• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಕೊರೊನಾ ಸೋಂಕು?

|
Google Oneindia Kannada News

ಬೆಂಗಳೂರು, ಜುಲೈ 2: ಕೊವಿಡ್19 ವಿರುದ್ಧ ಹಗಲಿರುಳು ಹೋರಾಡುತ್ತಿರುವ ಜಿಲ್ಲಾಧಿಕಾರಿಗೆ ಕರೋನಾ ಮಹಾಮಾರಿ ವಕ್ಕರಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.

   Bhuvaneswar Kumar wants RajKumar Rao to play in his biopic | Oneindia Kannada

   ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಬೆಂಗಳೂರು ನಗರ ಡಿಸಿ ಕಚೇರಿಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ನೆಲಮಂಗಲ ತಹಶೀಲ್ದಾರ್ ಸಹ ಭಾಗವಹಿಸಿದ್ದರು. ಈ ಮೊದಲು ತಹಶೀಲ್ದಾರ್ ಗೆ ಸೋಂಕು ದೃಢಪಟ್ಟಿದೆ. ಬಹುಶಃ ತಹಶೀಲ್ದಾರ್ ಅವರಿಂದಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಸೋಂಕು ತಗುಲಿರಬಹುದು ಎಂಬ ಆತಂಕ ಕಾಡಿದೆ.

   ಎಲೆಕ್ಟ್ರಾನಿಕ್ ಸಿಟಿ RTO ಕಚೇರಿಯಲ್ಲಿ ಕೊರೊನಾದಿಂದ ಸಿಬ್ಬಂದಿ ಸಾವುಎಲೆಕ್ಟ್ರಾನಿಕ್ ಸಿಟಿ RTO ಕಚೇರಿಯಲ್ಲಿ ಕೊರೊನಾದಿಂದ ಸಿಬ್ಬಂದಿ ಸಾವು

   ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಡಿಸಿ ಕಚೇರಿಯನ್ನು ಎರಡು ದಿನಗಳ ಮಟ್ಟಿಗೆ ಸೀಲ್‌ಡೌನ್ ಮಾಡಲು ಚಿಂತನೆ ನಡೆಸಲಾಗಿದೆ.

   ಅಂದ್ಹಾಗೆ, ಪಿ.ಎನ್.ರವೀಂದ್ರ ಅವರು ಕೆಐಎಎಲ್ ಏರ್ಪೋರ್ಟ್ ನಲ್ಲಿ ಹಗಲಿರುಳು ಬೀಡು ಬಿಟ್ಟು ಶ್ರಮಿಸಿದ್ದರು. ದೇಶ, ವಿದೇಶ ಪ್ರಯಾಣಿಕರಿಗೆ ಸೂಕ್ತ ಕ್ವಾರಂಟೈನ್ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಇಂತಹ ದಕ್ಷ ಜಿಲ್ಲಾಧಿಕಾರಿಗೆ ಪಾಸಿಟಿವ್ ಬಂದಿರುವುದು ಬಹಳಷ್ಟು ಆತಂಕಕ್ಕೆ ಕಾರಣವಾಗಿದೆ.

   ಜಿಲ್ಲಾಧಿಕಾರಿ ಕುಟುಂಬಸ್ಥರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಡಿಸಿ ಪಿ.ಎನ್.ರವೀಂದ್ರ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಆಗ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

   English summary
   Bangalore Rural DC P N Ravindra tests positive for coronavirus. he was leading in fight against COVID pandemic in bengaluru rural.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X