Property Tax: ಆಸ್ತಿದಾರರಿಂದ ಬಿಬಿಎಂಪಿ ಭರ್ಜರಿ ಟ್ಯಾಕ್ಸ್ ಕಲೆಕ್ಷನ್!
ಬೆಂಗಳೂರಿನಲ್ಲಿನ ಆಸ್ತಿದಾರರಿಂದ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಯು ಭರ್ಜರಿ ಆದಾಯ ಸಂಗ್ರಹ ಮಾಡಿದೆ. ಬೆಂಗಳೂರಿನಲ್ಲಿ ಆಸ್ತಿದಾರರಿಂದ ಆರ್ಥಿಕ ವರ್ಷ 2024 - 2025ನೇ ಸಾಲಿನಲ್ಲಿ ಭರ್ಜರಿ ಆದಾಯ ಸಂಗ್ರಹ ಮಾಡಲಾಗಿದೆ. ಆದರೆ, ಭಾರೀ ಸರ್ಕಸ್ ಮಾಡಿದರ ಹೊರತಾಗಿಯೂ ಬಿಬಿಎಂಪಿಗೆ ಈ ಬಾರಿಯ ಪ್ರಾಪರ್ಟಿ ಟ್ಯಾಕ್ಸ್ ಟಾರ್ಗೆಟ್ ಮುಟ್ಟಲು ಸಾಧ್ಯವಾಗಿಲ್ಲ. ಇಷ್ಟಕ್ಕೂ ಬಿಬಿಎಂಪಿ ಈ ಬಾರಿ ಸಂಗ್ರಹ ಮಾಡಿದ ಆಸ್ತಿ ತೆರಿಗೆ ಮೊತ್ತ ಎಷ್ಟು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಬಾರಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಹೊಸ ದಾಖಲೆ ಬರೆದಿದೆ. ಆದರೆ, ಈ ಬಾರಿಯೂ ಟಾರ್ಗೆಟ್ ಮುಟ್ಟಲು ಸಾಧ್ಯವಾಗಿಲ್ಲ. ಈ ಬಾರಿಯೂ ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿಲ್ಲ.

ಈ ಬಾರಿ ಆಸ್ತಿದಾರರಿಗೆ ಖಡಕ್ ಎಚ್ವರಿಕೆ ಕೊಡುವುದು, ನೋಟಿಸ್ ಜಾರಿ ಹಾಗೂ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಆಸ್ತಿ ಹರಾಜು ಮಾಡುವಂತಹ ಗಂಭೀರ ಕ್ರಮಗಳನ್ನು ಅನುಸರಿಸಿತ್ತು. ಇದರ ಹೊರತಾಗಿಯೂ ಆಸ್ತಿ ತೆರಿಗೆ ಸಂಗ್ರಹ ಗುರಿ ಮುಟ್ಟುವುದಕ್ಕೆ ಬಿಬಿಎಂಪಿಯಿಂದ ಸಾಧ್ಯವಾಗಿಲ್ಲ.
2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ಬಿಬಿಎಂಪಿಯಿಂದ ಆಸ್ತಿ ತೆರಿಗೆ ಸಂಗ್ರಹ ಭರ್ಜರಿಯಾಗಿಯೇ ಆಗಿದೆ.
ನಗರದಲ್ಲಿ ಗರಿಷ್ಠ ಆಸ್ತಿ ತೆರಿಗೆಯನ್ನು ಸಂಗ್ರಹಿಸುವ ಅಭಿಯಾನವು ಮಾರ್ಚ್ 31ರ ಮಧ್ಯರಾತ್ರಿಯವರೆಗೆ ನಡೆಸಿರುವುದಾಗಿ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹ ಮಾಡುವ ಗುರಿಯು ಬರೋಬ್ಬರಿ 5,200 ಕೋಟಿ ರೂಪಾಯಿ ಇದೆ. ಆದರೆ, ಮಾರ್ಚ್ 30ರ ವೇಳೆಗೆ ಬಿಬಿಎಂಪಿ ಅಂದಾಜು 4,800 ಕೋಟಿ ರೂಪಾಯಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.
ಇನ್ನು ಕಳೆದ ಕೆಲವು ದಿನಗಳಲ್ಲಿ ಬಾಕಿ ಸಂಗ್ರಹವನ್ನು ಚೆಕ್‌ಗಳು ಹಾಗೂ ಡಿಮ್ಯಾಂಡ್ ಡ್ರಾಫ್ಟ್ (ವಿಶೇಷವಾಗಿ ಸರ್ಕಾರಿ ಬಾಕಿಗಳು) ಮೂಲಕವಾಗಿ ಮಾಡಲಾಗಿದೆ. ಇವುಗಳನ್ನು ಇನ್ನೂ ಒಟ್ಟಾರೆ ಆಸ್ತಿತೆರಿಗೆ ಸಂಗ್ರಹದಲ್ಲಿ ಸಂಪೂರ್ಣವಾಗಿ ಲೆಕ್ಕ ಮಾಡಿಲ್ಲ ಎಂದು ಹೇಳಲಾಗಿದೆ.
ಈ ಮೊತ್ತವನ್ನು ಏಪ್ರಿಲ್ ಮೊದಲ ವಾರದಲ್ಲಿ ಲೆಕ್ಕಹಾಕುವ ಸಾಧ್ಯತೆ ಇದೆ.
ಬಿಬಿಎಂಪಿಗೆ 2024-25 ರ ಹಣಕಾಸು ವರ್ಷದ ಒಟ್ಟು ತೆರಿಗೆ ಸಂಗ್ರಹದ ಸ್ಪಷ್ಟ ಚಿತ್ರಣವು ಏಪ್ರಿಲ್ 2 ಇಲ್ಲವೇ ಏಪ್ರಿಲ್ 3ರ ವೇಳೆಗೆ ಸಿಗಲಿದೆ ಎಂದು ಹೇಳಲಾಗಿದೆ.
ಆದಾಯ 2024-25 ರ ಹಣಕಾಸು ವರ್ಷದ ಒಟ್ಟು ಸಂಗ್ರಹದ ಸ್ಪಷ್ಟ ಚಿತ್ರಣವು ಏಪ್ರಿಲ್ 2 ಅಥವಾ 3, 2025 ರ ವೇಳೆಗೆ ಸಿಗಲಿದೆ. ಆದರೆ ಈ ಮೊತ್ತವನ್ನು ಕೂಡಿಸಿದರೂ ಬಿಬಿಎಂಪಿಯ ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಮುಟ್ಟುವ ಸಾಧ್ಯತೆ ಕಡಿಮೆ ಎಂದೇ ಅಂದಾಜಿಸಲಾಗಿದೆ. ಒಂದೊಮ್ಮೆ ಬಿಬಿಎಂಪಿಯು ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಮುಟ್ಟಿದರೆ ಇದು ಹೊಸ ದಾಖಲೆಯನ್ನೇ ಸೃಷ್ಟಿ ಮಾಡಲಿದೆ.












Click it and Unblock the Notifications