜನೆ 15 ದಿನ ವಿಸ್ತರಿಸಲು ಆಗ್ರಹ
ಬೆಂಗಳೂರು, ಜುಲೈ 31: ಒಂದು ಬಾರಿ ಪರಿಹಾರ (ಓಟಿಎಸ್) ಯೋಜನೆಯನ್ನು ಬಿಬಿಎಂಪಿ ಜಾರಿಗೆ ತಂದು ಬೆಂಗಳೂರಿನ ಆಸ್ತಿ ಮಾಲೀಕರುಗಳಿಗೆ ಅನುಕೂಲ ಮಾಡಿಕೊಟ್ಟಿದ್ದು ಸ್ವಾಗತಾರ್ಹ. ತೆರಿಗೆ ಬಾಕಿ ಬರುವುದಿದೆ, ಹೀಗಾಗಿ ಇನ್ನು ಎರಡು ವಾರಗಳ ಕಾಲ ಈ ಯೋಜನೆಯನ್ನು ವಿಸ್ತರಣೆ ಮಾಡುವಂತೆ ಎಎಪಿ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸರ್ಕಾರದ ಒಂದು ಬಾರಿ ಪರಿಹಾರ (ಓಟಿಎಸ್) ಯೋಜನೆಯಿಂದಾಗಿ ಈಗಾಗಲೇ ಬೆಂಗಳೂರಿನ ಆಸ್ತಿ ಮಾಲೀಕರು ಪ್ರಯೋಜನವನ್ನು ಪಡೆದುಕೊಂಡು ತಮ್ಮ ಬಾಕಿ ಉಳಿಸಿಕೊಂಡಿದ್ದ ಆಸ್ತಿ ತೆರಿಗೆಯನ್ನು ಕಟ್ಟುತ್ತಿದ್ದಾರೆ. ಆದರೆ 2.87 ಲಕ್ಷ ಆಸ್ತಿಗಳಿಂದ 831 ಕೋಟಿ.ಗು ಹೆಚ್ಚು ತೆರಿಗೆ ಸಂಗ್ರಹಣೆ ಆಗಬೇಕಿದೆ.

ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಾಗಲೇ ಬಿಬಿಎಂಪಿ ತಿಳಿಸಿದೆ. ಇದರಲ್ಲಿ ಕೆಲವೊಂದು ಆಸ್ತಿ ಮಾಲೀಕರುಗಳಿಗೆ ವಲಯ ಘೋಷಣೆ ಹಾಗೂ ಬಿಬಿಎಂಪಿಯಿಂದ ಪುನರ್ ನಿಗದಿಪಡಿಸಿದ್ದ ಬೇಡಿಕೆ ಮೊತ್ತದ ವಿಷಯದಲ್ಲಿ ಸಾಕಷ್ಟು ಗೊಂದಲಗಳಿರುವ ಕಾರಣದಿಂದಾಗಿ ತಮ್ಮ ಆಸ್ತಿ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ ಎಂದರು.
ಈ ಕಾರಣದಿಂದಾಗಿ ತಮ್ಮ ಒಟಿಎಸ್ ಯೋಜನೆಯನ್ನು ಮತ್ತೆ ಎರಡು ವಾರಗಳು ದಿವಸಗಳ ಕಾಲ ವಿಸ್ತರಿಸಿ ಬೆಂಗಳೂರಿನ ಆಸ್ತಿ ಮಾಲೀಕರುಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಎಲ್ಲ ಬೆಂಗಳೂರಿನ ಆಸ್ತಿ ಮಾಲೀಕರುಗಳ ಪರವಾಗಿ ಸರ್ಕಾರಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಇದಲ್ಲದೆ ಬೆಂಗಳೂರಿಗರು ಕಷ್ಟಪಟ್ಟು ದುಡಿದು ತಮ್ಮ ಜೀವಿತಾವಧಿಯಲ್ಲಿನ ಉಳಿತಾಯದ ಹಣದಲ್ಲಿ ಆಸ್ತಿಗಳನ್ನು ಉಳಿಸಿಕೊಂಡಿದ್ದಾರೆ. ಇವುಗಳನ್ನು ಯಾವುದೇ ಕಾರಣಕ್ಕೂ ವಶಕ್ಕೆ ಪಡೆಯಲು ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಮಾಹಿತಿ ಕಳುಹಿಸಿ ಅಟ್ಯಾಚ್ (ಋಣ ಭಾರ) ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಅವರು ಮನವಿ ಮಾಡಿದರು.
ಜುಲೈ 31ಕ್ಕೆ ಅವಧಿ ಅಂತ್ಯ
ಬಿಬಿಎಂಪಿ ವ್ಯಾಪ್ತಿಯಲ್ಲಿ ವರ್ಷಗಳಿಂದಲೂ ಆಸ್ತಿ ತೆರಿಗೆ ಪಾವತಿ ಬಾಕಿ ಉಳಿದಿತ್ತು. ಹೀಗಾಗಿ ಅನೇಕ ಆಸ್ತಿ ಮಾಲೀಕರಿಗೆ ದಂಡ ವಿಧಿಸಲಾಗಿತ್ತು. ಇದರ ಪಾವತಿಗಾಗಿ ಬಿಬಿಎಂಪಿ ಓಟಿಎಸ್ ಯೋಜನೆ ಘೋಷಿಸಿದೆ. ಈ ಯೊಜನೆಯಡಿ ಒಂದೇ ಬಾರಿಗೆ ತೆರಿಗೆ ಪಾವತಿಸುವವರಿಗೆ ಬಡ್ಡಿಯಲ್ಲಿ ವಿನಾಯಿತಿ ಸಿಗಲಿದೆ ಎಂದು ಘೋಷಿಸಿತ್ತು. ಈ ಯೋಜನೆ ಅವಧಿ ಜುಲೈ 31ರಂದು ಅಂತ್ಯಗೊಳ್ಳಲಿದೆ. ಹೀಗಾಗಿ ಎಎಪಿ ಇನ್ನೂ ಎರಡು ವಾರ ಯೋಜನೆ ಕಾಲಾವಧಿ ವಿಸ್ತರಣೆ ಮಾಡುವಂತೆ ತಿಳಿಸಿದೆ.












Click it and Unblock the Notifications