ಜಾತಿ ನಿಂದನೆ ಆರೋಪ: "ವಕೀಲ್ ಸಾಬ್" ಕೆ.ಎನ್ ಜಗದೀಶ್ ಅಂಧರ್!
ಜಾತಿ ನಿಂದನೆ ಪ್ರಕರಣದಲ್ಲಿ ಲಾಯರ್ ಕೆ.ಎನ್ ಜಗದೀಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗದೆ ಓಡಾಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಲಾಯರ್ ಕೆ.ಎನ್ ಜಗದೀಶ್ ಅವರನ್ನು ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ.
ಜಾತಿ ನಿಂದನೆ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಈ ಹಿಂದೆಯೇ ಅಂದರೆ 2022ನೇ ಸಾಲಿನಲ್ಲಿಯೇ ಈ ಪ್ರಕರಣ ದಾಖಲಾಗಿತ್ತು ಎನ್ನಲಾಗುತ್ತಿದ್ದು, ಕೋರ್ಟ್‌ಗೆ ಲಾಯರ್ ಬಂದಿರಲಿಲ್ಲ ಎಂದು ಹೇಳಲಾಗಿದೆ.

ಹಲವು ಬಾರಿ ನೋಟಿಸ್ ನೀಡಿದರೂ ಹಾಜರಾಗಿರಲಿಲ್ಲ ?
ಲಾಯರ್ ಜಗದೀಶ್ ಅವರಿಗೆ ನ್ಯಾಯಲಯವು ಹಲವು ಬಾರಿ ನೋಟಿಸ್ ಜಾರಿ ಮಾಡಿದರೂ, ನ್ಯಾಯಾಲಯಕ್ಕೆ ಜಗದೀಶ್ ಹಾಜರಾಗಿರಲಿಲ್ಲ. ಕೋರ್ಟ್‌ನಿಂದ ಹಲವು ಬಾರಿ ನೋಟಿಸ್ ಬಂದರೂ ಕೋರ್ಟ್‌ಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ್ದರು. ಹೀಗಾಗಿ ಕೋರ್ಟ್ ಜಗದೀಶ್ ಅವರ ಬಂಧನಕ್ಕೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ ಎನ್ನಲಾಗಿದೆ.
ಹಲವು ಪ್ರಕರಣದಲ್ಲಿ ಪ್ರಮುಖ ವಾದ ಮಂಡನೆ
ಇತ್ತೀಚಿನ ವರ್ಷಗಳಲ್ಲಿ ಜಗದೀಶ್ ಅವರು ಹಲವು ಪ್ರಕರಣಗಳಲ್ಲಿ ವಕೀಲರಾಗಿದ್ದರು. ಕರ್ನಾಟಕದ ಪ್ರಮುಖ ಸಚಿವರೊಬ್ಬರ ಲೈಂಗಿಕ ಪ್ರಕರಣ, ಮಾಜಿ ಮುಖ್ಯಮಂತ್ರಿಯೊಬ್ಬರ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸ್ಪೋಟಕ ಮಾಹಿತಿ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೇ ಹಲವು ದಾಖಲೆಗಳ ಬಗ್ಗೆಯೂ ಜಗದೀಶ್ ಮಾತನಾಡಿದ್ದು ಇದೆ.
ಈಚೆಗೆ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಸ್ವಾಮೀಜಿಯೊಬ್ಬರ ಬಗ್ಗೆ ಗಂಭೀರವಾದ ಆರೋಪವನ್ನು ಮಾಡಿದ್ದರು. ಈ ಆರೋಪದ ನಂತರ ಆ ಮಾಜಿ ಮುಖ್ಯಮಂತ್ರಿಯು ಕೋರ್ಟ್ ಮೊರೆ ಸಹ ಹೋಗಿದ್ದಾರೆ. ಈ ಹಿಂದೆ ಕರ್ನಾಟಕದ ಪ್ರಮುಖ ನಟ, ನಟಿಯರು ಹಾಗೂ ರಾಜಕಾರಣಿಗಳ ಬಗ್ಗೆಯೂ ಜಗದೀಶ್ ಅವರು ಮಾತನಾಡಿದ್ದು ಇದೆ.
ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದ ಜಗದೀಶ್
ವಕೀಲ್ ಸಾಬ್ ಎಂದೇ ಲಾಯರ್ ಜಗದೀಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇವರ ವಿಡಿಯೋಗಳು ವೈರಲ್ ಆಗುತ್ತಿದ್ದು, ಸಾವಿರಾರು ಜನ ಇವರನ್ನು ಫಾಲೋ ಸಹ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಜಗದೀಶ್ ಅವರನ್ನು ಕೆಲವರು ವಕೀಲ್ ಸಾಬ್ ಎಂದು ಹೇಳುತ್ತಿದ್ದರು. ಕೆಲವೊಮ್ಮೆ ಇವರ ಮಾತುಗಳನ್ನು ಟ್ರೋಲ್ ಪೇಜ್‌ಗಳು ಟ್ರೋಮ್ ಮಾಡಿದ್ದೂ ಇದೆ. ಟ್ರೋಲ್, ಮೀಮ್ಸ್‌ಗಳ ಮೂಲಕವೂ ಜಗದೀಶ್ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದರು.
ಕೆಲವೊಮ್ಮೆ ಮಾಧ್ಯಮಗಳಿಗೂ ಇವರು ಗಂಭೀರವಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದ ಉದಾಹರಣೆಗಳು ಇವೆ. ಇದೀಗ ಅವರೇ ಕೋರ್ಟ್‌ನ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಗಂಭೀರವಾದ ಆರೋಪ ಕೇಳಿಬಂದಿದೆ.
ಗೋವಾದಿಂದ ಹಿಂದಿರುಗುವಾಗ ಬಂಧನ
ಲಾಯರ್ ಜಗದೀಶ್ ಅವರು ಗುರುವಾರ ರಾತ್ರಿ ಗೋವಾದಿಂದ ಕರ್ನಾಟಕಕ್ಕೆ ಹಿಂದಿರುಗುವ ಸಂದರ್ಭದಲ್ಲಿ ತಡರಾತ್ರಿ ಲಾಯರ್ ಜಗದೀಶ್ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಈಚೆಗೂ ಸಹ ಜಗದೀಶ್ ಪ್ರಮುಖ ರಾಜಕಾರಣಿಯೊಬ್ಬರ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದು ವರದಿಯಾಗಿತ್ತು.












Click it and Unblock the Notifications