Get Updates
Get notified of breaking news, exclusive insights, and must-see stories!

ಬಿಬಿಎಂಪಿ: ಜೈವಿಕ ಅನಿಲ ಘಟಕದ ಪ್ರಾಯೋಗಿಕ ಕಾರ್ಯಾರಂಭಕ್ಕೆ ಚಾಲನೆ

ಬೆಂಗಳೂರು, ಆಗಸ್ಟ್ 29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾನಗರದ ದಕ್ಷಿಣ ವಲಯ ಪಟ್ಟಾಭಿರಾಮನಗರದಲ್ಲಿ ಹಸಿ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸುವ ಘಟಕವನ್ನು ಉನ್ನತೀಕರಿಸಲಾಗಿದೆ. ಈ ಘಟಕೆ ಅಧಿಕೃತ ಕಾರ್ಯಾಚರಣೆಗೂ ಮೊದಲು ಮಂಗಳವಾರ ಪ್ರಾಯೋಗಿಕವಾಗಿ ಆರಂಭಕ್ಕೆ ಚಾಲನೆ ನೀಡಲಾಯಿತು.

ಬಿಬಿಎಂಪಿ ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ ಅವರು ಜೈವಿಕ ಅನಿಲ ಘಟಕ ಪರಿಶೀಲಿಸಿದ ಬಳಿಕ ಪ್ರಾಯೋಗಿಕ ಆರಂಭಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಹಸಿ ತ್ಯಾಜ್ಯವನ್ನು ಮೂಲದಲ್ಲಿಯೇ ಸಂಸ್ಕರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಇರುವ ಜೈವಿಕ ಅನಿಲ ಘಟಕಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಹಸಿ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸಿ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಅಧಿಕಾರಿಗಳಿಗೆ ಸೂಚನೆ ನೀಡಿದರು.

BBMP Officials Gave Green Signal To Pattabhiramanagara Biogas Unit Trial run

ಪಟ್ಟಾಭಿರಾಮನಗರದಲ್ಲಿ ಸ್ಥಗಿತವಾಗಿದ್ದ ಜೈವಿಕ ಅನಿಲ ಘಟಕವನ್ನು ಉನ್ನತೀಕರಿಸಲಾಗಿದೆ. ಪ್ರತಿನಿತ್ಯ 5 ಟನ್ ಹಸಿ ತ್ಯಾಜ್ಯವನ್ನು ಸ್ಕಂಸ್ಕರಣೆ ಮಾಡಲಿದೆ. ಅದರಿಂದ 300 ಕ್ಯೂಬಿಕ್ ಮೀಟರ್ ಜೈವಿಕ ಅನಿಲ ಉತ್ಪಾದಿಸಬಹುದಾಗಿದೆ. ಈ ಸಂಬಂಧ ಕೂಡಲೆ ಪ್ರಾಯೋಗಿಕವಾಗಿ ಪ್ರಾರಂಭಿಸಿ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ವಿದ್ಯುತ್ ಆಗಿ ಪರಿವರ್ತಿಸಿ ಹತ್ತಿರದ ಉದ್ಯಾನವನ ಹಾಗೂ ಬೀದಿ ದೀಪಗಳಿಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.

ಜೈವಿಕ ಅನಿಲ ಘಟಕದಿಂದ ಬರುವ ತ್ಯಾಜ್ಯದ ಸ್ಲರಿಯನ್ನು ಉದ್ಯಾನವನಗಳಿಗೆ ಬಳಸಿಕೊಳ್ಳಬಹುದಾಗಿದ್ದು, ದಕ್ಷಿಣ ವಲಯ ವ್ಯಾಪ್ತಿಯಲ್ಲಿರುವ ಉದ್ಯಾನಗಳಿಗೆ ಅದನ್ನು ಬಳಸಿಕೊಳ್ಳಲು ಸೂಚನೆ ನೀಡಿದರು.

BBMP Officials Gave Green Signal To Pattabhiramanagara Biogas Unit Trial run

ಯಡಿಯೂರಿನಲ್ಲಿ ಜೈವಿಕ ಅನಿಲ ಘಟಕ

ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ಬರುವ ಜೈವಿಕ ಅನಿಲ ಘಟಕವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಅದರ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಲಾಯಿತು. ಸದರಿ ಘಟಕವು ಪ್ರತಿನಿತ್ಯ 5 ಟನ್ ಹಸಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಲಿದೆ. ಅದರಿಂದ 300 ಕ್ಯೂಬಿಕ್ ಮೀಟರ್ ಜೈವಿಕ ಅನಿಲ ಉತ್ಪತ್ತಿಯಾಗುತ್ತಿದೆ. ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ವಿದ್ಯುತ್ ಆಗಿ ಪರಿವರ್ತಿಸಿ ಉದ್ಯಾನ ಹಾಗೂ ಬೀದಿ ಬದಿ ವಿದ್ಯುತ್ ದೀಪಗಳ ಬಳಕೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಪ್ರಕಟಣೆ ಮೂಲಕ ಮಾಹಿತಿ ನೀಡಿದರು.

ಜೈವಿಕ ಅನಿಲ ಘಟಕ ಪರಿಶೀಲನೆಯ ವೇಳೆ ಮುಖ್ಯ ಅಭಿಯಂತರರಾದ ರಾಜೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಂತೋಶ್, ಶಶಿಕಲಾ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+