Bengaluru Property: ಅಧಿಕ ತ್ಯಾಜ್ಯ ಉತ್ಪಾದಿಸುವ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಇಷ್ಟು ಮಾಡಿ ಲಾಭ ಪಡೆಯಿರಿ
ಬೆಂಗಳೂರು, ಏಪ್ರಿಲ್ 20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇತ್ತೀಚೆಗೆ ಗಾರ್ಬೇಜ್ ಸೆಸ್ ಹೆಚ್ಚಳ ಮಾಡಿದೆ. ಇದರ ಬೆನ್ನಲ್ಲೆ ತರಿಗೆ ಪಾವತಿ ವಿಧಾನದಲ್ಲಿ ಹೊಸ ವ್ಯವಸ್ಥೆ (ಆಯ್ಕೆ) ಪರಿಚಯಿಸಿದೆ. ಇರಿಂದಾಗಿ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಆಸ್ತಿ ಮಾಲೀಕರ ಪತ್ತೆ ಸುಲಭವಾಗಲಿದೆ. ಇಷ್ಟು ಮಾತ್ರವಲ್ಲದೇ ಉತ್ಪತ್ತಿ ಆಗುವ ತ್ಯಾಜ್ಯ ವಿಲೇವಾರಿಗೆ, ನಗರದ ಸ್ವಚ್ಚತೆಗೆ ಹೊಸ ಕ್ರಮ ಜಾರಿಯಾದಂತಾಗುತ್ತದೆ.
ಸದ್ಯ ಬೆಂಗಳೂರಿನ ಆಸ್ತಿ ತೆರಿಗೆಯನ್ನು ಮಾಲೀಕರ ಪಾವತಿಸುವ ವಿಧಾನದ ಜೊತೆಗೆ ಗಾರ್ಬೇಜ್ ಸೆಸ್ ಕಟ್ಟುತ್ತಾರೆ. ಹೀಗೆ ಆಸ್ತಿ ತೆರಿಗೆ ಪಾವತಿಯಲ್ಲಿ ಒಂದು ಹೊಸ ಆಯ್ಕೆಯನ್ನು ಒಂದು ವಾರದ ಹಿಂದೆ ಬಿಬಿಎಂಪಿಯ ಕಂದಾಯ ವಿಭಾಗವು ಪರಿಚಯಿಸಿತು. ಇದು ಕೆಲವು ಆಸ್ತಿ ಮಾಲೀಕರನ್ನು ಸ್ವಯಂ ಗುರುತಿಸಿಕೊಳ್ಳುವಂತೆ ಮಾಡುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಪಾವತಿಸುವ ವೇಳೆ ಆಸ್ತಿ ಮಾಲೀಕರು ಈ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಬೃಹತ್ ತ್ಯಾಜ್ಯ ಉತ್ಪಾದಕರು ಎಂದು ಸ್ವಯಂ ಗುರುತಿಸಿಕೊಳ್ಳುವಂತಾಗುತ್ತದೆ. ಇದರಿಂದ ಆಸ್ತಿ ಮಾಲೀಕರಿಗೂ ಕೊಂಚ ವಿನಾಯಿತಿ ಸಿಗಲಿವೆ. ನಗರಾದ್ಯಂತ ತ್ಯಾಜ್ಯ ಸಂಸ್ಕರಣೆ, ವಿಲೇವಾರಿ ಜವಾಬ್ದಾರಿ ನಿರ್ವಹಿಸಲು, ಆಸ್ತಿ ಮಾಲೀಕರಿಗೆ ಬಳಕೆದಾರ ಶುಲ್ಕದಿಂದ ವಿನಾಯಿತಿ ನೀಡಲು ಈ ಆಯ್ಕೆ ಪರಿಚಯಿಸಲಾಗಿದೆ.
ತೆರಿಗೆ ಪಾವತಿಯ ಆ ಆಯ್ಕೆ ಯಾವುದು?
ಬಿಬಿಎಂಪಿಯ ತೆರಿಗೆ ಪಾವತಿಸುವಾಗ ಅಲ್ಲಿನ ಪೋರ್ಟಲ್‌ನಲ್ಲಿ ಡ್ರಾಪ್‌ಡೌನ್ ಆಯ್ಕೆ ಕೊಡಲಾಗಿದೆ. ಕಟ್ಟಡಗಳು, ಮನೆ, ವಾಣಿಜ್ಯ ಸೇರಿ ಆಸ್ತಿ ಮಾಲೀಕರು ಬೃಹತ್ ತ್ಯಾಜ್ಯ ಉತ್ಪಾದಕರ ವರ್ಗಕ್ಕೆ ಸೇರುತ್ತೇವಾ? ಎಂದು ಅವರು ಸ್ವಯಂ ಘೊಷಿಸಬೇಕು. ಅದಕ್ಕಾಗಿ ಆ ಆಯ್ಕೆಯನ್ನು ಆಯ್ದುಕೊಳ್ಳಬೇಕು.

