ತೊಡೆ ಕಚ್ಚಿದ್ದ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಗೆ ಜಾಮೀನು
ಬೆಂಗಳೂರು, ಜುಲೈ 24 : ಸಹ ನಟ ಭುವನ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು 2ನೇ ಎಸಿಜೆಎಂ ಕೋರ್ಟ್ ಸೋಮವಾರ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಗೆ ಷರತ್ತುಬದ್ಧ ಜಾಮೀನು ನೀಡಿದೆ.
'ನಾನು ಮತ್ತು ಸಂಜು' ಧಾರವಾಹಿ ಚಿತ್ರೀಕರಣದ ವೇಳೆ ಸಹ ನಟ ಭುವನ್ ಅವರ ತೊಡೆಯನ್ನ ಕಚ್ಚಿ ಹಲ್ಲೆ ಮಾಡಿದ್ದರು. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ನಟ ಭುವನ್ ನಿನ್ನೆ (ಜುಲೈ 23) ದೂರು ದಾಖಲಿಸಿದ್ದರು.

ಪೊಲೀಸರ ಕೈಗೆ ಸಿಗದ ಪ್ರಥಮ್ ಇಂದು (ಜುಲೈ 24) ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿ ನಿರೀಕ್ಷಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಇದನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಐದು ಸಾವಿರ ರು. ಶೂರಿಟಿ ನೀಡಬೇಕು ಹಾಗೂ ಜುಲೈ 31ಕ್ಕೆ ವಿಚಾರಣೆಗೆ ಹಾಜರಾಗಬೇಕೆಂದು ಕೋರ್ಟ್ ತಿಳಿಸಿದೆ.












Click it and Unblock the Notifications