ಆಸ್ತಿ ಮಾಲೀಕರಿಗೆ ಏನು ಲಾಭ, ರಿಯಾಯಿತಿ
ಬಿಬಿಎಂಪಿ ತ್ಯಾಜ್ಯ ಉತ್ಪಾದಕರನ್ನು ವಗೀಕರಣ ಮಾಡಿದೆ. ಅಂದರೆ 100 ಅಥವಾ ಹೆಚ್ಚಿನ ವಸತಿ ಘಟಕಗಳು ಇರುವ ಪ್ರದೇಶ (ಸಂಕಿರ್ಣ) ಅಥವಾ 5,000 ಚದರ ಅಡಿಗಿಂತ ಹೆಚ್ಚಿನ ಅಳತೆ ಹೊಂದಿರುವ ಆಸ್ತಿಗಳು ಪ್ರತಿದಿನ 100 ಕೆ.ಜಿ. ಇಲ್ಲವೇ ಅದಕ್ಕಿಂತ ಅಧಿಕ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವ ಆಸ್ತಿಗಳ ಪಟ್ಟಿಗೆ ಸೇರಿಸಲಾಗಿದೆ. ತಮಗೆ ಸೂಚಿತಿ ಆಯ್ಕೆಗಳನ್ನು ಆಸ್ತಿ ಮಾಲೀಕರು ಮಾಡಿಕೊಳ್ಳಬೇಕು. ತಾವು ಅಧಿಕ ಪ್ರಮಾಣದ ತ್ಯಾಜ್ಯ ಉತ್ಪಾದಕರು ಎಂದು ಘೋಷಿಸುವ ಆಸ್ತಿ ಮಾಲೀಕರಿಗೆ ಏಪ್ರಿಲ್ 1ರಿಂದ ಜಾರಿ ಬಂದ ಬಳಕೆದಾರರ ಶುಲ್ಕದಿಂದ ವಿನಾಯಿತಿ ಸಿಗಲಿದೆ.
ಬಿಬಿಎಂಪಿ ಮುಂದೆ ತ್ಯಾಜ್ಯ ನಿರ್ವಹಣೆ ಸವಾಲು
ತ್ಯಾಜ್ಯ ಸಂಸ್ಕರಣೆ ಉತ್ತೇಜನಕ್ಕೆ ಬಿಬಿಎಂಪಿ ನಿರ್ಧರಿಸಿದ್ದು, ಆ ಸಂಬಂಧ ಸೂಕ್ತ ಕ್ರಮ ಜಾರಿಗೆ ತಂದಿದೆ. ಹೆಚ್ಚಿನ ಪ್ರಮಾಣದ ತ್ಯಾಜ್ಯವನ್ನು ನಿರ್ವಹಿಸುವಲ್ಲಿ ಸಂಕೀರ್ಣತೆ ಬಗ್ಗೆ ಹೆಚ್ಚಿನ ಗಮನಹರಿಸಿದೆ. ನಗರದಲ್ಲಿ ಬೃಹತ್ ತ್ಯಾಜ್ಯ ನಿರ್ವಹಣೆ ಸವಾಲನ್ನು ಎದುರಿಸಲು ಈ ಆಯ್ಕೆ ಪರಿಚಯಿಸಿದೆ. ನಿಯಮಿತ ಮನೆಯ ತ್ಯಾಜ್ಯವನ್ನು ನಿರ್ವಹಿಸುವ ಹೊರೆಯನ್ನು ಹೆಚ್ಚಿಸುತ್ತದೆ. ಆಸ್ತಿ ಮಾಲೀಕರಿಗೆ ಒಂದಷ್ಟು ಜವಾಬ್ದಾರಿ ಬರುತ್ತದೆ. ಅದಕ್ಕಾಗಿ ಅವರು ರಿಯಾಯಿತಿ ಪಡೆಯುತ್ತಾರೆ.
ಈ ಹೊಸ ವಿಧಾನದಲ್ಲಿ ಆಸ್ತಿ ಮಾಲೀಕರ ಸೂಕ್ತವಾಗಿ ಕಸವನ್ನು ಸಂಸ್ಕರಣೆಗೆ ನೀಡಬೇಕಾಗುತ್ತದೆ. ಯಾವುದೇ ರೀತಿಯ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ. ಸುಳ್ಳು ಘೋಷಣೆ ಮಾಡುವವರ ವಿರುದ್ಧ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್‌ಡಬ್ಲ್ಯೂಎಂಎಲ್) ಆಗಾಗ ತಪಾಸಣೆ ಮಾಡುತ್ತದೆ. ಬಳಿಕ ಅದರ ಅಂಶಗಳನ್ನು ಬಿಬಿಎಂಪಿಗೆ ನೀಡುತ್ತದೆ. ಸಿಕ್ಕ ಮಾಹಿತಿ ಮೇರೆಗೆ ಬಿಬಿಎಂಪಿ ಸೂಕ್ತ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತದೆ.
ತ್ಯಾಜ್ಯ ಸಂಸ್ಕರಣಾ ವಿಧಾನ, ಸಂಸ್ಕೃರಿಸಿದ ತ್ಯಾಜ್ಯವನ್ನು ಸಂಸ್ಕರಣಾಗಾರಗಳಿಗೆ ಇಲ್ಲಿವೆ ಪಾಲಿಕೆ ಜೊತೆಗೆ ಒಪ್ಪಂದ ಮಾಡಿಕೊಂಡು ತ್ಯಾಜ ಸಂಗ್ರಹಗಾರರಿಗೆ ನೀಡಲಾಗುತ್ತದೆಯೇ ಎಂದು ಮೇಲ್ವಿಚಾರಣೆ ಮಾಡಲಾಗುತ್ತದೆ. ತ್ಯಾಜ್ಯ ನಿರ್ವಹಣೆಯಲ್ಲಿ ಒಪ್ಪಂದಂತೆ ನಡೆಯದಿದ್ದರೆ, ನಿಯಮ ಉಲ್ಲಂಘಿಸಿದರೆ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪ್ಲಾನ್ ಮಾಡಿಕೊಂಡಿದೆ.












Click it and Unblock the Notifications